ನವದೆಹಲಿ: ಕನ್ನಡಿಗರ ಹವಾ ಏನು ಅನ್ನೋದು ಈಗ ಇಡೀ ಇಂಡಿಯನ್ ಸಿನಿಮಾ ಲೋಕಕ್ಕೆ ಗೊತ್ತಿದೆ. ನಮ್ ಇಂಡಸ್ಟ್ರೀ ಮಂದಿಯನ್ನು ಪರಭಾಷೆಯವರು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸ್ತಿದ್ದಾರೆ. ಇಂತಹ ಟೈಮ್ ನಲ್ಲಿ ಕನ್ನಡದ ಯುವ ನಟ ಯುವನ್ ಹರಿಹರನ್ ನಾಯಕನಾಗಿ ಅಭಿನಯಿಸಿರುವ ಚೊಚ್ಚಲ ಹಿಂದಿ ಸಿನಿಮಾ ವೈ ಅಂಗಳದ ಬೆಪನ್ಹಾ ಹಾಡು ರಿಲೀಸ್ ಆಗಿದ್ದು, ಯೂಟ್ಯೂಬ್ ಪ್ರಪಂಚದಲ್ಲಿ ಭಾರೀ ಸದ್ದು ಮಾಡ್ತಿದೆ.
ಶಂಭು ಕುಮಾರ್ ಸಾಹಿತ್ಯ ಬರೆದಿರುವ ಆಯುಷಿ ಷಾ ಧ್ವನಿಯಾಗಿರುವ ಬೆಪನ್ಹಾ ಗಾನ ಲಹರಿ ಖ್ಯಾತ ನಿರ್ದೇಶಕಿ ಕಂ ನಿರ್ಮಾಪಕಿ ಸೋನಾಲಿ ಬೋಸೆ, ಮಿಷನ್ ಮಂಗಲ್ ಸಿನಿಮಾ ಖ್ಯಾತಿಯ ನಿರ್ದೇಶಕ ಜಗನ್ ಶಕ್ತಿ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ನಾಯಕ ಹಾಗೂ ನಾಯಕಿ ನಡುವಿನ ನವೀರಾದ ಪ್ರೇಮ ಕಥೆಯ ಈ ಸಿಂಗಿಂಗು ಬರೋಬ್ಬರಿ ಐದು ಲಕ್ಷಕ್ಕೂ ಹೆಚ್ಚು ವೀವ್ಸ್ ಸಿಕ್ಕಿದೆ. ಕೇಳುಗರನ್ನು ಮಂತ್ರ ಮುಗ್ದರನ್ನಾಗಿಸುವ ಬೆಪನ್ಹಾ ಗಾನಬಜನಾಕ್ಕೆ ಸಂಗೀತ ಪ್ರಿಯರು ಫಿದಾ ಆಗಿದ್ದಾರೆ.
ಇದನ್ನೂ ಓದಿ: ಕೋವಿಡ್ ಲಸಿಕೆಯ ಮೂರನೇ ಡೋಸ್ ಪಡೆದವರು 17% ಮಾತ್ರ : ಸಚಿವ ಸುಧಾಕರ್
ಮುಂಬೈನ ರೋಷನ್ ತನೇಜಾ ಸ್ಕೂಲ್ ನಲ್ಲಿ ಜಿಮ್ನಾಸ್ಟಿಕ್ಸ್, ಮಾರ್ಷಲ್ ಆರ್ಟ್ಸ್, ಕರಾಟೆ, ಡ್ಯಾನ್ಸ್, ಫೈಟ್ ಹೀಗೆ ನಟನೆಗೆ ಸಂಬಂಧಿಸಿ ಎಲ್ಲಾ ಕಲೆಗಳನ್ನು ಕರಗತ ಮಾಡಿಕೊಂಡಿರುವ ಯುವನ್ ನಿರ್ದೇಶಕ ಗಿರಿದೇವ್ ಹಾಸನ್ ಸಾರಥ್ಯದಲ್ಲಿ ಮೂಡಿ ಬಂದಿರುವ ವೈ ಸಿನಿಮಾದಲ್ಲಿ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ರಿಲೀಸ್ ಗೆ ಎದುರು ನೋಡುತ್ತಿದೆ.
