Vinod Mehra: ಸುಂದರ ನೋಟ, ಅಪಾರ ಯಶಸ್ಸು 45ನೇ ವಯಸ್ಸಿನಲ್ಲಿ ಈ ನಟಿ ಅಂತ್ಯ ಕಂಡಿದ್ದ, ಜೀವನವನ್ನು ಆನಂದಿಸುವ ವಯಸ್ಸಿನಲ್ಲಿ ಬಾರದ ಲೋಕ ಸೇರಿದ್ದ.
ರಾಗ್ನಿ ಚಿತ್ರದಲ್ಲಿ ಕಿಶೋರ್ ಕುಮಾರ್ ಅವರ ಕಿರಿಯ ಆವೃತ್ತಿಯನ್ನು ಚಿತ್ರಿಸುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಈತ. ಅಮರ್ ಪ್ರೇಮ್ , ಅನುರಾಗ್, ಪ್ರೇಮ್, ಘರ್, ಜಾನಿ ದುಷ್ಮನ್ ಮತ್ತು ನೌಕರ್ ಬಿವಿ ಕಾ ನಂತಹ ಬಾಲಿವುಡ್‌ನ ಕೆಲವು ಕಾಲಾತೀತ ಶ್ರೇಷ್ಠ ಚಿತ್ರಗಳನ್ನು ಮಾಡಿದ್ದಾರೆ.
ತಮ್ಮ ಆಕರ್ಷಕ ನೋಟ ಮತ್ತು ಆಕರ್ಷಕ ವ್ಯಕ್ತಿತ್ವದಿಂದ, ನಟ ವಿನೋದ್ ಮೆಹ್ರಾ ಪ್ರೇಕ್ಷಕರ ಹೃದಯಗಳನ್ನು ಗೆದ್ದವರಲ್ಲಿ ಒಬ್ಬರು. , ಈ ನಟ 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಆಗಿನ ಕಾಲಕ್ಕೆ ಚಾಕೊಲೇಟ್ ಬಾಯ್ ಎಂದು ಕರೆಸಿಕೊಂಡಿದ್ದರು.
ವಿನೋದ್ ಮೆಹ್ರಾ, ನಾಲ್ಕು ಬಾರಿ ಮದುವೆಯಾದರೂ ಕೂಡ ಅವರ ಜೀವನದಲ್ಲಿ ನೆಮ್ಮದಿ ಇರಲಿಲ್ಲ. ನಟಿ ರೇಖಾ ಅವರನ್ನು ಹುಚ್ಚನಂತೆ ಪ್ರೀತಿಸಿದ್ದ ಈತ, ಕೊನೆಗೆ ಅವರ ತಾಯಿ ನೋಡಿ ನಿಶ್ಚಯಿಸಿದ್ದ ಹುಡುಗಿಯನ್ನು 1970 ರಲ್ಲಿ ಮದುವೆಯಾದರು. ಮದುವೆಯ ನಂತರ ನಟನಿಗೆ ಹೃದಯಾಘಾತವಾಯಿತು ಜೀವನದಲ್ಲಿನ ಪರಿಸ್ಥಿತಿ ಹದಗೆಡ ತೊಡಗಿತ್ತು. ವೈವಾಹಿಕ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿತು.
ಹೃದಯಾಘಾತದಿಂದ ಚೇತರಿಸಿಕೊಂಡು, ವಿನೋದ್ ಮತ್ತೆ ಫರ್ಮ್‌ಗೆ ಮರಳಿದರು. ಸಹನಟಿ ಬಿಂದಿಯಾ ಗೋಸ್ವಾಮಿ ಅವರೊಂದಿಗೆ ಹತ್ತರಿವಾದರು. ಪತ್ನಿಗೆ ಈ ವಿಚಾರ ಗೊತ್ತಾಗುತ್ತಿದ್ದಂತೆ ಆಕೆ ನಟನಿಂದ ದೂರವಾಗಿದ್ದರು.
