Job Alert: SSCಯಲ್ಲಿ 2,049 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

SSC recruitment 2024: SSC ಅಧಿಸೂಚನೆಯ ಪ್ರಕಾರ, ಒಟ್ಟು 2,049 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಸೂಚನೆಯ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬಹುದು.

Written by - Puttaraj K Alur | Last Updated : Mar 20, 2024, 04:56 PM IST
  • ಸ್ಟಾಫ್ ಸೆಲೆಕ್ಷನ್ ಕಮಿಷನ್(SSC) ಸೆಲೆಕ್ಷನ್ ಪೋಸ್ಟ್ ಹಂತ 12ರ ನೇಮಕಾತಿ ಅಧಿಸೂಚನೆ ಬಿಡುಗಡೆ
  • ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ
  • ಒಟ್ಟು 2,049 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಮಾರ್ಚ್‌ 26 ಅರ್ಜಿ ಸಲ್ಲಿಲು ಕೊನೆ ದಿನವಾಗಿರುತ್ತದೆ
Job Alert: SSCಯಲ್ಲಿ 2,049 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ title=
SSC recruitment 2024

Staff selection commission recruitment 2024: ಸ್ಟಾಫ್ ಸೆಲೆಕ್ಷನ್ ಕಮಿಷನ್(SSC) ಸೆಲೆಕ್ಷನ್ ಪೋಸ್ಟ್ ಹಂತ 12ರ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದ್ದು, ವಿವಿಧ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. SSLC, 2nd PUC ಮತ್ತು ಪದವೀಧರರು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಅರ್ಜಿ ಸಲ್ಲಿಸಲು ಮಾರ್ಚ್‌ 26 ಕೊನೆಯ ದಿನವಾಗಿರುತ್ತದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ssc.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಧಿಕೃತ ಅಧಿಸೂಚನೆಯ ಪ್ರಕಾರ SSC ಸೆಲೆಕ್ಷನ್ ಪೋಸ್ಟ್ ಹಂತ 12ರ ಪರೀಕ್ಷೆ ದಿನಾಂಕ ಮೇ 6ರಿಂದ 8ರವರೆಗೆ ಇರುತ್ತದೆ.

SSC ಅಧಿಸೂಚನೆಯ ಪ್ರಕಾರ, ಒಟ್ಟು 2,049 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಸೂಚನೆಯ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ. 2024ರ ಫೆಬ್ರವರಿ 26ರಂದು ಅಧಿಸೂಚನೆ ಬಿಡುಗಡೆಯಾಗಿದ್ದು, ಅಂದಿನಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್‌ 26 ಕೊನೆಯ ದಿನವಾಗಿದ್ದು, SSC ಆಯ್ಕೆ ಪೋಸ್ಟ್ ಹಂತ 12r ಪರೀಕ್ಷೆ ಮೇ 6ರಿಂದ 8ರವರೆಗೆ ನಡೆಯಲಿದೆ.  

ಇದನ್ನೂ ಓದಿ: CAA ಅಧಿಸೂಚನೆ ಮೇಲೆ ನಿಷೇಧ ವಿಧಿಸಲು ಸುಪ್ರೀಂ ನಕಾರ, ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ

ಅರ್ಜಿ ಸಲ್ಲಿಸುವ ಹಂತಗಳು

ಹಂತ 1: ಅಭ್ಯರ್ಥಿಗಳು SSCಯ ಅಧಿಕೃತ ವೆಬ್‌ಸೈಟ್‌ ssc.gov.inಗೆ ಭೇಟಿ ನೀಡಬೇಕು 
ಹಂತ 2: ಮುಖಪುಟದಲ್ಲಿ ನೀಡಲಾದ ʼಅಪ್ಲಿಕೇಶನ್ ಆನ್ಲೈನ್ ಲಿಂಕ್ʼ ಕ್ಲಿಕ್ ಮಾಡಿ ಮತ್ತು ಹೆಸರು ನೋಂದಾಯಿಸಿಕೊಳ್ಳಿ.
ಹಂತ 3: ನಿಮ್ಮ ಖಾತೆಗೆ ಲಾಗಿನ್ ಆಗಿ ಮತ್ತು ಅರ್ಜಿ ನಮೂನೆ ಭರ್ತಿ ಮಾಡಿ.  
ಹಂತ 4: ನಿಗದಿತ ನಮೂನೆ ಮತ್ತು ಗಾತ್ರದಲ್ಲಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಹಂತ 5: ಅರ್ಜಿ ಶುಲ್ಕ ಪಾವತಿಸಿ ಮತ್ತು ನಿಮ್ಮ ಅರ್ಜಿ ನಮೂನೆ ಸಲ್ಲಿಸುವ ಮೊದಲು ಒದಗಿಸಿದ ಎಲ್ಲಾ ಮಾಹಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿರಿ.

ವಯೋಮಿತಿ: ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು, 30 ವರ್ಷ ಮೀರಬಾರದು. ನಿರ್ದಿಷ್ಟ ಹುದ್ದೆಯನ್ನು ಅವಲಂಬಿಸಿ ಗರಿಷ್ಠ ವಯಸ್ಸಿನ ಮಿತಿ ಬದಲಾಗುತ್ತದೆ. ಅಭ್ಯರ್ಥಿಗಳು SSLC, 2nd PUC ತೇರ್ಗಡೆಯಾಗಿರಬೇಕು ಅಥವಾ ಪದವಿ ಪೂರ್ಣಗೊಳಿಸಿರಬೇಕು.   

ವೇತನ: ನೀವು ಆಯ್ಕೆಯಾದ ಹುದ್ದೆಗೆ ಅನುಗುಣವಾಗಿ ಮೂಲ ವೇತನವು 5,200 ರೂ.ನಿಂದ 34,800 ರೂ.ವರೆಗೆ ಇರುತ್ತದೆ.

SSC ಆಯ್ಕೆ ಹುದ್ದೆ ವಿವರ: SSLC, 2nd PUC ಉತ್ತೀರ್ಣ ಮತ್ತು ಪದವಿ ಮಟ್ಟದ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಲು ಆಯೋಗವು ಈ ಪರೀಕ್ಷೆಯನ್ನು ನಡೆಸುತ್ತದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.  

ಇದನ್ನೂ ಓದಿ: Congress Manifesto: ಒಟ್ಟು 25 ಗ್ಯಾರಂಟಿಗಳೊಂದಿಗೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಿದ್ದ ! ಇಲ್ಲಿ ಯಾರಿಗೆ ಯಾವ ಭಾಗ್ಯ ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News