Railway Jobs 2024: ರೈಲ್ವೇಯಲ್ಲಿ 9000 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಫುಲ್ ಡೀಟೈಲ್ಸ್

Railway Jobs 2024: ನೀವು ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ನಿಮಗಾಗಿ ಇಲ್ಲಿದೆ ಗುಡ್ ನ್ಯೂಸ್. ಭಾರತೀಯ ರೈಲ್ವೆಯಲ್ಲಿ ತಂತ್ರಜ್ಞರ ಹುದ್ದೆಗಳಿಗೆ ಬಂಪರ್ ನೇಮಕಾತಿ ಮಾದಳಗುತ್ತಿದೆ. ಇದಕ್ಕಾಗಿ, ರೈಲ್ವೆ ನೇಮಕಾತಿ ಮಂಡಳಿ (RRB) ಕಿರು ಸೂಚನೆ ಯನ್ನು ನೀಡಿದೆ.   

Written by - Yashaswini V | Last Updated : Feb 15, 2024, 07:57 AM IST
  • ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 9000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
  • ಈ ನೇಮಕಾತಿಗಾಗಿ ಮಾರ್ಚ್ 9, 2024 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ
  • ಅಭ್ಯರ್ಥಿಗಳು ಏಪ್ರಿಲ್ 8, 2024 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
Railway Jobs 2024: ರೈಲ್ವೇಯಲ್ಲಿ 9000 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಫುಲ್ ಡೀಟೈಲ್ಸ್  title=

Jobs In Railways: ನೀವು ರೈಲ್ವೆ ಇಲಾಖೆಯಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ನಿಮಗಾಗಿ ಇಲ್ಲಿದೆ ಶುಭ ಸುದ್ಧಿ. ಹೌದು, ಭಾರತೀಯ ರೈಲ್ವೇಯಲ್ಲಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್ ಇದೆ. ಭಾರತೀಯ ರೈಲ್ವೆಯಲ್ಲಿ ತಂತ್ರಜ್ಞರ ಹುದ್ದೆಗಳಿಗೆ ಬಂಪರ್ ನೇಮಕಾತಿ ನಡೆಯುತ್ತಿದ್ದು, ಇದಕ್ಕಾಗಿ ರೈಲ್ವೆ ನೇಮಕಾತಿ ಮಂಡಳಿ (RRB) ಕಿರು ಸೂಚನೆ ನೀಡಿದೆ.

9000 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ: 
ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 9000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಗಾಗಿ ಮಾರ್ಚ್ 9, 2024  ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಅಭ್ಯರ್ಥಿಗಳು ಏಪ್ರಿಲ್ 8, 2024 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಯಾವ ಹುದ್ದೆಗಳು ಖಾಲಿ ಇವೆ? ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸಬಹುದು ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ. 

ಯಾವ ಹುದ್ದೆಗಳು ಖಾಲಿ ಇವೆ? 
ರೈಲ್ವೆ ಮಂಡಳಿಯ ಅಧಿಸೂಚನೆಯ ಪ್ರಕಾರ, ರೈಲ್ವೇಯು ಟೆಕ್ನಿಷಿಯನ್ ಗ್ರೇಡ್ 1 ಸಿಗ್ನಲ್‌ನಲ್ಲಿ 1100 ಹುದ್ದೆಗಳಿಗೆ ಮತ್ತು ಟೆಕ್ನಿಷಿಯನ್ ಗ್ರೇಡ್ 3 ನಲ್ಲಿ 7900 ಹುದ್ದೆಗಳಿಗೆ ನೇಮಕಾತಿಯನ್ನು ಹೊರಡಿಸಿದೆ. ಈ ಮೂಲಕ ಒಟ್ಟು 9000 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ- ಸಹಾಯಕ ಪ್ರಾಧ್ಯಾಪಕರ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನ

