ಬಹು ನಿರೀಕ್ಷೆಯ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 125ನೇ 'ವೇದ' ಸಿನಿಮಾ ಡಿಸೆಂಬರ್ 23ಕ್ಕೆ ರಿಲೀಸ್ ಆಗುತ್ತಿದೆ. ಇದೀಗ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಶಿವಣ್ಣನ ಮನೆಯಲ್ಲೇ ಭರ್ಜರಿಯಾಗಿ ನಡೆಯೋ ಮೂಲಕ ಸಿನಿಮಾ ಮತ್ತಷ್ಟು ಸೌಂಡ್ ಮಾಡಿದೆ. ವೇದ ಪ್ರೀ ರಿಲೀಸ್ ಇವೆಂಟ್ನಲ್ಲಿ ಮಾತನಾಡಿದ ಶಿವಣ್ಣ, ನನ್ನ ಮತ್ತು ಮಾಧ್ಯಮದವರ ಮಧ್ಯೆ ಯಾವತ್ತು ಘರ್ಷಣೆ ಆಗಿಲ್ಲ. 35 ವರ್ಷದಿಂದ ನಮ್ಮನ್ನ ಬೆಳೆಸಿದ್ದಾರೆ, ತಿದ್ದಿದ್ದಾರೆ. ಅವರ ಪ್ರೀತಿ ಕೊಟ್ಟಿದ್ದಾರೆ. ಈಗಿನ ಮಾಧ್ಯಮ ಮಿತ್ರರು ಕೂಡ ನಮ್ಮನ್ನ ಪ್ರೀತಿಸುತ್ತಾರೆ ಎಂದು ಹೇಳಿದರು.
ನನಗೆ ನನ್ನ ತಾಯಿ ಮತ್ತು ನನ್ನ ಹೆಂಡತಿ ಎರಡು ಕಣ್ಣುಗಳಿದ್ದಂತೆ:
ನನ್ನ ಮೊದಲ ಸಿನಿಮಾ ಆನಂದ್ ತಾಯಿ ಮಾಡಿದ್ರು.125ನೇ ಸಿನಿಮಾವನ್ನು ನನ್ನ ಪತ್ನಿ ನಿರ್ಮಿಸಿದ್ದಾರೆ. ನನಗೆ ನನ್ನ ತಾಯಿ ಮತ್ತು ನನ್ನ ಹೆಂಡತಿ ಇಬ್ಬರೂ ಎರಡು ಕಣ್ಣುಗಳಿದ್ದಂತೆ. ವೇದ ಸಿನಿಮಾವನ್ನ ತಮಿಳು ಭಾಷೆಯಲ್ಲೂ ಕೂಡ ನಾನೆ ಡಬ್ ಮಾಡಿದ್ದೇನೆ. ಗೀತಾರನ್ನ ನನಗಿಂತ ಜಾಸ್ತಿ ವೇದ ಸಿನಿಮಾ ತಂಡ ಇಷ್ಟ ಪಡುತ್ತೆ. ಉಮಾಶ್ರೀ ಮೇಡಂ ವೇದ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾರೆ.125 ಇರೋ ನನ್ನ ಸಿನಿಮಾಗಳು ಸಾವಿರ ಸಿನಿಮಾ ಆಗಲಿ ಎಂದರು.
ಇದನ್ನೂ ಓದಿ- ಸ್ಯಾಂಡಲ್ ವುಡ್ ಸ್ಟಾರ್ ನಟರ ತ್ರಿವೇಣಿ ಸಂಗಮಕ್ಕೆ ಸಜ್ಜಾಗಿದೆ ವೇದಿಕೆ.! ಶಿವಣ್ಣ, ಉಪ್ಪಿ ಮತ್ತೆ ಒಂದಾಗಿ ನಟಿಸೋದು ಫಿಕ್ಸ್!
