Flat 25% discount on making charges: ಭಾರತದಲ್ಲಿ ಚಿನ್ನದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಹಳದಿ ಲೋಹವು ದಾಖಲೆ ಮಟ್ಟಕ್ಕೆ ತಲುಪಿದೆ. ಚಿನ್ನದ ಬೆಲೆಯಲ್ಲಿ ಏರಿಕೆಯ ಪ್ರವೃತ್ತಿ ಮುಂದುವರೆದಿದೆ. ಏತನ್ಮಧ್ಯೆ, ಗುರುವಾರ ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಶೇ.99.9ರಷ್ಟು ಶುದ್ಧ ಚಿನ್ನದ ಬೆಲೆ 50 ರೂ.ಗಳಷ್ಟು ಏರಿಕೆಯಾಗಿ 10 ಗ್ರಾಂಗೆ ಹೊಸ ದಾಖಲೆಯ ಮಟ್ಟವಾದ 89,450 ರೂ.ಗಳಿಗೆ ತಲುಪಿದೆ. 99.5ರಷ್ಟು ಶುದ್ಧತೆಯ ಚಿನ್ನದ ಬೆಲೆಯೂ 50 ರೂ.ಗಳಷ್ಟು ಏರಿಕೆಯಾಗಿ 10 ಗ್ರಾಂಗೆ ದಾಖಲೆಯ 89,050 ರೂ.ಗಳಿಗೆ ತಲುಪಿದೆ.
ಚಿನ್ನದ ಬೆಲೆ ಏರಿಕೆಯಾಗುತ್ತಿದ್ದಂತೆ ಆಭರಣಗಳ ಬೆಲೆಯೂ ವೇಗವಾಗಿ ಏರುತ್ತಿದೆ. ವಾಸ್ತವವಾಗಿ ಚಿನ್ನದ ಆಭರಣಗಳನ್ನು ಖರೀದಿಸುವಾಗ, ನೀವು ಮೇಕಿಂಗ್ ಶುಲ್ಕದ ಜೊತೆಗೆ GST ಪಾವತಿಸಬೇಕಾಗುತ್ತದೆ. ಚಿನ್ನದ ಬೆಲೆಯ ಮೇಲೆ ಮೇಕಿಂಗ್ ಶುಲ್ಕ ಮತ್ತು ಜಿಎಸ್ಟಿ ವಿಧಿಸಲಾಗುತ್ತದೆ. ಆದ್ದರಿಂದ ಚಿನ್ನ ಹೆಚ್ಚು ದುಬಾರಿಯಾದಂತೆ, ತಯಾರಿಕೆ ಶುಲ್ಕಗಳು ಮತ್ತು GST ವೆಚ್ಚಗಳು ಸಹ ಅದಕ್ಕೆ ತಕ್ಕಂತೆ ಹೆಚ್ಚಾಗುತ್ತವೆ.
ಇದನ್ನೂ ಓದಿ: Gold Prices: ಚಿನ್ನ, ಬೆಳ್ಳಿ ಖರೀದಿಸಬೇಕಾ? ಇಂದಿನ ಬೆಲೆಗಳು ಹೀಗಿವೆ..
ಮೇಕಿಂಗ್ ಶುಲ್ಕದ ಮೇಲೆ ಶೇ.25ರಷ್ಟು ರಿಯಾಯಿತಿ
ನೀವು ರುಪೇ ಕಾರ್ಡ್ ಹೊಂದಿದ್ದರೆ, ಮೇಕಿಂಗ್ ಶುಲ್ಕದಲ್ಲಿ ನೇರ 25% ರಿಯಾಯಿತಿಯನ್ನು ಪಡೆಯಬಹುದು. ಹೌದು, ರುಪೇ ತನ್ನ ಗ್ರಾಹಕರಿಗೆ ಉತ್ತಮ ಕೊಡುಗೆಯನ್ನು ನೀಡಿದೆ. ಈ ಕೊಡುಗೆಯಡಿ ನೀವು ಕಲ್ಯಾಣ್ ಜ್ಯುವೆಲ್ಲರ್ಸ್ನಿಂದ ಚಿನ್ನಾಭರಣಗಳನ್ನು ಖರೀದಿಸಿದರೆ, ಮೇಕಿಂಗ್ ಶುಲ್ಕದಲ್ಲಿ ಶೇ.25ರಷ್ಟು ನೇರ ರಿಯಾಯಿತಿಯನ್ನು ಪಡೆಯಬಹುದು. ಮೇಕಿಂಗ್ ಚಾರ್ಜ್ನಲ್ಲಿ ಶೇ.25ರಷ್ಟು