39 ವರ್ಷಗಳ ಹಿಂದೆಯೇ ಡಿವೋರ್ಸ್ ಆಗಿದ್ದರೂ ಮತ್ತೆ ಒಂದಾಗಿದ್ದ ಮಲೈಕಾ ಪೋಷಕರು!ಸಾವಿಗೂ ಮುನ್ನ ಮಕ್ಕಳೊಂದಿಗೆ ಈ ರೀತಿ ನಡೆದುಕೊಂಡಿದ್ದರು ಅನಿಲ್ ಆರೋರಾ

ನಟಿ ಮಲೈಕಾ ಆರೋರಾ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಮನೆಯ ಮಹಡಿಯಿಂದ ಹಾರಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. 

Written by - Ranjitha R K | Last Updated : Sep 11, 2024, 04:26 PM IST
  • ಮಲೈಕಾ ಅರೋರಾ ಮತ್ತು ಅಮೃತಾ ಅರೋರಾ ತಂದೆ ಆತ್ಮಹತ್ಯೆ
  • ಬಾಂದ್ರಾದಲ್ಲಿರುವ ತಮ್ಮ ಮನೆಯ ಮಹಡಿಯಿಂದ ಹಾರಿ ಆತ್ಮಹತ್ಯೆ
  • ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನೂ ಬಹಿರಂಗವಾಗಿಲ್ಲ.
39 ವರ್ಷಗಳ ಹಿಂದೆಯೇ ಡಿವೋರ್ಸ್ ಆಗಿದ್ದರೂ ಮತ್ತೆ ಒಂದಾಗಿದ್ದ ಮಲೈಕಾ ಪೋಷಕರು!ಸಾವಿಗೂ ಮುನ್ನ ಮಕ್ಕಳೊಂದಿಗೆ ಈ ರೀತಿ ನಡೆದುಕೊಂಡಿದ್ದರು ಅನಿಲ್ ಆರೋರಾ   title=

ಮುಂಬಯಿ : ನಟಿ ಮಲೈಕಾ ಅರೋರಾ ಮತ್ತು ಅಮೃತಾ ಅರೋರಾ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಮನೆಯ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನೂ ಬಹಿರಂಗವಾಗಿಲ್ಲ.ಆದರೆ ಅನಿಲ್ ಆರೋರಾ ಸಾವಿನ ಸುದ್ದಿ ತಿಳಿಯುತ್ತಿದ್ದ ಹಾಗೆ ಅರ್ಬಾಜ್ ಖಾನ್ ಮಲೈಕಾ ಮನೆ ತಲುಪಿದ್ದಾರೆ. ಅನಿಲ್ ಆರೋರಾ ಸಾವಿನ ಬಗ್ಗೆ ಇದುವರೆಗೂ ಮಲೈಕಾ ಮತ್ತು ಅವರ ಕುಟುಂಬದವರು ಯಾವುದೇ ಹೇಳಿಕೆ ನೀಡಿಲ್ಲ. 

ಬೇರ್ಪಟ್ಟು ಮತ್ತೆ ಒಂದಾಗಿದ್ದ ದಂಪತಿ : 
ಮಲೈಕಾ ಅರೋರಾ ಅವರ ತಂದೆ ಅನಿಲ್ ಅರೋರಾ ಮರ್ಚೆಂಟ್ ನೇವಿಯಲ್ಲಿದ್ದರು.ಅವರು ಹಿಂದೂ ಪಂಜಾಬಿ ಕುಟುಂಬದಿಂದ ಬಂದವರು ಮತ್ತು ಅವರ ತಾಯಿ ಜಾಯ್ಸ್ ಪಾಲಿಕಾರ್ಪ್ ಕ್ರಿಶ್ಚಿಯನ್ ಮಲಯಾಳಿ.ಇಬ್ಬರೂ ಮದುವೆಯಾಗಿ ಇಬ್ಬರು ಹೆಣ್ಣುಮಕ್ಕಳ ಪೋಷಕರಾದರು. ಹಿರಿಯ ಮಗಳು ಮಲೈಕಾಗೆ 11 ವರ್ಷ ಮತ್ತು ಅಮೃತಾ ಅರೋರಾ 6 ವರ್ಷದವಳಿದ್ದಾಗ ಇಬ್ಬರೂ ಬೇರ್ಪಟ್ಟರು.ಕೆಲವು ವರ್ಷಗಳ ನಂತರ,ಮಲೈಕಾ ಪೋಷಕರು ಮತ್ತೆ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು.

