Puneeth Rajkumar: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ಕರುನಾಡಿನ ಪ್ರೀತಿಯ ಅಪ್ಪು ನಮ್ಮೆಲ್ಲರನ್ನು ಅಗಲಿ ಮೂರು ವರ್ಷಗಳಾಗುತ್ತಾ ಬಂತು. ಅವರು ದೈಹಿಕವಾಗಿ ನಮ್ಮೊಂದಿಗಿಲ್ಲವೆಂಬ ಸತ್ಯವನ್ನು ಇಂದಿಗೂ ಲಕ್ಷಾಂತರ ಅಭಿಮಾನಿಗಳು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಥಿಯೇಟರ್ ಹಾಗೂ ಮೊಬೈಲ್ನಲ್ಲಿ ಅವರ ಚಿತ್ರಗಳನ್ನು ಕಣ್ತುಂಬಿಕೊಳ್ಳುತ್ತಾ ಫ್ಯಾನ್ಸ್ ನೋವು ಮರೆಯುತ್ತಿದ್ದಾರೆ. ಅಪ್ಪು ನಮ್ಮೊಂದಿಗೇ ಇದ್ದಾರೆ, ಅವರು ಎಲ್ಲಿಯೂ ಹೋಗಿಲ್ಲವೆಂದು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾ ಕಣ್ಣೀರು ಹಾಕ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಅಗಲಿದ ಮೇಲೆ ಲಕ್ಷಾಂತರ ಅಭಿಮಾನಿಗಳಿಗೆ ಅಗಾಧ ನೋವು ಉಂಟಾಗಿದೆ. ಕೇವಲ ನಟನೆಯಷ್ಟೇ ಅಲ್ಲದೇ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದ ಪುನೀತ್ ರಾಜ್ಕುಮಾರ್ ಬದುಕಿದ್ದರೆ ಅವರ ಮೂರ್ನಾಲ್ಕು ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು. ಅವರ ಫ್ಯಾನ್ಸ್ಗೆ ಪುನೀತ್ ಅದ್ಭುತ ನಟನೆ, ಡ್ಯಾನ್ಸ್ ಮೂಲಕ ಹಬ್ಬದೂಟವನ್ನೇ ಹಾಕಿಸುತ್ತಿದ್ದರು. ಆದರೆ ವಿಧಿಯಾಟಕ್ಕೆ ಅವರು ಬಲಿಯಾಗಿದ್ದಾರೆ.
ಇದನ್ನೂ ಓದಿ: ದಿನಕ್ಕೆ 100 ಸಿಗರೇಟ್ ಹೊಡಿತಾರಂತೆ ಈ ಸ್ಟಾರ್ ನಟ! ಯಾರು ಗೊತ್ತಾ?
ಅಪ್ಪು ಅಗಲಿದ ದಿನದಿಂದ ಹಿಡಿದು ಇಂದಿನವರೆಗೂ ಅವರ ಕುರಿತು ಒಂದಲ್ಲ ಒಂದು ವಿಶೇಷ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತದೆ. ಬದುಕಿರುವವರೆಗೂ ಒಳ್ಳೆಯ ಕೆಲಸಗಳನ್ನೇ ಮಾಡಿದ ಪುನೀತ್ ರಾಜ್ಕುಮಾರ್ ಅವರು ತಮ್ಮ ಹೆಂಡತಿ ಮತ್ತು ಮಕ್ಕಳಿಗಾಗಿ ಸಂಪಾದಿಸಿಟ್ಟ ಆಸ್ತಿ ಮೌಲ್ಯ ಎಷ್ಟು ಎಂಬುದರ ಮಾಹಿತಿಯನ್ನು ಇಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.
ಮಾಹಿತಿಯ ಪ್ರಕಾರ, ನಮ್ಮ-ನಿಮ್ಮೆಲ್ಲರ ಪ್ರೀತಿಯ ಅಪ್ಪು ಅವರು ಬದುಕಿದಷ್ಟು ದಿನ ತಾವು ದುಡಿದ ಹಣದಲ್ಲಿ ಅರ್ಧದಷ್ಟು ಹಣವನ್ನು ಸಮಾಜ ಸೇವೆಗೆಂದು ಬಳಸುತ್ತಿದ್ದರು. ಸಾಕಷ್ಟು ವೃದ್ಧಾಶ್ರಮ, ಅನಾಥಾಶ್ರಮ ಮತ್ತು ಹೆಣ್ಣುಮಕ್ಕಳ ಉದ್ಯೋಗಕ್ಕೆ ಹಾಗೂ ಗೋಶಾಲೆಗಳಿಗೆ ದಾನ ಮಾಡಿದ್ದಾರೆ. ಇದೆಲ್ಲದರ ಜೊತೆಗೆ 1,800 ಹೆಣ್ಣು ಮಕ್ಕಳ ಶಿಕ್ಷಣದ ಖರ್ಚನ್ನು ನೋಡಿಕೊಳ್ಳುತ್ತಾ ಸಾಕಷ್ಟು ನಿಸ್ವಾರ್ಥ ಸೇವೆಗಳನ್ನು ಮಾಡುವುದರ ಜೊತೆಗೆ ತಮ್ಮ ಹೆಂಡತಿ ಹಾಗೂ ಮಕ್ಕಳಿಗಾಗಿಯೂ ಸ್ವಲ್ಪ ಆಸ್ತಿಯನ್ನು ಮಾಡಿದ್ದಾರೆ.
