'ಛಾವಾ' ಸಿನಿಮಾದಲ್ಲಿ "ರಶ್ಮಿಕಾ ಮಹಾರಾಣಿ" ಅಂದ್ರೆ ನಂಬೋಕೆ ಆಗಲ್ಲ.. ನಟನೆ ಚನ್ನಾಗಿಲ್ಲ..! ಸ್ಟಾರ್‌ ನಟಿ ಹೇಳಿಕೆ ವೈರಲ್‌

Akshata aapte on Chhaava : "ಛಾವಾ" ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಹುತೇಕ ಪ್ರೇಕ್ಷಕರು ಈ ಚಿತ್ರಕ್ಕೆ ಫಿದಾ ಆಗಿದ್ದಾರೆ. ಉತ್ತಮ ವಿಮರ್ಶೆ ಸಹ ಬಂದಿವೆ.. ಇವುಗಳ ನಡುವೆ ನಟಿಯೊಬ್ಬರ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, 'ಛಾವಾ' ಊಹೆ ಮಾಡಿದಷ್ಟು ಚನ್ನಾಗಿಲ್ಲ ಅಂತ ಹೇಳಿಕೆ ನೀಡಿದ್ದಾರೆ..

Written by - Krishna N K | Last Updated : Feb 22, 2025, 05:05 PM IST
    • "ಛಾವಾ" ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.
    • ಬಹುತೇಕ ಪ್ರೇಕ್ಷಕರು ಈ ಚಿತ್ರಕ್ಕೆ ಫಿದಾ ಆಗಿದ್ದಾರೆ.
    • 'ಛಾವಾ' ಅಷ್ಟು ಚನ್ನಾಗಿಲ್ಲ ಅಂತ ನಟಿ ಹೇಳಿಕೆ ನೀಡಿದ್ದಾರೆ..
'ಛಾವಾ' ಸಿನಿಮಾದಲ್ಲಿ "ರಶ್ಮಿಕಾ ಮಹಾರಾಣಿ" ಅಂದ್ರೆ ನಂಬೋಕೆ ಆಗಲ್ಲ.. ನಟನೆ ಚನ್ನಾಗಿಲ್ಲ..! ಸ್ಟಾರ್‌ ನಟಿ ಹೇಳಿಕೆ ವೈರಲ್‌ title=

Akshata apte on Rashmika : ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಸಂಭಾಜಿ ಮಹಾರಾಜರ ವೀರಗಾಥೆಯ ಕಥಾ ಹಂದರ 'ಛಾವಾ' ಚಿತ್ರ. ಲಕ್ಷ್ಮಣ್ ಉಟೇಕರ್ ನಿರ್ದೇಶನದ 'ಛಾವಾ' ಈ ಸಿನಿಮಾದಲ್ಲಿ ನಟ ವಿಕ್ಕಿ ಕೌಶಲ್ ಮತ್ತು ದಕ್ಷಿಣದ ಸೂಪರ್‌ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಛಾವಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇಲ್ಲಿಯವರೆಗೆ, ಸಾರ್ವಜನಿಕರಿಂದ ಹಿಡಿದು ಸ್ಟಾರ್‌ ನಟರವರೆಗೆ ಅನೇಕ ಜನರು ಚಿತ್ರವನ್ನು ಹೊಗಳಿದ್ದಾರೆ. ಇದರ ಮಧ್ಯ ಮರಾಠಿ ನಟಿಯೊಬ್ಬರು 'ಛಾವಾ' ಚಿತ್ರವನ್ನು ಮರಾಠಿಯಲ್ಲಿ ಏಕೆ ಮಾಡಲಿಲ್ಲ..? ಅಂತ ಹೀಗೊಂದು ಪ್ರಶ್ನೆ ಕೇಳಿದ್ದಾರೆ...

ಇದನ್ನೂ ಓದಿ:ಸಿನಿಮಾ ಬೇಡವೆಂದ ತಂದೆ, ಸಿನಿಮಾಗಾಗಿ ಲಿಂಗ ಬದಲಾವಣೆ..! ಇಂದು ಕೋಟ್ಯಂತರ ರೂ. ಒಡತಿ ಈ ನಟಿ

