Gufi Paintal Hospitalised: ‘ಮಹಾಭಾರತ’ ಧಾರಾವಾಹಿಯಲ್ಲಿ ‘ಶಕುನಿ ಮಾಮ’ ಪಾತ್ರದಲ್ಲಿ ನಟಿಸಿ ಅಪಾರ ಖ್ಯಾತಿ ಗಳಿಸಿದ್ದ ಹಿರಿಯ ನಟ ಗೂಫಿ ಪೈಂಟಲ್ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಅವರನ್ನು ಸೀರಿಯಸ್ ಕಂಡಿಶನ್ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೂಫಿ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಅವರ ಸ್ಥಿತಿಯು ಇಂದು ಮತ್ತಷ್ಟು ಹದಗೆಟ್ಟಿದೆ ಎನ್ನಲಾಗಿದೆ. ಟಿವಿ ನಟಿ ಟೀನಾ ಘಾಯ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಗೂಫಿ ಪೈಂಟಲ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ಖಚಿತಪಡಿಸಿದ್ದಾರೆ.
ಗುಫಿ ಪೈಂಟಲ್ ಅವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಿದ ಟೀನಾ ಘಾಯ್
ಈ ಕುರಿತು ತಮ್ಮ ಇನ್ಸ್ಟಾಗ್ರಾಮ ಖಾತೆಯಲ್ಲಿ ಪರೆದುಕೊಂಡಿರುವ ಟೀನಾ ಘಾಯ್ ಅವರ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಅವರ ಅನಾರೋಗ್ಯದ ಬಗ್ಗೆ ತಿಳಿಸಿದ್ದಾರೆ. ಇದರೊಂದಿಗೆ, ನಟಿ ಶೀರ್ಷಿಕೆಯಲ್ಲಿ ಬರೆದಿದ್ದಾರೆ, "ಗೂಫಿ ಪೆಂಟಲ್ ತೊಂದರೆಯಲ್ಲಿದ್ದಾರೆ. ದಯವಿಟ್ಟು ಪ್ರಾರ್ಥಿಸಿ, ಓಂ ಸಾಯಿ ರಾಮ್ ಪ್ರೇಯರ್ಸ್, ಪ್ರೇಯರ್ಸ್ ಫಾರ್ ಹೇಲಿಂಗ್, ಪ್ರೇಯರ್ಸ್ ನೀಡೆಡ್" ಎಂದು ಬರೆದುಕೊಂಡಿದ್ದಾರೆ. ತನ್ನ ಇನ್ನೊಂದು ಪೋಸ್ಟ್ ನಲ್ಲಿ ಬರೆದುಕೊಂಡ ಟೀನಾ ಘಾಯ್ ಎಲ್ಲಾ ಅಭಿಮಾನಿಗಳು ಕಾಮೆಂಟ್ ಬಾಕ್ಸ್‌ನಲ್ಲಿ ಹಿರಿಯ ನಟನ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ-ICICI ಹಾಗೂ ಪಿಎನ್ಬಿ ಗ್ರಾಹಕರಿಗೊಂದು ಶಾಕಿಂಗ್ ಸುದ್ದಿ, ಹೆಚ್ಚಾಗಲಿದೆ ಇಎಂಐ ಹೊರೆ
ವಿವರಗಳನ್ನು ಹಂಚಿಕೊಳ್ಳಲು ನಿರಾಕರಿಸಿದ ಪೆಂಟಲ್ ಕುಟುಂಬ
ಇದೇ ವೇಳೆ ಮಾಧ್ಯಮ ವರದಿಗಳ ಪ್ರಕಾರ, ಗೂಫಿ ಪೈಂಟಲ್ ಅವರ ಕುಟುಂಬ ಸದಸ್ಯರು ಯಾರೊಂದಿಗೂ ಯಾವುದೇ ವಿವರಗಳನ್ನು ಹಂಚಿಕೊಳ್ಳದಿರಲು ನಿರ್ಧರಿಸಿದ್ದಾರೆ ಎಂದು ಟೀನಾ ಘಾಯ್ ಹೇಳಿದ್ದಾರೆ. ಗೂಫಿಯ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತೇನೆ ಎಂದು ಟೀನಾ ಹೇಳಿದ್ದಾರೆ. ಗೂಫಿ ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಮೇ 31 ರಂದು ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾಯಿತು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ-Fuel Price Update: ಪೆಟ್ರೋಲ್ ಡೀಸೆಲ್ ಬೆಲೆಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ ಪ್ರಕಟ
ಗೂಫಿ ಪೈಂಟಲ್ ವೃತ್ತಿ
ಗೂಫಿ ಪೈಂಟಲ್ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಅವರು 1980 ರ ದಶಕದಲ್ಲಿ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇದೇ ವೇಳೆ ಅವರು ಟಿವಿ ಧಾರಾವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಆದಾಗ್ಯೂ, ಬಿಆರ್ ಚೋಪ್ರಾ ಅವರ ಧಾರಾವಾಹಿ ಮಹಾಭಾರತದಲ್ಲಿ ಶಕುನಿ ಮಾಮಾ ಪಾತ್ರವನ್ನು ನಿರ್ವಹಿಸುವ ಮೂಲಕ ಅವರು ಮನೆಮನೆ ಮಾತಾಗಿದ್ದರು. ಇಂದಿಗೂ ಈ ಪಾತ್ರ ಜನಮಾನಸದಲ್ಲಿ ಜೀವಂತವಾಗಿದೆ. ಗೂಫಿ ನಟನಾಗುವ ಮೊದಲು ಎಂಜಿನಿಯರ್ ಆಗಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