Kichha Sudeep : ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷಾಂತರಗಳ ಪರ್ವವೇ ನಡೆಯಲು ಆರಂಭಿಸಿತು. ಬಿಜೆಪಿಯನ್ನು ತೊರೆದು ಶೆಟ್ಟರ್ ಕಾಂಗ್ರೇಸ್ ಕೈ ಹಿಡಿದರು. ಲಕ್ಷ್ಮಣ ಸವದಿ ಸಹ ಬಿಜೆಪಿ ಬಿಟ್ಟು ಕಾಂಗ್ರೇಸ್ ಸೇರಿಕೊಂಡರು. ಕೈ ಸೇರಿಕೊಂಡ ಶೆಟ್ಟರ್ ಅವರನ್ನು ಬಿಜೆಪಿ ಪಕ್ಷ ಎಂದಿಗೂ ಕ್ಷಮಿಸುವುದಿಲ್ಲ, ನಂಬಿಕೆ ದ್ರೋಹಿ ಎಂದೆಲ್ಲಾ ಆರೋಪಿಸಿ ಅವರ ವಿರುದ್ಧ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಇದಲ್ಲದೇ ಶೆಟ್ಟರ್ ಸಹ ಬಿಜೆಪಿ ಲಿಂಗಾಯತ ವಿರೋಧಿ ಎಂದು ಆರೋಪಿಸಿದ್ದಾರೆ. ಈ ಆರೋಪದಿಂದ ಬಿಜೆಪಿ ನಿರ್ಣಾಯಕ ಮತದಿಂದ ಶೆಟ್ಟರ್ ವಿರುಧ್ಧ ಗೆಲ್ಲುವುದು ಒಂದು ದೊಡ್ಡ ಸವಾಲು.
ಕೆಲವು ದಿನಗಳ ಹಿಂದೆ ಕಿಚ್ಚ ಸುದೀಪ್ ತಾನು ಬಿಜೆಪಿ ಪಕ್ಷದ ಪರವಾಗಿ ಪ್ರಚಾರಕ್ಕೆ ಇಳಿಯವುದಾಗಿ ಹೇಳಿದ್ದರು. ಹಾಗೆಯೇ ನಡೆದುಕೊಳ್ಳುತ್ತಿದ್ದಾರೆ. ಕಿಚ್ಚ ಸುದೀಪ್ ಹಲವೆಡೆಗಳಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಇದನ್ನು ಮಾಜಿ ಶಾಸಕರ ಪುತ್ರ ಟೀಕಿಸಿ ಮಾತನಾಡಿದ್ದಾನೆ. ಈ ವಿಚಾರವಾಗಿ ಕಿಚ್ಚ ಸುದೀಪ್ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ-ಪೇಡಾನಗರಿಯಲ್ಲಿ ಹೆಬ್ಬುಲಿಯ ಘರ್ಜನೆ, ಧಾರವಾಡದಲ್ಲಿ ಕಿಚ್ಚನ ಭರ್ಜರಿ ರೋಡ್ ಶೋ..!
ಚುನಾವಣೆಯಲ್ಲಿ ಗಮನ ಸೆಳೆಯುತ್ತಿರುವ ಚಿತ್ರನಟ ಸುದೀಪ್ ಅವರ ಪ್ರಚಾರದ ಬಗ್ಗೆ ಮಾಜಿ ಶಾಸಕರ ಪುತ್ರ ಆಡಿದ ಮಾತೊಂದು ವೈರಲ್ ಆಗಿದ್ದು, ಸುದೀಪ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಕೊಳ್ಳೇಗಾಲ ಮಾಜಿ ಶಾಸಕ, ಕೈ ಮುಖಂಡ ಜಿ.ಎನ್.ನಂಜುಂಡಸ್ವಾಮಿ ಪುತ್ರ ಜಿ.ಎನ್.ಲೋಕೇಶ್ ಅವರು ಪ್ರಚಾರ ಸಭೆಯಲ್ಲಿ ಮಾತನಾಡಿದ ವೀಡಿಯೋ ತುಣುಕೊಂದು ವೈರಲ್ ಆಗಿದೆ.
ಸುದೀಪ್ ಮಾಡುತ್ತಿರುವ ಬಿಜೆಪಿ ಪ್ರಚಾರದ ಕುರಿತು ಮಾತನಾಡಿದ ಅವರು ಸುದೀಪ್ ಬರ್ತಾರೆ, ಅವರು ಬರ್ತಾರೆ, ಇವರು ಬರ್ತಾರೆ ಎಂದು ಶಾಸಕರು ಹೇಳುತ್ತಾರೆ, ಆದರೆ ನಮ್ಮಲ್ಲಿ ಯಾರೇ ಬಂದ್ರೂ ಊಟ ಮಾಡ್ತಾರೆ, ಜೇಬಿಗೆ ಹಾಕ್ಕೊಂಡ್ ಹೋಗ್ತಾರೆ ಅಷ್ಟೇ ಎಂದು ಅವಹೇಳನ ಮಾಡಿದ್ದಾರೆ.
ಇದನ್ನೂ ಓದಿ-Poonam Bajwa : ಕನ್ನಡದ ʼತಂಗಿಗಾಗಿʼ ನಟಿಯ ಹಾಟ್ ಫೋಟೋಸ್ ವೈರಲ್..! ಇಲ್ಲಿವೆ ನೋಡಿ
ವಾಲ್ಮೀಕಿ ನಾಯಕ ಮಹಾಸಭಾದ ಯುವ ಘಟಕದ ಜಿಲ್ಲಾಧ್ಯಕ್ಷ ಸರಗೂರು ಶಿವು ಈ ಬಗ್ಗೆ ಮಾತನಾಡಿ, ಕಾಂಗ್ರೆಸ್ ಚುನಾವಣಾ ಪ್ರಚಾರದ ಸಂಧರ್ಭದಲ್ಲಿ ಮಾಜಿ ಶಾಸಕ ಜಿ. ಎನ್. ನಂಜುಂಡಸ್ವಾಮಿ ಪುತ್ರ ಜಿ. ಎನ್. ಲೋಕೇಶ್ ಮಾತಿನ ಭರದಲ್ಲಿ ಕಿಚ್ಚ ಸುದೀಪ್ ರನ್ನು ವ್ಯಂಗ್ಯವಾಗಿ ಮಾತನಾಡಿರುವುದು ನಾಯಕ ಸಮಾಜಕ್ಕೆ ಮತ್ತು ಕಿಚ್ಚ ಸುದೀಪ್ ಅಭಿಮಾನಿ ಬಳಗಕ್ಕೆ ಬಹಳ ನೋವುಂಟಾಗಿದ್ದು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ಜಿಲ್ಲಾದ್ಯಂತ ಜಿ. ಎನ್. ಲೋಕೇಶ್ ವಿರುದ್ಧ ಪ್ರತಿಭಟಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಇನ್ನು, ಯಳಂದೂರಿನಲ್ಲಿ ಸುದೀಪ್ ಅಭಿಮಾನಿಗಳು ಲೋಕೇಶ್ ವಿರುದ್ಧ ಘೋಷಣೆಗಳನ್ನು ಆಕ್ರೋಶ ಹೊರಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.