ಫ್ಲವರ್ ಇದ್ರೇನೆ ಫೈಯರ್:
ಫ್ಲವರ್ ಇದ್ರೇನೆ ಫಯರ್ ಬರೋದು. ನನ್ನ ಪಾತ್ರದಲ್ಲಿ ಫ್ಲವರ್ ಇದೆ, ಹಾಗೆಯೇ ಫೈಯರ್ ಕೂಡಾ ಇದೆ. ನಾರ್ಮಲ್ ಹ್ಯೂಮನ್ ಬೀಯಿಂಗ್ ಪಾತ್ರ ನನ್ನದು. ಹೂವಿನಂತ ಮನಸ್ಸಿರೋ ವ್ಯಕ್ತಿ ವೇದ ಅನ್ನೋದನ್ನ ಸಿನಿಮಾ ಬಗ್ಗೆ ಒಂದಷ್ಟು ಹಿಂಟ್ ಕೊಟ್ಟರು ಶಿವಣ್ಣ.
ನಾಳೆನೇ 20 ಸಿನಿಮಾ ಮಾಡೋ ಎನರ್ಜಿಯನ್ನ ದೇವರು ಕೊಟ್ಟಿದ್ದಾನೆ ಅನ್ನೋ ಮಾತುಗಳನ್ನ ಸಿನಿಮಾ ಜರ್ನಿ ಮತ್ತು ವೇದ ಬಗ್ಗೆ ಹೇಳಿದ್ರು ಹ್ಯಾಟ್ರಿಕ್ ಹೀರೋ ಶಿವಣ್ಣ.
ಇದನ್ನೂ ಓದಿ- ಕಾಂತಾರದಲ್ಲಿ ರಿಷಬ್ ಸೇರಿದಂತೆ ಇಡೀ ತಾರಾಗಣ ಪಡೆದ ಸಂಭಾವನೆ ಎಷ್ಟು? ಕೇಳಿದ್ರೆ ಬೆಚ್ಚಿಬೀಳ್ತಿರಾ!
ವೇದ ಸಿನಿಮಾ ಬಗ್ಗೆ ಗೀತಕ್ಕ ಮಾತನಾಡಿ, ನಾವು 100 ನೇ ಸಿನಿಮಾ ಮಾಡಬೇಕಿತ್ತು.ಆದ್ರೆ ಪ್ರೇಮ್ ಮತ್ತು ರಕ್ಷಿತಾ ನಾವೇ ಮಾಡಬೇಕು ಅಂತ ಕೇಳಿದ್ದಕ್ಕೆ ಬಿಟ್ಟು ಕೊಟ್ಟೆ. ನನಗೆ ವೇದ ಸಿನಿಮಾದಲ್ಲಿ ಒಳ್ಳೆಯ ಫ್ರೆಂಡ್ಸ್ ಸಿಕ್ಕಿದ್ದಾರೆ. ನಿರ್ದೇಶಕ ಹರ್ಷ ನನಗೆ ಎಲ್ಲಾ ಕಲಿಸಿಕೊಟ್ರು. ಶ್ವೇತಾ ಚಂಗಪ್ಪ ಮಾಡಿದ ಒಂದು ಫೈಯರ್ ಸೀನ್ ನೋಡಿ ತುಂಬಾ ಬೇಜಾರ್ ಆಯ್ತು. ನನ್ನ ಚಿಕ್ಕಮಗಳು ನನಗೆ ತುಂಬಾ ಚೆನ್ನಾಗಿ ಸಪೋರ್ಟ್ ಮಾಡಿದ್ರು. ಅರ್ಜುನ್ ಜನ್ಯ ಇಷ್ಟು ಚೆನ್ನಾಗಿರೋ ಹಾಡು ಕೊಡ್ತಾರೆ. ಅದು ಹೇಗೆ ಅಂತ ನನಗೆ ಅರ್ಥ ಆಗಲ್ಲ ಎಂದು ಇಡೀ ಸಿನಿ ತಂಡವನ್ನು ಹೊಗಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.