ನವದೆಹಲಿ: ಭಾರತೀಯ ರೈಲ್ವೆ ಇಲಾಖೆ 10ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ಗೆ ಅವಕಾಶ ನೀಡುತ್ತಿದೆ. ವಿಶೇಷವೆಂದರೆ ಇದರಲ್ಲಿ ಗರಿಷ್ಠ 56 ಸಾವಿರ ರೂ.ಗಳ ವೇತನ ದೊರೆಯಲಿದೆ. ರೈಲ್ವೆ ನೇಮಕಾತಿ ಸೆಲ್ ಮತ್ತು ಉತ್ತರ ಮಧ್ಯ ರೈಲ್ವೆ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಕೋರಿದೆ. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ನೀವು ಈ ಪೋಸ್ಟ್ಗಳಿಗೆ ಅರ್ಜಿ ಸಲ್ಲಿಸ ಬಯಸಿದರೆ ಭಾರತೀಯ ರೈಲ್ವೆಯ ಅಧಿಕೃತ ವೆಬ್ಸೈಟ್ rrcpryj.orgಗೆ ಹೋಗಿ ಮತ್ತು ಫಾರ್ಮ್ ಅನ್ನು ಭರ್ತಿ ಮಾಡಬೇಕು. ರೈಲ್ವೆಯಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಜುಲೈ 2ರಿಂದ ಪ್ರಾರಂಭವಾಗಿದೆ. ಇದು ಆಗಸ್ಟ್ 1ರವರೆಗೆ ನಡೆಯಲಿದ್ದು, ನೀವು ಆಗಸ್ಟ್ 1ರ ಮೊದಲು ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ: Ration Card Rules: ನೀವೂ ಈ ತಪ್ಪುಗಳನ್ನು ಮಾಡಿದರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
ರೈಲ್ವೆ ನೇಮಕಾತಿ 2022ರ ಪ್ರಮುಖ ದಿನಾಂಕಗಳು
ಆನ್ಲೈನ್ ಅರ್ಜಿಯ ಪ್ರಾರಂಭ ದಿನಾಂಕ - ಜುಲೈ 2, 2022
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ - ಆಗಸ್ಟ್ 1, 2022
ಒಟ್ಟು ಹುದ್ದೆಗಳ ಸಂಖ್ಯೆ- 1659
ಪ್ರಯಾಗರಾಜ್ನಲ್ಲಿನ ಹುದ್ದೆಗಳ ಸಂಖ್ಯೆ- 703
ಝಾನ್ಸಿಯಲ್ಲಿನ ಹುದ್ದೆಗಳ ಸಂಖ್ಯೆ- 660
ಆಗ್ರಾದಲ್ಲಿ ಹುದ್ದೆಗಳ ಸಂಖ್ಯೆ- 296
ರೈಲ್ವೆ ಅಪ್ರೆಂಟಿಸ್ಗೆ ಅರ್ಹತೆ
ರೈಲ್ವೆ ನೇಮಕಾತಿ ಸೆಲ್ (RRC) ಮತ್ತು ಉತ್ತರ ಮಧ್ಯ ರೈಲ್ವೆ (NCR) ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 50% ಅಂಕಗಳೊಂದಿಗೆ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಇದರೊಂದಿಗೆ ಅಭ್ಯರ್ಥಿಯು ಸಂಬಂಧಿತ ಟ್ರೇಡ್ನಲ್ಲಿ ಡಿಪ್ಲೊಮಾವನ್ನು ಹೊಂದಿರಬೇಕು.
ಇದನ್ನೂ ಓದಿ: Google: ಮದುವೆ ಬಳಿಕ ಮಹಿಳೆಯರು ಗೂಗಲ್ನಲ್ಲಿ ಈ ವಿಷಯವನ್ನು ಹೆಚ್ಚು ಹುಡುಕುತ್ತಾರೆ!
ರೈಲ್ವೆ ಅಪ್ರೆಂಟಿಸ್ಗೆ ವಯಸ್ಸಿನ ಮಿತಿ
ಅಭ್ಯರ್ಥಿಯ ವಯಸ್ಸು 15 ರಿಂದ 24 ವರ್ಷಗಳ ನಡುವೆ ಇರಬೇಕು. ಅಭ್ಯರ್ಥಿಯು 1ನೇ ಆಗಸ್ಟ್ 2022ರಂತೆ 24 ವರ್ಷಗಳಿಗಿಂತ ಹೆಚ್ಚು ಅಥವಾ ಕಡಿಮೆ ಇರಬಾರದು.
ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳು ಆನ್ಲೈನ್ ಅರ್ಜಿಗೆ 100 ರೂ. ಇರುತ್ತದೆ. SC/ST/PWD ಮತ್ತು ಮಹಿಳಾ ಅಭ್ಯರ್ಥಿಗಳು ಆನ್ಲೈನ್ ಅರ್ಜಿಗೆ ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