ನಟಿ ಅಕ್ಷತಾ ಆಪ್ಟೆ 'ಛಾವ್' ಸಿನಿಮಾ ನೋಡಿದ ನಂತರ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ... "'ಛಾವಾ' ಬಗ್ಗೆ ಹೇಳುವುದಾದರೆ, ಇದು ಒಮ್ಮೆ ಮಾತ್ರ ನೋಡಬಹುದಾದ ಸಿನಿಮಾ. ಈಗಾಗಲೇ ನಮಗೆ ತಿಳಿದಿರುವುವ ಇತಿಹಾಸವನ್ನು ಮಾತ್ರ ತೋರಿಸಲಾಗಿದೆ. ಮೊದಲ ಭಾಗದಲ್ಲಿ ಏನೂ ಇಲ್ಲ, ಎರಡನೇ ಭಾಗ ಅದ್ಭುತವಾಗಿದೆ. ಛಾಯಾಗ್ರಹಣ ಚೆನ್ನಾಗಿದೆ ಆದರೆ ಚಿತ್ರಕಥೆ ಚೆನ್ನಾಗಿಲ್ಲ.. ಚಿತ್ರದ ಸಂಗೀತ ಚೆನ್ನಾಗಿಲ್ಲ.. ನಿರ್ದೇಶನವು ಒಳ್ಳೆಯದು ಮತ್ತು ಕೆಟ್ಟದು.. ವೇಷಭೂಷಣಗಳು, ಕೂದಲು ಮತ್ತು ಮೇಕಪ್ ತುಂಬಾ ಅದ್ಬುತವಾಗಿದೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ..

No description available.

ಅಲ್ಲದೆ, ಈ ಪೋಸ್ಟ್‌ನಲ್ಲಿ, "ವಿಕಿ ಕೌಶಲ್ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಆದರೆ ರಶ್ಮಿಕಾ ಮಂದಣ್ಣ ಅವರ ನಟನೆ ಅವರ ನೋಟ ಈ ಪಾತ್ರಕ್ಕೆ ಸರಿಹೊಂದಿಲ್ಲ. ಉಳಿದ ಪೋಷಕ ಪಾತ್ರವರ್ಗ ಅದ್ಭುತವಾಗಿದೆ. ಒಟ್ಟಾರೆಯಾಗಿ, ಇದು ಮನರಂಜನೆಗಾಗಿ ವೀಕ್ಷಿಸಲು ಉತ್ತಮ ಚಲನಚಿತ್ರವಾಗಿದೆ. ಛತ್ರಪತಿ ಸಂಭಾಜಿ ಮಹಾರಾಜ್ ಎದುರಿಸಿದ ಸನ್ನಿವೇಶಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನಾನು ಆಶಿಸುತ್ತಿದ್ದೆ. ಇತರ ವೀಕ್ಷಕರಂತೆ, ನಾನು ಕೂಡ ಅಂತಿಮ ಕ್ಷಣವನ್ನು ನೋಡಿದ ನಂತರ ತುಂಬಾ ಅತ್ತುಬಿಟ್ಟೆ. ಆದರೆ ಇದು ಚಿತ್ರದ ಪ್ರಭಾವದಿಂದ ಆಗಿದ್ದಲ್ಲ... ಇದು ನಾವು ಮಹಾರಾಜರನ್ನು ಗೌರವಿಸುವ ಪರಿ.. ಅಂತ ಹೇಳಿದ್ದಾರೆ..

ಇದನ್ನೂ ಓದಿ:"ಛಾವಾ" ಚಿತ್ರಕ್ಕೆ ಹೃದಯಸ್ಪರ್ಶಿ ಸಂಭಾಷಣೆ ಬರೆದದ್ದು ಒರ್ವ "ಮುಸ್ಲಿಂ ಬರಹಗಾರ"..! 1 ರೂ. ಸಂಭಾವನೆ ಸಹ ಪಡೆದಿಲ್ಲ.. 

ಈ ಪೋಸ್ಟ್‌ನಲ್ಲಿ ಅಕ್ಷತಾ, ರಶ್ಮಿಕಾ ಮಂದಣ್ಣ 'ಛಾವಾ' ಚಿತ್ರಕ್ಕೆ ಸೂಕ್ತವಲ್ಲ ಎಂದು ಹೇಳಿದ್ದಾರೆ. ರಶ್ಮಿಕಾ ಮಹಾರಾಣಿ ಯೇಸುಬಾಯಿ ಪಾತ್ರವನ್ನು ನಿರ್ವಹಿಸಲು ಸೂಕ್ತವಲ್ಲ. ವಿಕ್ಕಿ ಕೌಶಲ್ ಅವರ ನಟನೆ ಅದ್ಭುತವಾಗಿದೆ. ಚಿತ್ರಕಥೆಯಲ್ಲಿ ಇನ್ನಷ್ಟು ವೈವಿಧ್ಯತೆ ಇದ್ದಿದ್ದರೆ, ಅದನ್ನು ಬೇರೆ ರೀತಿಯಲ್ಲಿ ಪ್ರಸ್ತುತಪಡಿಸಲು ಅವಕಾಶವಿರುತ್ತಿತ್ತು ಎಂದು ಅಕ್ಷತಾ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News