Kantara Movie : 'ಕಾಂತಾರ' ನಿಜಕ್ಕೂ ಇದೊಂದು ದಂತಕಥೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಈಗ ದೇಶಾದ್ಯಂತ ಸದ್ದು ಮಾಡ್ತಿದೆ. ಕಾಂತಾರ ಸಿನಿಮಾ ನೋಡಿದ ಪ್ರತಿಯೊಬ್ಬರೂ ಮೆಚ್ಚುಗೆಯ ಮಾತುಗಳನ್ನಾಡ್ತಿದ್ದಾರೆ. ಜನರು ಈ ಸಿನಿಮಾ ಹುಬ್ಬೇರಿಸಿದ್ದಾರೆ, ಉದ್ಘರಿಸಿದ್ದಾರೆ, ಕಾಂತಾರ ಸಿನಿಮಾಗೆ ಜನ ಮನಸೋತಿದ್ದಾರೆ. ಅಷ್ಟರ ಮಟ್ಟಿಗೆ ಕಾಂತಾರ ಮೋಡಿ ಮಾಡಿದೆ. ಅಷ್ಟಕ್ಕೂ ಈ ಸಿನಿಮಾ ಕಥೆ ಕಾಲ್ಪನಿಕವೇ? ಸಿನಿಮಾದಲ್ಲಿರೋ ಪಂಜುರ್ಲಿ, ಗುಳಿಗ ದೈವದ ಹಿನ್ನೆಲೆ ಏನು? ಕರಾವಳಿಯಲ್ಲಿ ಪಂಜುರ್ಲಿ, ಗುಳಿಗ ದೈವದ ಕಾರ್ಣಿಕ ಏನು? ಪಂಜುರ್ಲಿ, ಗುಳಿಗನನ್ನೇ ಸಿನಿಮಾದಲ್ಲಿ ತೋರಿಸಿರೋದೇಕೆ? ಹೌದು ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಈ ಪ್ರಶ್ನೆ ಸಹಜವಾಗೇ ಹುಟ್ಟಿರುತ್ತೆ ಇಂಥಾ ಹಲವು ವಿಚಾರಗಳ ಕುರಿತಾಗಿ ಇಂಟ್ರಸ್ಟಿಂಗ್ ಮಾಹಿತಿ ನೀಡ್ತೀವಿ ಓದಿ.
ಕಾಂತಾರ ಸಿನಿಮಾದಲ್ಲಿ ಬರುವ ಪಂಜುರ್ಲಿ, ಗುಳಿಗ ರೀತಿ ತುಳು ನಾಡಿನಲ್ಲಿ ನೂರಾರು ದೈವಗಳಿವೆ, ತುಳುನಾಡಿನ ಜನರಿಗೆ ಈ ದೈವಗಳ ಮೇಲೆ ಅಪಾರ ನಂಬಿಕೆ. ದೈವಗಳ ವಿಶೇಷ ಆಚರಣೆ ಹಿಂದಿನಿಂದ ಇಂದಿನವರೆಗೂ ಇಲ್ಲಿನ ಜನ ಚಾಚೂ ತಪ್ಪದೇ ಪಾಲಿಸಿಕೊಂಡು ಬರ್ತಿದ್ದಾರೆ. ಯಾವುದೇ ಸಮಸ್ಯೆ ಇರಲಿ ಜನ ದೈವಗಳ ಮೊರೆ ಹೋಗ್ತಾರೆ, ಅದೆಷ್ಟೋ ಸಮಸ್ಯೆಗಳು ಇಂದಿಗೂ ದೈವದ ಸನ್ನಿಧಿಯಲ್ಲೇ ಬಗೆಹರಿಯುತ್ತೇ. ಪಂಜುರ್ಲಿಯನ್ನು ಮನೆಯ ಒಳಗಡೆ ಇಟ್ಟು ಪೂಜಿಸಿದ್ರೆ, ಗುಳಿಗನನ್ನ ಮನೆ ಹೊರ ಭಾಗದಲ್ಲೋ ಗುಡ್ಡ ಪ್ರದೇಶಗಳಲ್ಲೂ ಇಟ್ಟು ಪೂಜಿಸ್ತಾರೆ. ಇಲ್ಲಿನ ಜನ ಗುಳಿಗನನ್ನು ಕ್ಷೇತ್ರ ಪಾಲಕ ಅಂತಾರೆ. ಮನೆ ಜಾಗವನ್ನು ಗುಳಿಗ ರಕ್ಷಣೆ ಮಾಡ್ತಾನೆ ಅನ್ನೋ ನಂಬಿಕೆ ಜನರದ್ದು.
ಇದನ್ನೂ ಓದಿ : Filmfare Awards South 2022: ಫಿಲ್ಮ್ ಫೇರ್ ಅವಾರ್ಡ್ಸ್‌ಗೆ ನಾಮಿನೇಟ್ ಆದ ಕನ್ನಡ ಸಿನಿಮಾಗಳಿವು..