ಮೆಹ್ರಾ ಮತ್ತು ಬಿಂದಿಯಾ 1980 ರಲ್ಲಿ ಮದುವೆಯಾದರು. ಈ ಸಂದರ್ಭದಲ್ಲಿ ವಿನೋದ್ ಅವರ ಜನಪ್ರಿಯತೆ ಕ್ಷೀಣಿಸಲು ಪ್ರಾರಂಭಿಸಿತು, ಅವರ ಮೇಲಿದ್ದ ಅಭಿಮಾನವನ್ನು ಜನರು ಕಳೆದುಕೊಳ್ಳಲು ಪ್ರಾರಂಭಿಸಿದರು. ಸ್ಟಾರ್ ನಟನ ಜನಪ್ರೀಯತೆ ಕ್ಷೀಣಿಸುತ್ತಿದ್ದಂತೆ ಬಿಂದಿಯಾ, ವಿನೋದ್ ಅವರನ್ನು ಬಿಟ್ಟು ಹೋದರು.
ನಂತರ, ಮೆಹ್ರಾ ಮತ್ತು ರೇಖಾ ನಡುವಿನ ಸಂಬಂಧದ ಬಗ್ಗೆ ವದಂತಿಗಳು ಹಬ್ಬಿದ್ದವು. ವರದಿಗಳ ಪ್ರಕಾರ, ವಿನೋದ್ ಮತ್ತು ರೇಖಾ ರಹಸ್ಯವಾಗಿ ವಿವಾಹವಾಗಿದ್ದರು. ವರದಿಯ ಪ್ರಕಾರ, ಮೆಹ್ರಾಳ ತಾಯಿ ರೇಖಾ ಅವರನ್ನು ವಿರೋಧಿಸಿದ ಕಾರಣ ವಿನೋದ್ ಹಾಗೂ ರೇಖಾ ಅವರ ಸಂಬಂಧ ಮುರಿದುಬಿತ್ತು.
ರೇಖಾ ಅವರೊಂದಿಗಿನ ಸಂಬಂಧ ಮುರಿದುಬಿದ್ದ ನಂತರ, ವಿನೋದ್ ಪ್ರೀತಿಗೆ ಮತ್ತೊಂದು ಅವಕಾಶ ನೀಡಲು ನಿರ್ಧರಿಸಿದರು. ಕಿರಣ್ ಮೆಹ್ರಾ ಅವರನ್ನು ಭೇಟಿಯಾಗಿ ಅವರೊಂದಿಗೆ ಪ್ರೀತಿ ಬೆಳೆದಿತ್ತು, ನಂತರ ಈ ಪ್ರೀತಿ ವಿವಾಹಕ್ಕೆ ತಿರುಗಿತ್ತು. ಈ ಜೋಡಿ ಮದುವೆ ಕೂಡ ಆದರು. ದಂಪತಿಗೆ ರೋಹನ್ ಮತ್ತು ಸೋನಿಯಾ ಎಂಬ ಇಬ್ಬರು ಮಕ್ಕಳಿದ್ದರು. ಅವರ ವೈವಾಹಿಕ ಜೀವನವು ಯಶಸ್ವಿಯಾಗಿ ಸಾಗುತ್ತಿದ್ದಾಗ ದುರಂತ ಸಂಭವಿಸಿತು, ವಿನೋದ್‌ಗೆ ಮತ್ತೊಂದು ಹೃದಯಾಘಾತವಾಯಿತು. ಪ್ರೀತಿಯಲ್ಲಿ ಮತ್ತೆ ಮತ್ತೆ ಸೋತು ಪತ್ನಿ ಮಕ್ಕಳೊಂದಿಗೆ ಸಂತೋಷದಿಂದ ಬದುಕುತ್ತಿರುವಾಗಲೇ ಆ ದೇವರು ಕಟು ಮನಸ್ಸು ಮಾಡಿ ಬಿಟ್ಟಿದ್ದ, ವಿನೋದ್ ಅವರು 45 ನೇ ವಯಸ್ಸಿನಲ್ಲಿ ತಮ್ಮ ಪ್ರಾಣ ಕಳೆದುಕೊಂಡು ದುಂತ ಅಂತ್ಯ ಕರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.