Veerappa Nayaka Movie: ಸುಮಾರು 25 ವರ್ಷಗಳ ಹಿಂದೆ ತೆರೆ ಕಂಡ 'ವೀರಪ್ಪ ನಾಯ್ಕ' ಚಿತ್ರ 50 ವಾರಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿತ್ತು. ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ಕಲಾ ಸಾಮ್ರಾಟ್ ಎಸ್. ನಾರಾಯಣ್ ಜೋಡಿಯ ಮೊದಲ ಸಿನಿಮಾ ʼವೀರಪ್ಪ ನಾಯ್ಕʼ ದೇಶ ಪ್ರೇಮದ ಕಥಾಹಂದ ಹೊಂದಿರುವ ಅದ್ಭುತ ಚಿತ್ರ..
ದೇಶ ಸೇವೆಯೇ ಈಶ ಸೇವೆ ಎಂದು ಬದುಕುವ ಗಾಂಧಿವಾದಿ ವೀರಪ್ಪ ನಾಯ್ಕನ ಜೀವನದ ಏಳುಬೀಳಿನ ಕಥೆ ಚಿತ್ರದಲ್ಲಿದೆ.. ಅಲ್ಲದೆ, ಕೊನೆಗೆ ತನ್ನ ಮಗನೇ ದೇಶಕ್ಕೆ ಕಂಟಕವಾದಾಗ, ಅಂತಹ ಮಗನನ್ನು ಖುದ್ದು ಅವರ ಪತ್ನಿ ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾಳೆ.. ಆದರೆ ಜೈಲಿನಿಂದ ಹೊರ ಬಂದ ನಂತರವೂ ಬದಲಾಗದ ಮಗ ತಂದೆಯಿಂದ ಹತನಾಗುತ್ತಾನೆ...
ಹೀಗೆ ದೇಶಭಕ್ತಿಯ ಕಥಾಹಂದರ ಹೊಂದಿರುವ ಚಿತ್ರವನ್ನು ಬಹಳ ಅಚ್ಚು ಕಟ್ಟಾಗಿ ತೋರಿಸಿದ್ದಾರೆ ಕಲಾ ಸಾಮ್ರಾಟ್ ಎಸ್. ನಾರಾಯಣ್.. ಇನ್ನು ಸಾಹಸ ಸಿಂಹ ಅವರ ಅಭಿನಯದ ಬಗ್ಗೆ ಹೇಳೋಕಾಗುತ್ತೆ... ಅದ್ಭುತ ನಟ ವೀರಪ್ಪ ನಾಯ್ಕ ಪಾತ್ರದಲ್ಲಿ ಜೀವಿಸಿದ್ದರು ಅಂದ್ರೆ ತಪ್ಪಾಗಲ್ಲ... ಸಧ್ಯ ಈ ಸಿನಿಮಾ ಕುರಿತು ಸುದ್ದಿಯೊಂದು ಮುನ್ನೆಲೆಗೆ ಬಂದಿದೆ..
ನಿರ್ದೇಶಕ, ನಟ ಎಸ್ ನಾರಾಯಣ್... ಒಮ್ಮೆ ತಿರುಪತಿಗೆ ಹೋಗುವಾಗ ನಾನು ಹಳೆ ಪೇಪರ್ ಓದುತ್ತಾ ಕುಳಿತಿದ್ದೆ.. ಆಗ ತಮಿಳು ದಿನಪತ್ರಿಕೆಯಲ್ಲಿ ಕರ್ನಾಟಕ ಗರಗ ಊರಿನ ಬಗ್ಗೆ ಬರೆಯಲಾಗಿತ್ತು... ದೇಶಕ್ಕೆ ತ್ರಿವರ್ಣ ಧ್ವಜ ಕೊಡುಗೆ ನೀಡುವುದು ನಮ್ಮ ಕರ್ನಾಟಕ ಈ ಹಳ್ಳಿ ಎಂಬ ವಿಚಾರ ತಿಳಿದು ಖುಷಿಯಾಯ್ತು... ಆಗ ನನ್ನ ತಲೆಯಲ್ಲಿ ಒಂದು ಕಥೆ ಹೊಳೆಯಲು ಆರಂಭಿಸಿತು ಅಂತ ವೀರಪ್ಪ ನಾಯ್ಕ ಸಿನಿಮಾ ಹುಟ್ಟಿನ ಬಗ್ಗೆ ಹೇಳಿಕೊಂಡಿದ್ದಾರೆ..
ಇದನ್ನೂ ಓದಿ:ಮಗುವಿನ ನಿರೀಕ್ಷೆಯಲ್ಲಿ ಖ್ಯಾತ ನಟಿ... ಇಷ್ಟು ಬೇಗ ಫ್ಯಾನ್ಸ್ಗೆ ಸಿಕ್ತಾ ಗುಡ್ ನ್ಯೂಸ್ !
ತಿರುಪತಿಯಿಂದ ಬಂದ ನಂತರ ಕಥೆ, ಚಿತ್ರಕಥೆ ಸಂಪೂರ್ಣವಾಗಿ ಸಿದ್ಧಮಾಡಿದೆ. ನಟ ದರ್ಶನ್ನ ಮನಸ್ಸಿನಲ್ಲಿಟ್ಟುಕೊಂಡು ವೀರಪ್ಪ ನಾಯ್ಕನ ಮಗನ ಪಾತ್ರವನ್ನು ಬರೆದಿದ್ದೆ. ದರ್ಶನ್ಗೆ ಒಳ್ಳೆಯ ಪಾತ್ರಗಳನ್ನು ಕೊಡಬೇಕು ಎಂದುಕೊಂಡಿದ್ದೆ. ಆದರೆ ಅನಿವಾರ್ಯ ಕಾರಣಗಳಿಂದ ಆ ಪಾತ್ರ ಸೌರವ್ ಮಾಡಬೇಕಾಯಿತು ಅಂತ ಎಸ್. ನಾರಾಯಣ್ ಹೇಳಿದರು..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.