ಮುಂಬೈ: ರಮಾನಂದ್ ಸಾಗರ್ ಅವರ ರಾಮಾಯಣ ಧಾರಾವಾಹಿ ಮತ್ತೆ ಟಿವಿಯಲ್ಲಿ ಪ್ರಸಾರವಾಗಲಿದೆ. ಪ್ರಭಾಸ್, ಸೈಫ್ ಅಲಿ ಖಾನ್ ಮತ್ತು ಕೃತಿ ಸನೋನ್ ನಟನೆಯ ‘ಆದಿಪುರುಷ’ ಚಿತ್ರದ ವಿವಾದದಿಂದ ‘ರಾಮಾಯಣ’ ಧಾರಾವಾಹಿ ಬಗ್ಗೆ ಮತ್ತೊಮ್ಮೆ ಚರ್ಚೆ ನಡೆಯುತ್ತಿದೆ.
500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ‘ಆದಿಪುರುಷ’ದಲ್ಲಿ ಮೂಲ ರಾಮಾಯಣವನ್ನು ತಿರುಚಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ದೇಶ-ವಿದೇಶಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ವಿಷಯ ಇದೀಗ ನ್ಯಾಯಾಲಯದ ಮೆಟ್ಟಿಲೇರಿದೆ. ನೆಟಿಜನ್ಗಳು ರಮಾನಂದ್ ಸಾಗರ್ ಅವರ ಧಾರಾವಾಹಿಯೊಂದಿಗೆ ಹೋಲಿಸಿ ‘ಆದಿಪುರುಷ್’ ತಯಾರಕರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ‘ನ್ಯಾನೋ ನಾರಾಯಣಪ್ಪ’ ಎಂಟ್ರಿಗೆ ಮುಹೂರ್ತ ಫಿಕ್ಸ್..ಕೆಜಿಎಫ್ ತಾತಾನ ಕೊನೆಯ ಸಿನಿಮಾ ಜುಲೈ 7ಕ್ಕೆ ಬಿಡುಗಡೆ..!
ಇದೆಲ್ಲದರ ನಡುವೆ 80ರ ದಶಕದಲ್ಲಿ ದೂರದರ್ಶನದಲ್ಲಿ ಪ್ರದರ್ಶನಗೊಂಡ ರಮಾನಂದ ಸಾಗರ್ ಅವರ 'ರಾಮಾಯಣ' ಧಾರಾವಾಹಿಯನ್ನು ಒಟಿಟಿ ಹಾಗೂ ಟಿವಿಯಲ್ಲಿ ಪ್ರಸಾರ ಮಾಡಲು ಶೆಮಾರೂ(Shemaroo Entertainment) ಕಂಪನಿ ಸಿದ್ಧತೆ ನಡೆಸಿದೆ. ರಮಾನಂದ್ ಸಾಗರ್ ಅವರ ಜನಪ್ರಿಯ ಧಾರಾವಾಹಿ ರಾಮಾಯಣ ದೂರದರ್ಶನದಲ್ಲಿ ಪ್ರಸಾರವಾಗಿ 30 ವರ್ಷಗಳಿಗೂ ಹೆಚ್ಚು ಸಮಯವಾಗಿದೆ. ಆದರೆ ಇಂದಿಗೂ ಜನರು ಅದರ ಪ್ರತಿಯೊಂದು ಪಾತ್ರದ ಅನೇಕ ದೃಶ್ಯಗಳನ್ನು ನೆನಪಿಸಿಕೊಳ್ಳುತ್ತಾರೆ. ಕಾರ್ಯಕ್ರಮದಲ್ಲಿ ರಾಮನಾಗಿ ಅರುಣ್ ಗೋವಿಲ್, ಸೀತೆಯಾಗಿ ದೀಪಿಕಾ ಚಿಖಾಲಿಯಾ, ಲಕ್ಷ್ಮಣನಾಗಿ ಸುನಿಲ್ ಲಾಹಿರಿ, ದಾರಾ ಸಿಂಗ್ ಮತ್ತು ಅರವಿಂದ್ ತ್ರಿವೇದಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಮಾಯಣ ಮೂಲತಃ ದೂರದರ್ಶನದಲ್ಲಿ 1987-88ರಲ್ಲಿ ಪ್ರಸಾರವಾಯಿತು. ಅದರ ಜನಪ್ರಿಯತೆ ನೋಡಿ ನಂತರ ಮತ್ತೆ ಬೇರೆ ವಾಹಿನಿಗಳಲ್ಲಿಯೂ ಪ್ರಸಾರವಾಯಿತು.
ಇದೀಗ ಮತ್ತೆ ರಾಮಾಯಣವನ್ನು ಟಿವಿಯಲ್ಲಿ ಪ್ರಸಾರ ಮಾಡುತ್ತದೆ. ಜುಲೈ 3ರಿಂದ ಸಂಜೆ 7.30ಕ್ಕೆ ಪೌರಾಣಿಕ ಕಾರ್ಯಕ್ರಮವನ್ನು ಚಾನೆಲ್ನಲ್ಲಿ ಪ್ರಸಾರ ಮಾಡಲಾಗುವುದು ಎಂದು ಶೆಮರೂ ಟಿವಿ ಪ್ರಕಟಿಸಿದೆ. ನೀವೂ ಈ ಧಾರಾವಾಹಿಯನ್ನು ಮಿಸ್ ಮಾಡಿಕೊಂಡಿದ್ದರೆ ಅಥವಾ ಇನ್ನೂ ನೋಡದೇ ಇರುವವರು ಸಹ ನೋಡಬಹುದು.
ಇದನ್ನೂ ಓದಿ: ಹೊಸಬರ 'ಲವ್' ಅಂಗಳದಿಂದ ಬಂತು ಪ್ರೇಮಗೀತೆ.. ಓ ನಿರ್ದೇಶಕರ ಹೊಸ ಹೆಜ್ಜೆ
ಧಾರಾವಾಹಿಯ ವೀಡಿಯೊ ಕ್ಲಿಪ್ ಹಂಚಿಕೊಳ್ಳುವಾಗ ಶೆಮರೂ ಸಾಮಾಜಿಕ ಮಾಧ್ಯಮ ಪುಟದಲ್ಲಿ ಈ ಮಾಹಿತಿ ನೀಡಿದೆ. ‘ಪ್ರಿಯ ವೀಕ್ಷಕರಾದ ನಿಮ್ಮೆಲ್ಲರಿಗಾಗಿ ನಾವು ವಿಶ್ವವಿಖ್ಯಾತ ಪೌರಾಣಿಕ ಧಾರಾವಾಹಿ ರಾಮಾಯಣವನ್ನು ಮತ್ತೆ ತರುತ್ತಿದ್ದೇವೆ. ಜುಲೈ 3ರಿಂದ ಸಂಜೆ 7.30ಕ್ಕೆ ನಿಮ್ಮ ನೆಚ್ಚಿನ ಚಾನಲ್ ಶೆಮರೂ ಟಿವಿಯಲ್ಲಿ ‘ರಾಮಾಯಣ’ವನ್ನು ವೀಕ್ಷಿಸಿ’ ಎಂದು ಪೋಸ್ಟ್ನಲ್ಲಿ ತಿಳಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.