ಇದನ್ನೂ ಓದಿ: ವೀರಪ್ಪನ್ ತಾಣವಾಗಿದ್ದ ಈ ಊರು ಇಂದು ಯೋಧರ ಗ್ರಾಮ.. ಇಲ್ಲಿದೆ ಸೇನಾ ತರಬೇತಿ ಅಕಾಡೆಮಿ
ಈ ಹಿಂದೆ ಜೀರೋ: ಮೇಡ್ ಇನ್ ಇಂಡಿಯಾ ಸಿನಿಮಾ ಮಾಡಿ ಗಮನ ಸೆಳೆದಿದ್ದ ಗಿರಿದೇವ್ ಗೆ ರಾಕ್ಸಿ, ಜೆ.ಎಂ.ಮಧು, ಡಾ.ಅರ್ಜಿತ್ ಸಾಥ್ ಕೊಟ್ಟಿದ್ದಾರೆ. ಗಿರಿದೇವ್ ಆಕ್ಷನ್ ಕಟ್ ಹೇಳಿರುವ ವೈ ಸಿನಿಮಾವನ್ನು ಈ ಮೂವರು ರಾಕೆಟ್ ಫಿಲ್ಮಸ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದಾರೆ. ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಮಂಗಳೂರು ಮೂಲದ ಲಿಯೋನಿಲ್ಲಾ ನಾಯಕಿಯಾಗಿ ನಟಿಸಿದ್ದು, ತಂತ್ರಜ್ಞರು ಕನ್ನಡಿಗರು ಅನ್ನೋದೇ ವಿಶೇಷ.
ಈ ಹಿಂದೆ ಹಿಂದಿಯಲ್ಲಿ ರಿಲೀಸ್ ಆಗಿದ್ದ ಆಬ್ ಕುಚ್ ಐಸಾ ಆಲ್ಬಂ ಹಾಡಿನಲ್ಲಿ ಹೆಜ್ಜೆ ಹಾಕಿದ್ದ ಲಿಯೋನಿಲ್ಲಾ ವೈ ಸಿನಿಮಾ ಮೂಲಕ ಬಾಲಿವುಡ್ ಗೆ ನಾಯಕಿಯಾಗಿ ಎಂಟ್ರಿ ಕೊಡ್ತಿದ್ದಾರೆ. ಮಾತುಬಾರದ ಹುಡ್ಗಿ ಪಾತ್ರದಲ್ಲಿ ಲಿಯೋನಿಲ್ಲಾ ನಟಿಸ್ತಿದ್ದು, ಉಳಿದಂತೆ ಯುವನ್, ಕಮಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಅಂದಹಾಗೇ ವೈ ಅನ್ನೋದು ಒಂದು ಚಿನ್ಹೆ. ಅದರ ಸುತ್ತ ಕಥೆ ಸಾಗುತ್ತದೆ. ಜೀರೋ ಸಿನಿಮಾದಲ್ಲಿ ಛಾಯಾಗ್ರಾಹಕನಾಗಿ ಕೆಲಸ ಮಾಡಿದ್ದ ಕಾರ್ತಿಕ್ ಮಲ್ಲೂರ್, ವಿನೋದ್ ಬಸವರಾಜ್ ಸಂಕಲನ ವೈ ಚಿತ್ರದಲ್ಲಿಯೂ ಇರಲಿದೆ. ಸೆನ್ಸಾರ್ ಮುಗಿಸಿರುವ ಸಿನಿಮಾ ಸೆಪ್ಟಂಬರ್ ಗೆ ತೆರೆಗೆ ಬರಲು ಸಜ್ಜಾಗ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.