ನವದೆಹಲಿ: ಶಾರುಖ್ ಖಾನನ್ನು ಫೌಜಿ ಮೂಲಕ ಕಿರುತೆರೆಗೆ ಪರಿಚಯಿಸಿದ ನಿರ್ದೇಶಕ ಕರ್ನಲ್ ರಾಜ್ ಕಪೂರ್ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ 87 ವರ್ಷ ವಯಸ್ಸಾಗಿತ್ತು.
ಈ ಕುರಿತಾಗಿ ಪ್ರತಿಕ್ರಿಯಿಸಿರುವ ಪುತ್ರಿ ರಿತಂಬರಾ "ನನ್ನ ತಂದೆ ನಿನ್ನೆ 10.10 ಕ್ಕೆ ನಿಧನರಾದರು,ಅವರು ಸ್ವಲ್ಪ ಕಾಲ ಆಸ್ಪತ್ರೆಯಲ್ಲಿದ್ದರು, ಆದರೆ ಅವನ ಮರಣವು ತುಂಬಾ ಹಠಾತ್ತಾಗಿತ್ತು, ಇಲ್ಲದಿದ್ದರೆ ಅವರು ಆರೋಗ್ಯದಲ್ಲಿದ್ದರು" ಎಂದು ಮೂರು ಹೆಣ್ಣು ಮಕ್ಕಳಲ್ಲಿ ಒಬ್ಬರಾದ ರಿತಂಬರಾ ಹೇಳಿದ್ದಾರೆ.
ಸೈನ್ಯದಿಂದ ನಿವೃತ್ತಿಯಾದ ನಂತರ ಅವರು ಸಿನಿಮಾದಲ್ಲಿ ಕೆಲಸ ಮಾಡಲು ಮುಂಬೈಗೆ ತೆರಳಿದ್ದರು. ಮುಂದೆ ಅಲ್ಲಿ ಅವರು ಅನೇಕ ಧಾರಾವಾಹಿಗಳನ್ನು ನಿರ್ಮಿಸಿದರು. ಅಲ್ಲದೆ ಜಾಹೀರಾತು ಚಿತ್ರಗಳಲ್ಲಿಯೂ ಕೂಡ ಅಭಿನಯಿಸಿದರು. ಕೆಲ ವರ್ಷಗಳ ಹಿಂದೆ ಅವರು "ವೆನ್ ಶಿವ ಸ್ಮೈಲ್" ಎಂಬ ಕಾದಂಬರಿಯನ್ನು ಪ್ರಕಟಿಸಿದ್ದರು.