ರಿಯಾಯಿತಿ ಪಡೆಯಲು, ನೀವು ಕನಿಷ್ಠ 75,000 ರೂ. ಮೌಲ್ಯದ ಚಿನ್ನವನ್ನು ಖರೀದಿಸಬೇಕಾಗುತ್ತದೆ. ಈ ರಿಯಾಯಿತಿ ಪಡೆಯಲು ನೀವು ಬಿಲ್ಲಿಂಗ್ ಸಮಯದಲ್ಲಿ ಕೂಪನ್ ಕೋಡ್ ʼKALADN101ʼ ಅನ್ನ ಒದಗಿಸಬೇಕು. ಕಾರ್ಡ್ ಮೂಲಕ ಪಾವತಿ ಮಾಡಿದರೆ ಮಾತ್ರ ಈ ಕೊಡುಗೆ ಲಭ್ಯವಿರುತ್ತದೆ. ಇದಕ್ಕಾಗಿ ನೀವು ದೇಶದ ಯಾವುದೇ ಕಲ್ಯಾಣ್ ಜ್ಯುವೆಲ್ಲರ್ಸ್ ಅಂಗಡಿಯಿಂದ ಚಿನ್ನ ಖರೀದಿಸಬಹುದು. ಈ ಕೊಡುಗೆ ಮಾರ್ಚ್ 31, 2025ರವರೆಗೆ ಮಾತ್ರ ಲಭ್ಯವಿರುತ್ತದೆ.
ಗ್ರಾಹಕರಿಗೆ ಎಷ್ಟು ಲಾಭ?
ನೀವು 75,000 ರೂ. ಮೌಲ್ಯದ ಚಿನ್ನದ ಸರವನ್ನು ಖರೀದಿಸುತ್ತಿದ್ದೀರಿ ಎಂದು ಭಾವಿಸೋಣ. ಇದಕ್ಕೆ ನೀವು ಶೇ.15ರಷ್ಟು ಮೇಕಿಂಗ್ ಚಾರ್ಜ್ ಮತ್ತು ಶೇ.3ರಷ್ಟು GST ಪಾವತಿಸಬೇಕಾಗುತ್ತದೆ. ಮೇಕಿಂಗ್ ಶುಲ್ಕಗಳು ಮತ್ತು GSTಯೊಂದಿಗೆ 75,000 ರೂ. ಬೆಲೆಯ ಚಿನ್ನದ ಸರದ ಮೌಲ್ಯವು 88,500 ರೂ. ಆಗುತ್ತದೆ. ಇದರಲ್ಲಿ 15 ಪ್ರತಿಶತ ಮೇಕಿಂಗ್ ಶುಲ್ಕದ 11,250 ರೂ.ಗಳು ಮತ್ತು 3 ಪ್ರತಿಶತ GSTಯ 2,250 ರೂ.ಗಳು ಸೇರಿರುತ್ತದೆ. ಆದರೆ ನೀವು ರುಪೇ ಕಾರ್ಡ್ ಬಳಸಿ ಪಾವತಿಸಿದರೆ, ಈ 11,250 ರೂ.ಗಳ ಮೇಕಿಂಗ್ ಚಾರ್ಜ್ನಲ್ಲಿ 25% ರಿಯಾಯಿತಿ ಸಿಗುತ್ತದೆ. ಈ ಆಫರ್ನ ಲಾಭ ಪಡೆದುಕೊಂಡರೆ ನೀವು 88,500 ರೂ.ಗಳ ಬದಲು 85,688 ರೂ. ಮಾತ್ರ ಪಾವತಿಸಬೇಕಾಗುತ್ತದೆ. ನೀವು ನೇರವಾಗಿ 2812 ರೂ.ಗಳನ್ನು ಉಳಿಸುತ್ತೀರಿ. ಈ ಕೊಡುಗೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ನೀವು ಕಲ್ಯಾಣ್ ಜ್ಯುವೆಲ್ಲರ್ಸ್ ಅಂಗಡಿ ಅಥವಾ ರುಪೇ ಕಾರ್ಡ್ ವೆಬ್ಸೈಟ್ಗೆ ಭೇಟಿ ನೀಡಬಹುದು.
ಇದನ್ನೂ ಓದಿ: ಅಬಕಾರಿ ಇಲಾಖೆ ನಿರ್ಧಾರಕ್ಕೆ ಸೆಡ್ಡು ಹೊಡೆದ ಮದ್ಯ ಪ್ರಿಯರು..! ಬಿಯರ್ ಖರೀದಿಯಲ್ಲಿ ಭಾರೀ ಇಳಿಕೆ..!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.