ಒಂದೊಂದು ದೇವರಿಗೂ ಒಂದೊಂದು ಹಿನ್ನೆಲೆ ಇರುವಂತೆ ತುಳುನಾಡಿನಲ್ಲಿ ಆರಾಧಿಸಲ್ಪಡುವ ದೈವಗಳಿಗೂ ಹಿನ್ನೆಲೆ, ಇತಿಹಾಸ ಇದೆ. ಇಂದಿಗೂ ಪುಂಜುರ್ಲಿ ಕೋಲದ ಸಂದರ್ಭದಲ್ಲಿ ಹಂದಿಯ ಮುಖವಾಡ ಧರಿಸಲಾಗುತ್ತೆ. ಈ ಆಚರಣೆ ಈ ದೈವದ ಹಿನ್ನೆಲೆಯನ್ನು ಸಾರಿ ಹೇಳುತ್ತೆ. ಕೃಷಿ ಪ್ರಧಾನವಾಗಿದ್ದ ಕಾಲದಲ್ಲಿ ದೈವಿ ಅಂಶ ಇದ್ದ ಹಂದಿಯನ್ನು ವ್ಯಕ್ತಿಯೊಬ್ಬ ಭೇಟೆಯಾಡಿ ಕೊಂದನಂತೆ. ಬಳಿಕ ಅದೇ ಹಂದಿ ಪಂಜರ್ಲಿ ದೈವವಾಯ್ತು. ಮುಂದೆ ಪಂಜುರ್ಲಿ ದೈವವಾಗಿ ಜನರ ಕಷ್ಟ ಬಗೆಹರಿಸೋ ಶಕ್ತಿಯಾಯ್ತು ಅನ್ನೋದು ಜನರ ನಂಬಿಕೆ. ಮನೆಯಲ್ಲಿ, ಊರಿನ ಪ್ರಧಾನ ದೈವವಾಗಿಯೂ ಪಂಜುರ್ಲಿಯನ್ನು ಆರಾಧನೆ ಮಾಡ್ತಾರೆ. ಧರ್ಮಸ್ಥಳದ ಅಣ್ಣಪ ಸ್ವಾಮಿಯಾಗಿಯೂ ಪಂಜುರ್ಲಿಯನ್ನು ಆರಾಧನೆ ಮಾಡಲಾಗುತ್ತೆ. ಇದು ಪಂಜುರ್ಲಿ ದೈವದ ಕಥೆ.
'ಗುಳಿಗ ದೈವ' ಈ ದೈವವನ್ನು ಕ್ಷೇತ್ರಪಾಲಕ ಎಂದೇ ಕರೆಯಲಾಗುತ್ತೆ. ನೂರಾರು ದೈವಗಳ ಪೈಕಿ ಗುಳಿಗನಿಗೆ ಕೋಪ ಹೆಚ್ಚು. ಮನೆಯ ಹೊರ ಭಾಗದಲ್ಲಿ, ಗುಡ್ಡ ಪ್ರದೇಶಗಳಲ್ಲಿ ಈ ದೈವವನ್ನು ಆರಾಧನೆ ಮಾಡೋದು ವಿಶೇಷ. ತಾಯಿಯ ಹೊಟ್ಟೆಯನ್ನು ಬಗೆದು ಗುಳಿಗ ಹೊರಬಂದ ಅನ್ನೋದು ಗುಳಿಗ ಜನನದ ಕಥೆ. ಮನೆಯ ಜಾಗವನ್ನು ಗುಳಿಗ ಕಾಪಾಡುತ್ತಾನೆ ಅನ್ನೋದು ತುಳು ನಾಡಿನ ಜನರ ನಂಬಿಕೆ. ಇಂದಿಗೂ ಕೂಡಾ ಕೋಲಗಳಲ್ಲಿ ಗುಳಿಗನಿಗೆ ಕೋಳಿಯನ್ನು ಬಲಿಕೊಡಲಾಗಿತ್ತು. ಗುಳಿಗನ ಸನ್ನಿಧಿಯಲ್ಲಿ ಕೋಳಿ ಕತ್ತರಿಸೋ ಆಚರಣೆ ಕರಾವಳಿ ಪ್ರದೇಶಗಲ್ಲಿ ಇಂದಿಗೂ ಇದೆ. ಇನ್ನು ಕಲ್ಲಿನ ರೂಪದಲ್ಲಿ ಗುಳಿಗನನ್ನು ಪೂಜಿಸ್ತಾರೆ ಅನ್ನೋದು ವಿಶೇಷ.
