ಬೇಸಿಗೆಗೂ ಮುನ್ನವೇ ಭಾರೀ ಕುಸಿತ ಕಂಡ AC ಬೆಲೆ ! ಹವಾನಿಯಂತ್ರಣದ ಖರೀದಿ ಮೇಲೆ ಭಾರೀ ರಿಯಾಯಿತಿ

 AC ತಂಪಾದ ಗಾಳಿಯನ್ನು ಬೀಸುತ್ತದೆ ಮತ್ತು ಕಡಿಮೆ ಸಮಯದಲ್ಲಿ ಇಡೀ ಕೋಣೆಯನ್ನು ತಂಪಾಗಿಸುತ್ತದೆ. ಈ ಸಮಯದಲ್ಲಿ AC ಖರೀದಿಸುವುದು ಬುದ್ಧಿವಂತ ಕ್ರಮವಾಗಬಹುದು.  

Written by - Ranjitha R K | Last Updated : Feb 16, 2025, 03:00 PM IST
  • ಬೇಸಿಗೆ ಕಾಲ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ.
  • ಈ ಬಾರಿ ಬಿಸಿಲ ತಾಪ ಹೆಚ್ಚೇ ಇರಲಿದೆ ಎಂದು ಅಂದಾಜಿಸಲಾಗಿದೆ.
  • AC ಅನ್ನು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ
ಬೇಸಿಗೆಗೂ ಮುನ್ನವೇ ಭಾರೀ ಕುಸಿತ ಕಂಡ AC ಬೆಲೆ ! ಹವಾನಿಯಂತ್ರಣದ ಖರೀದಿ ಮೇಲೆ ಭಾರೀ ರಿಯಾಯಿತಿ   title=

ಬೇಸಿಗೆ ಕಾಲ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಈ ಬಾರಿ ಬಿಸಿಲ ತಾಪ ಹೆಚ್ಚೇ ಇರಲಿದೆ ಎಂದು ಅಂದಾಜಿಸಲಾಗಿದೆ. ಬಿಸಿಲ ಬೇಗೆಯನ್ನು ತಪ್ಪಿಸಲು  ಹವಾನಿಯಂತ್ರಣ ಅಂದರೆ AC ಅನ್ನು ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ AC ತಂಪಾದ ಗಾಳಿಯನ್ನು ಬೀಸುತ್ತದೆ ಮತ್ತು ಕಡಿಮೆ ಸಮಯದಲ್ಲಿ ಇಡೀ ಕೋಣೆಯನ್ನು ತಂಪಾಗಿಸುತ್ತದೆ. ಈ ಸಮಯದಲ್ಲಿ AC ಖರೀದಿಸುವುದು ಬುದ್ಧಿವಂತ ಕ್ರಮವಾಗಬಹುದು. ಯಾಕೆಂದರೆ ಇದೀಗ AC ಮೇಲೆ ಉತ್ತಮ ಆಫರ್ ಸಿಗುತ್ತಿದೆ. ಇದರಿಂದಾಗಿ  ಕೈಗೆಟುಕುವ ಬೆಲೆಯಲ್ಲಿ AC ಖರೀದಿಸಬಹುದು.

ಸಾಮಾನ್ಯವಾಗಿ ಜನರು ಅಮೆಜಾನ್ ಅಥವಾ ಫ್ಲಿಪ್‌ಕಾರ್ಟ್‌ನಿಂದ ಎಸಿ ಖರೀದಿಸಲು ಬಯಸುತ್ತಾರೆ. ಆದರೆ, ಈ ಸಮಯದಲ್ಲಿ ವಿಜಯ್ ಸೇಲ್ಸ್‌ನಲ್ಲಿ ಎಸಿ ಮೇಲೆ ಉತ್ತಮ ರಿಯಾಯಿತಿ ಲಭ್ಯವಿದೆ. ಇದರೊಂದಿಗೆ ನೀವು ಅಗ್ಗದ ಬೆಲೆಯಲ್ಲಿ AC ಖರೀದಿಸಬಹುದು. ಅಲ್ಲದೆ ಬ್ಯಾಂಕ್ ರಿಯಾಯಿತಿಯನ್ನು ಕೂಡಾ ಸೇರಿಸಿದರೆ, ಬೆಲೆ ಇನ್ನೂ ಕಡಿಮೆಯಾಗುತ್ತದೆ. 