ಭಾರತೀಯ ರೈಲ್ವೇಯ ಈ ವಿಭಾಗಗಳಲ್ಲಿ ನೇಮಕಾತಿ: 
ಖಾಲಿ ಇರುವ 9000 ತಂತ್ರಜ್ಞರ ಹುದ್ದೆಗೆ ದೇಶದ ವಿವಿಧ ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ. ಇವುಗಳಲ್ಲಿ  ಅಹಮದಾಬಾದ್, ಅಜ್ಮೀರ್, ಬೆಂಗಳೂರು, ಭೋಪಾಲ್, ಭುವನೇಶ್ವರ್, ಬಿಲಾಸ್‌ಪುರ್, ಚಂಡೀಗಢ, ಗೋರಖ್‌ಪುರ, ಗುವಾಹಟಿ, ಜಮ್ಮು ಮತ್ತು ಶ್ರೀನಗರ, ಕೋಲ್ಕತ್ತಾ, ಮುಂಬೈ, ಮುಜಾಫರ್‌ಪುರ, ಪಾಟ್ನಾ, ಪ್ರಯಾಗ್‌ರಾಜ್, ರಾಂಚಿ, ಸಿಕಂದರಾಬಾದ್, ಸಿಲಿಗುರಿ ಮತ್ತು ತಿರುವನಂತಪುರಂ ಸೇರಿವೆ ಎಂದು ರೈಲ್ವೆ ಇಲಾಖೆ ಮಾಹಿತಿ ಒದಗಿಸಿದೆ. 

ವೇತನ: 
ಅಧಿಸೂಚನೆಯ ಪ್ರಕಾರ, ಟೆಕ್ನಿಷಿಯನ್ ಗ್ರೇಡ್ 1 ರ ಅಭ್ಯರ್ಥಿಗಳಿಗೆ ಮಾಸಿಕ 29,200 ರೂ. ಮತ್ತು ಟೆಕ್ನಿಷಿಯನ್ ಗ್ರೇಡ್ 3 ರ ಅಭ್ಯರ್ಥಿಗಳು ತಿಂಗಳಿಗೆ 19,900 ರೂಗಳ. ವೇತನವನ್ನು ಪಡೆಯುತ್ತಾರೆ. 

ವಯೋಮಿತಿ: 
ಟೆಕ್ನಿಷಿಯನ್ ಗ್ರೇಡ್ 1 ಕ್ಕೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು ಜುಲೈ 1, 2024 ಕ್ಕೆ 36 ವರ್ಷಗಳು ಮತ್ತು ತಂತ್ರಜ್ಞ ಗ್ರೇಡ್ 3 ಗೆ ಗರಿಷ್ಠ 33 ವರ್ಷಗಳು ಎಂದು ನಿರ್ಧರಿಸಲಾಗಿದೆ ಎಂದು ರೈಲ್ವೆ ಮಂಡಳಿ ಮಾಹಿತಿ ನೀಡಿದೆ. 

ಇದನ್ನೂ ಓದಿ- GK Facts: ಹಕ್ಕಿಗಳ ದಂಡು ಯಾವಾಗಲೂ V ಶೇಪ್ ನಲ್ಲಿಯೇ ಏಕೆ ಹಾರಾಟ ನಡೆಸುತ್ತವೆ ಗೊತ್ತಾ?

ಅರ್ಜಿ ಸಲ್ಲಿಸುವುದು ಹೇಗೆ? 
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಅಭ್ಯರ್ಥಿಗಳು, ಮೊದಲು ಅಧಿಕೃತ ವೆಬ್‌ಸೈಟ್ https://indianrailways.gov.in/ ಗೆ ಭೇಟಿ ನೀಡಬೇಕು . ಮುಖಪುಟದಲ್ಲಿ ನೀವು ನೇಮಕಾತಿ ಆಯ್ಕೆಯನ್ನು ನೋಡಬಹುದು. ಅದರ ನಂತರ ನೀವು ಅರ್ಜಿ ಸಲ್ಲಿಸಲು ಬಯಸುವ ವಿಭಾಗದ ಮೇಲೆ ಕ್ಲಿಕ್ ಮಾಡಬಹುದು. ಇಲ್ಲಿ ನೀವು ರೈಲ್ವೇ ತಂತ್ರಜ್ಞರ ನೇಮಕಾತಿ 2024 ಎಂಬ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News