ಇನ್ನು ಕರಾವಳಿಯಲ್ಲಿ ಸಾಕಷ್ಟು ದೈವಗಳಿವೆ. ಹೀಗಿರುವಾಗ ಪಂಜುರ್ಲಿ ಮತ್ತು ಗುಳಿಗನನ್ನೇ ಆಯ್ಕೆ ಮಾಡೋದಕ್ಕೆ ಕಾರಣ ಏನು? ಈ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತೆ. ಈ ಬಗ್ಗೆ ಕೂಡ ನಿರ್ದೇಶಕ ರಿಷಬ್ ಶೆಟ್ಟಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಕಥೆ ಮೂಲ ದಕ್ಷಿಣ ಕನ್ನಡ ಭಾಗದ್ದೇ ಆಗಿದೆ. ಪ್ರತಿ ಸಿನಿಮಾಗೂ ಮಂಗಳೂರಿನ ಜನ ಸಪೋರ್ಟ್ ಮಾಡ್ತಿದ್ದಾರೆ. ತಾಯಿಯಷ್ಟು ವಾತ್ಸಲ್ಯ ಕೊಡೋ, ಮಾವನಷ್ಟು ಬುದ್ಧಿ ಹೇಳೋ ಲಕ್ಷಣ ಇರೋ ದೈವ ಪಂಜುರ್ಲಿ. ಇನ್ನು ಗುಳಿಗ ಕ್ಷೇತ್ರಪಾಲಕನಾಗಿ ಗಡಿಕಾಯ್ತಾನೆ ಹೀಗಾಗಿ ಕಥೆಗೆ ಸೂಕ್ತ ಎನ್ನಿಸಿತು ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : Kantara : ‘ಕಾಂತಾರ’ ನೋಡಿ ರಿಷಬ್‌ಗೆ ಸುದೀರ್ಘ ಪತ್ರ ಬರೆದ ಸುದೀಪ್
ಇನ್ನು ಕಥೆ ಕಾಲ್ಪನಿಕವೇ? ಅನ್ನೋ ಪ್ರಶ್ನೆ ಕೂಡಾ ಸಿನಿ ಅಭಿಮಾನಿಗಳಲ್ಲಿ ಮೂಡುತ್ತೆ. ಈ ಬಗ್ಗೆ ರಿಷಬ್ ಶೆಟ್ಟಿ ಕಥೆ ಕಾಲ್ಪನಿಕವೇ. ಆದ್ರೆ ಇಂದಿಗೂ ಕೂಡಾ ದೈವದ ಕಾರ್ಣಿಕವನ್ನು ಹೇಳ್ತಿದ್ದಾರೆ. ಅವರ ಎಲ್ಲಾ ಮಾಹಿತಿಯನ್ನು ನಾನು ಪಡೆದಿದ್ದೆ. ದೈವಗಳ ಸಾವಿರಾರು ಕಥೆಗಳನ್ನು ನಾನು ಕೇಳಿದ್ದೆ. ಇನ್ನು ಸಿನಿಮಾ ಮಾಡೋದಕ್ಕೂ ಮುನ್ನ ನಾನು ಧರ್ಮಸ್ಥಳಕ್ಕೆ ಹೋಗಿದ್ದೆ. ದೇವರ ಆಶೀರ್ವಾದ ಪಡೆದಿದ್ದೆ ಎಂದಿದ್ದಾರೆ. ಯಾವುದೇ ಕಾರಣಕ್ಕೂ ದೈವವನ್ನು ಅಣುಕಿಸೋ ಕೆಲಸ ಮಾಡಬೇಡಿ. ದೈವದ ಕೂಗನ್ನು ಯಾರೂ ಅನುಕರಣೆ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಸಿನಿಮಾ ಗೆಲುವಿನ ಬಗ್ಗೆ ರಿಷಬ್ ಶೆಟ್ಟಿ ಸಂತಸ ಹಂಚಿಕೊಂಡಿದ್ದಾರೆ.
ದೈವದ ವಿಚಾರ ಆಗಿರೋದ್ರಿಂದ ರಿಷಬ್ ಶೆಟ್ಟಿ ಸೇರಿದಂತೆ ಇಡೀ ಚಿತ್ರತಂಡ ಯಾವುದಕ್ಕೂ ಚ್ಯುತಿ ಬರದಂತೆ ನಡೆದಿಕೊಂಡಿದೆ. ಭಕ್ತಿಯಿಂದ ಚಿತ್ರೀಕರಣ ಮಾಡಿದ್ದಾರೆ. ಚಿತ್ರೀಕರಣದ ಜಾಗದಲ್ಲಿ ಯಾರೂ ಚಪ್ಪಲಿ ಕೂಡಾ ಹಾಕ್ತಿರಲಿಲ್ಲ. ಇನ್ನು ನಾನ್ ವೆಜ್ ತ್ಯಜಿಸಿದ್ದರು. ಒಟ್ಟಾರೆ ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ ಹಾಗೂ ಗುಳಿಗನನ್ನು ಅತ್ಯದ್ಭುತ ರೀತಿಯಲ್ಲಿ ಚಿತ್ರಿಸಲಾಗಿದೆ. ಸಿನಿಮಾದಲ್ಲಿ ತುಳುನಾಡಿನ ಸಂಸ್ಕೃತಿ, ಆಚರಣೆ, ಸಂಪ್ರದಾಯ ಕಣ್ಣಿಗೆ ಕಟ್ಟೋ ರೀತಿ ತೋರಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