ಇದನ್ನೂ ಓದಿ : ರಿಲಯನ್ಸ್ ಜಿಯೋ ಶಿವರಾತ್ರಿ ಧಮಾಕ ಆಫರ್: ಪ್ರಿಪೇಯ್ಡ್ ಗ್ರಾಹಕರಿಗೆ ಬಂಪರ್, Unlimited Call, DATA ಫ್ಲೈಟ್ ಬುಕ್ಕಿಂಗ್'ನಲ್ಲೂ ಕೊಡುಗೆ

1. ವೋಲ್ಟಾಸ್ 1 ಟನ್ (3 Star - Adjustable Inverter) Split AC
ಈ ವೋಲ್ಟಾಸ್ ಎಸಿ 1 ಟನ್‌ನಲ್ಲಿ ಬರುತ್ತದೆ. ಈ ಎಸಿ ಸಣ್ಣ ಕೋಣೆಗೆ ಉತ್ತಮ ಆಯ್ಕೆಯಾಗಿರಬಹುದು. ಇದು 3 ಸ್ಟಾರ್ ರೇಟಿಂಗ್ ಪಡೆದಿದ್ದು, ಇನ್ವರ್ಟರ್ ತಂತ್ರಜ್ಞಾನವನ್ನು ಇದರಲ್ಲಿ ಬಳಸಲಾಗಿದೆ. ಇದರೊಂದಿಗೆ, ಮಲ್ಟಿ ಅಡ್ಜಸ್ಟ್ ಮೋಡ್ ಮತ್ತು ಸ್ಲೀಪ್ ಮೋಡ್ ಜೊತೆಗೆ ಇನ್ನೂ ಹಲವು ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.

ಈ AC ಬೆಲೆ 56,990 ರೂ. ಆದರೆ ಇದು ವಿಜಯ್ ಸೇಲ್ಸ್‌ನಲ್ಲಿ 46% ರಿಯಾಯಿತಿಯಲ್ಲಿ ಲಭ್ಯವಿದೆ. ರಿಯಾಯಿತಿಯ ನಂತರ, ನೀವು ಇದನ್ನು 30,990 ರೂ.ಗೆ ಇಳಿಯುತ್ತದೆ. ಯೆಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದರೆ ಗ್ರಾಹಕರು 2,500 ರೂ.ಗಳವರೆಗೆ ತಕ್ಷಣದ ರಿಯಾಯಿತಿಯನ್ನು ಪಡೆಯಬಹುದು. ಬೇಕಾದರೆ ಈ ACಯನ್ನು EMI ಮೂಲಕವೂ ಖರೀದಿಸಬಹುದು. 

ಇದನ್ನೂ ಓದಿ : UPI ಬಳಕೆದಾರರಿಗೆ ಗುಡ್ ನ್ಯೂಸ್: ಪೇಮೆಂಟ್ ಫೇಲ್ ಆದ್ರೆ ಟೆನ್ಷನ್ ಬೇಡವೇ ಬೇಡ..! NPCIನಿಂದ ಮಹತ್ವದ ಬದಲಾವಣೆ

2. ಡೈಕಿನ್ ಸ್ಟ್ಯಾಂಡರ್ಡ್ ಪ್ಲಸ್ (Daikin Standard Plus Series Split 1.5 Ton 3 Star Inverter AC):
ಡೈಕಿನ್ ನ ಈ 1.5 ಟನ್ AC 3 ಸ್ಟಾರ್ ರೇಟಿಂಗ್‌ನೊಂದಿಗೆ ಬರುತ್ತದೆ. ಇದರಲ್ಲಿ PM 2.5 ಫಿಲ್ಟರ್ ಜೊತೆಗೆ ಹಲವು ಸುಧಾರಿತ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. ಅದನ್ನು ಮನೆ ಅಥವಾ ಕಚೇರಿಯಲ್ಲಿ ಇನ್ಸ್ಟಾಲ್ ಮಾಡಬಹುದು. ಇದರ ಬೆಲೆ 58,400 ರೂ. ಆದರೆ 37% ರಿಯಾಯಿತಿಯ ನಂತರ ಇದು 36,990 ರೂ.ಗೆ ಲಭ್ಯವಿದೆ.ಈ ರೀತಿಯಾಗಿ ಈ ಎಶಿ ಖರೀದಿ ಮೇಲೆ 21,410 ರೂ.ಗಳನ್ನು ಉಳಿಸಬಹುದು. ಅಲ್ಲದೆ, ನೀವು ಯೆಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಪಾವತಿ ಮಾಡಿದರೆ, ನಿಮಗೆ 2,500 ರೂ.ಗಳವರೆಗೆ ತಕ್ಷಣದ ರಿಯಾಯಿತಿ ಸಿಗುತ್ತದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News