ಇದನ್ನೂ ಓದಿ: Actor Ramkrishna: ಮನೆ ಕೆಲಸದವಳನ್ನೇ ಮದುವೆಯಾದ ಹಿರಿಯ ನಟ ರಾಮಕೃಷ್ಣ! ಇವರ ಮಗ ಕೂಡ ಸಖತ್ ಫೇಮಸ್!!
ಅಪ್ಪು ಅವರು ಬೆಂಗಳೂರಿನ ಸದಾಶಿವನಗರದಲ್ಲಿ ಬೃಹತ್ ಮನೆ ಕಟ್ಟಿಸಿದ್ದಾರೆ. ವರನಟ ಡಾ.ರಾಜಕುಮಾರ್ ಅವರ ಹುಟ್ಟೂರಾದ ಗಾಜಿನೂರಿನಲ್ಲೊಂದು ಬಂಗಲೆ ನಿರ್ಮಿಸಿದ್ದರು. ಇದರ ಜೊತೆಗೆ ಎರಡು ಲ್ಯಾಂಬೋರ್ಗಿನಿ, ವೋಲ್ವೋ & ಫಾರ್ಚುನರ್ ಕಾರುಗಳು, ಕೋಟಿಗಟ್ಟಲೇ ಬೆಲೆಬಾಳುವ ಬೈಕ್ಗಳು, ಪತ್ನಿ ಅಶ್ವಿನಿ ಅವರ ಬಳಿ 1KG ಚಿನ್ನ ಹೀಗೆ ಒಟ್ಟಾರೆ ನೂರು ಕೋಟಿಗೂ ಹೆಚ್ಚಿನ ಆಸ್ತಿಯನ್ನು ಸಂಪಾದಿಸಿ ಬಿಟ್ಟುಹೋಗಿದ್ದಾರೆ. ನೂರು ಕೋಟಿ ಆಸ್ತಿಗೂ ಮಿಗಿಲಾಗಿ ಅಪ್ಪು ಗಳಿಸಿರುವುದು ಕೋಟ್ಯಂತರ ಅಭಿಮಾನಿಗಳ ಅಭಿಮಾನವನ್ನು ಹಾಗೂ ಪ್ರೀತಿಯನ್ನು. ಇಷ್ಟೆಲ್ಲಾ ಆಸ್ತಿಯನ್ನು ಹೊಂದಿರುವ ದೊಡ್ಮನೆ ನಗುವಿನ ರಾಜಕುಮಾರನನ್ನೇ ಕಳೆದುಕೊಂಡು ಅನಾಥವಾಗಿದೆ.
ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಂತಹ ಅಪ್ಪನೇ ಇಲ್ಲದ ಮೇಲೆ ಇಷ್ಟೆಲ್ಲಾ ಆಸ್ತಿ ಯಾಕೆ ಅಂತಿದ್ದಾರೆ ಅಪ್ಪು ಮಕ್ಕಳು? ಅಪ್ಪು ನಮ್ಮೊಂದಿಗೆ ಇಲ್ಲದಿರಬಹುದು ಆದರೆ, ಅವರು ಗುಣಗಳು, ಆದರ್ಶ, ನಿಸ್ವಾರ್ಥ ಸಮಾಜಸೇವೆ ಹಾಗೂ ಬದುಕಿನ ಪಾಠ ಮುಂದಿನ ಪೀಳಿಗೆಯ ಯುವಕರಿಗೆ ಸ್ಫೂರ್ತಿಯಾಗಿವೆ. ಇಡೀ ಕರುನಾಡೇ ಪ್ರೀತಿಸುತ್ತಿದ್ದ ಅಪ್ಪು ಲಕ್ಷಾಂತರ ಜನರಿಗೆ ಮಾದರಿಯಾಗಿದ್ದು, ಕೋಟ್ಯಂತರ ಜನರ ಹೃದಯದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