ಇದನ್ನೂ ಓದಿ : 'ಅಸುರರು' ಟೀಸರ್ ಔಟ್‌ : ದರೋಡೆ ಕಥೆ ಹೇಳಲು ಬಂದ ಹುಲಿಬೇಟೆ ಡೈರೆಕ್ಟರ್

ಸಾವಿಗೂ ಮುನ್ನ ಮಕ್ಕಳ ಭೇಟಿ : 
ಅನಿಲ್ ಅರೋರಾ ಸಾವಿಗೆ ಒಂದು ದಿನ ಮೊದಲು, ಮಲೈಕಾ-ಅಮೃತಾ ತನ್ನ ಪೋಷಕರನ್ನು ಭೇಟಿಯಾಗಲು ಬಂದಿದ್ದರು.ಈ ಸಂದರ್ಭದಲ್ಲಿ ಎಲ್ಲರೂ ಸಂತೋಷವಾಗಿಯೇ ಕಾಲ ಕಳೆದಿದ್ದಾರೆ ಎನ್ನಲಾಗಿದೆ.ಕುಟುಂಬ ಸದಸ್ಯರು ಎಲ್ಲರೂ ಒಟ್ಟಿಗೆ ಸೇರುವುದನ್ನು ಈ ಕುಟುಂಬ ಹಿಂದಿನಿಂದಲೂ ನಡೆಸಿಕೊಂಡು ಬಂದಿದೆ. ಅಪ್ಪಂದಿರ ದಿನವಾಗಲಿ ಅಥವಾ ಹಬ್ಬವಾಗಲಿ,ಅಮೃತಾ ಮತ್ತು ಮಲೈಕಾ ಅರೋರಾ ತಮ್ಮ ಪೋಷಕರೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.ದೀಪಾವಳಿ ಅಥವಾ ಓಣಂ ವೇಳೆ ಇಡೀ ಕುಟುಂಬ ಒಟ್ಟಿಗೆ ಕುಳಿತು ಊಟ ಮಾಡಿ ಪರಸ್ಪರರ ಜೊತೆಯಲ್ಲಿ ಆನಂದಿಸುತ್ತಾರೆ.

ಇಡೀ ಕುಟುಂಬವೇ ಪರಸ್ಪರ ಶಕ್ತಿ :
ಅನಿಲ್ ಆರೋರಾ ಪತ್ನಿ ಜಾಯ್ಸ್ ಪಾಲಿಕಾರ್ಪ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.ಅವರ ಅಡುಗೆ ಕಲಾತ್ಮಕತೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರದರ್ಶಿಸುತ್ತಾರೆ.ಅಲ್ಲದೇ ಅನಿಲ್ ಅರೋರಾ ಜೊತೆಗಿನ ಫೋಟೋವನ್ನು ಕೂಡಾ ಇಲ್ಲಿ ಹಂಚಿಕೊಳ್ಳುತ್ತಾರೆ.ಈ ಇಡೀ ಕುಟುಂಬ ನೋವು ನಲಿವಿನಲ್ಲಿ ಜೊತೆಯಾಗಿ ನಿಲ್ಲುತ್ತಾರೆ.ಒಬ್ಬರಿಗೊಬ್ಬರ ಶಕ್ತಿಯಂತೆ ಈ ಇಡೀ ಕುಟುಂಬ ಕಾಣಿಸುತ್ತದೆ. 

ಇದನ್ನೂ ಓದಿ : Video: ದೀಪಿಕಾ-ರಣವೀರ್‌ ಮಗಳಿಗೆ ದುಬೈನಲ್ಲಿ ಆಟಿಕೆ ಖರೀದಿಸಿದ ಖ್ಯಾತ ನಟಿ! ಯಾರು ಗೊತ್ತಾ? ವಿಡಿಯೋ ನೋಡಿ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News