James Release: ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಅನ್ನುವ ಮಾತು ಇಂದು ಅಕ್ಷರಶಃ ನಿಜವಾಗಿದೆ. ಹೌದು, ಇಂದು ವಿಶ್ವದಾದ್ಯಂತ 4000 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರ "ಜೇಮ್ಸ್" ಭರ್ಜರಿಯಾಗಿ ರಿಲೀಸ್ ಆಗಿದೆ.
ಕರ್ನಾಟಕದ 400ಕ್ಕೂ ಹೆಚ್ಚಿನ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ "ಜೇಮ್ಸ್" ರಿಲೀಸ್ (James Release) ಆಗಿದೆ. 150ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್‌ಗಳಲ್ಲಿ ಜೇಮ್ಸ್ ಪ್ರರ್ದಶನವಾಗುತ್ತಿದೆ. ಇನ್ನು ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಸೂರ್ಯೋದಯಕ್ಕೂ ಮುನ್ನವೇ ಅಂದ್ರೆ ಬೆಳಂಬೆಳಗ್ಗೆ 4 ಗಂಟೆಗೆ ಮೊದಲ ಶೋ ಪ್ರರ್ದಶನಗೊಂಡಿದೆ. ಇನ್ನು ಥಿಯೇಟರ್ ಮುಂಭಾಗದಲ್ಲಿ ಇದೂವರೆಗೂ ಅಪ್ಪು ಅಭಿನಯಿಸಿರುವ ಎಲ್ಲಾ ಚಿತ್ರಗಳ ಕಟ್ ಔಟ್ ಹಾಕಿ ಅಭಿಮಾನಿಗಳು ತಮ್ಮ ಆರಾಧ್ಯ ದೈವನಿಗೆ ವಿಶೇಷ ರೀತಿಯಲ್ಲಿ ನಮನ ಸಲ್ಲಿಸಿದ್ದಾರೆ. ಅಪ್ಪು ಇಲ್ಲ ಎಂಬ ನೋವಿನ ನಡುವೆಯೂ ಅಭಿಮಾನಿಗಳು ಚಿತ್ರವನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ಇದನ್ನೂ ಓದಿ- James Release: ಎಲ್ಲೆಲ್ಲೂ 'ಜೇಮ್ಸ್' ಅಬ್ಬರ
ಒಂದೆಡೆ ಜೇಮ್ಸ್ ಸಿನಿಮಾ (James Cinema) ಭರ್ಜರಿ ಪ್ರರ್ದಶನ ಕಾಣುತ್ತಿದೆ. ಮತ್ತೊಂದೆಡೆ ಶಿವಣ್ಣ ದಂಪತಿ ಮೈಸೂರಿನಲ್ಲಿರುವ ಶಕ್ತಿ ಧಾಮಕ್ಕೆ ಭೇಟಿ ನೀಡಿದ್ದಾರೆ. ಮೈಸೂರಿನ ಊಟಿ ರಸ್ತೆಯಲ್ಲಿರುವ ಶಕ್ತಿ ಧಾಮಕ್ಕೆ ಶಿವಣ್ಣ ಮತ್ತು ಗೀತಾ ಶಿವರಾಜ್ ಕುಮಾರ್ ದಂಪತಿ ಸ್ವತಃ ಬೈಕ್‌ನಲ್ಲಿ ಬಂದಿದ್ದಾರೆ. ಕಳೆದ ಮೂರು ದಿನಗಳಿಂದಲೂ ಶಕ್ತಿ ಧಾಮದಲ್ಲಿರುವ ಶಿವಣ್ಣ ದಂಪತಿ, ಆಶ್ರಮದ ಮಕ್ಕಳಿಗೆ ಸಿಹಿ ಹಂಚಿ ಸಿನಿಮಾ ಬರಮಾಡಿಕೊಂಡಿದ್ದಾರೆ. ಮೈಸೂರಿನಲ್ಲಿರುವ ಶಿವಣ್ಣ, ಅಪ್ಪು ಕೊನೆಯ ಸಿನಿಮಾ ರಿಲೀಸ್ ಹಿನ್ನೆಲೆಯಲ್ಲಿ ಮೈಸೂರಿನ ಉಡ್ ಲ್ಯಾಂಡ್, ಗಾಯತ್ರಿ, ಸಂಗಂ ಚಿತ್ರಮಂದಿರಗಳಿಗೆ ಭೇಟಿ ನೀಡಿ ಸಿನಿಮಾ ವೀಕ್ಷಿಸಲಿದ್ದಾರೆ. ಇನ್ನು ದೊಡ್ಮನೆಯಿಂದ 300 ಕುಟುಂಬಗಳಿಗೆ ಸಸಿ, ಬಟ್ಟೆ ವಿತರಿಸಲಾಗಿದೆ. ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿದ ಬಳಿಕ ನಟ ಶ್ರೀ ಮುರಳಿ, ನಟ ಯುವರಾಜ್ ಕುಮಾರ್ ಮತ್ತು ಡಾ. ರಾಜ್ ಕುಟುಂಬದಿಂದ 300 ಕುಟುಂಬಗಳಿಗೆ ಸಸಿ, ಬಟ್ಟೆ ವಿತರಿಸಲಾಯಿತು.
ಇದನ್ನೂ ಓದಿ- ಸೇನಾ ಸಮವಸ್ತ್ರದಲ್ಲೇ ಜೇಮ್ಸ್ ಚಿತ್ರ ನೋಡಲು ಬಂದ ನಿವೃತ್ತ ಯೋಧ
ಇನ್ನು ಫಿಲ್ಮಸಿಟಿಗೆ ಅಪ್ಪು ಹೆಸರಿಡುವ ಕುರಿತು ಪ್ರತಿಕ್ರಿಯಿಸಿದ ಶಿವಣ್ಣ, ಎಲ್ಲರ ಮನದಲ್ಲಿಯೂ ಅಪ್ಪು ಹೆಸರಿದೆ, ಈ ಬಗ್ಗೆ ಚರ್ಚಿಸುವುದಿಲ್ಲ ಎಂದಿದ್ದಾರೆ. ಮತ್ತೊಂದೆಡೆ ಅಭಿಮಾನಿಗಳ ಜೊತೆ ಸಿನಿಮಾ ನೋಡಿದ ಬಳಿಕ ನಟ ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ, "ಜೇಮ್ಸ್ ನನಗೆ ಸಿನಿಮಾ ಅಲ್ಲ ಎಮೋಷನ್" ಎಂದಿದ್ದಾರೆ. ತಮ್ಮನ ಬಗ್ಗೆ ಹೊಗಳಬಾರದೆಂದು ನಮ್ಮ ತಂದೆ ಹೇಳಿದ್ದಾರೆ. ನನ್ನ ತಮ್ಮ ಏನೇ ಮಾಡಿದರೂ ಅದು ನನಗೆ ಇಷ್ಟವಾಗುತ್ತದೆ. ನಮಗೆ ನಟ ಪುನೀತ್ ಉಡುಗೊರೆ ಕೊಟ್ಟು ಹೋಗಿದ್ದಾನೆ. ಪುನೀತ್ ಸಿನಿಮಾಗಳು ಮತ್ತೆ ರೀ ರೀಲೀಸ್ ಆಗುತ್ತವೆ ಎಂದು ರಾಘಣ್ಣ ಹೇಳಿದ್ದಾರೆ.
ಇನ್ನು "ಜೇಮ್ಸ್" ಸಿನಿಮಾ ನಾಯಕಿ ಪ್ರಿಯಾ ಆನಂದ್ ಇಂದು ಬೆಂಗಳೂರಿನ ನವರಂಗ್ ಥಿಯೇಟರ್‌ನಲ್ಲಿ ಸಿನಿಮಾ ನೋಡಿ ಭಾವುಕರಾದರು. ಬಳಿಕ ಕಾರಿನಲ್ಲಿ ಬಂದು ಕುಳಿತು ಕಣ್ಣೀರಿಟ್ಟಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.