"ನನ್ನ ಮಗನಲ್ಲಿ ಈ ಕೊರತೆ ಇದೆ..." ಸಲ್ಮಾನ್‌ ಖಾನ್‌ ಮದುವೆಯಾಗದೆ ಇರುವುದಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ಬಾಲಿವುಡ್‌ ಬ್ಯಾಡ್‌ ಬಾಯ್‌ನ ತಂದೆ..!!

Salman Khan Saleem Khan: ಬಾಲಿವುಡ್‌ ಭಾಯ್‌ಜಾನ್‌ ಎಂದೆ ಪ್ರಖ್ಯಾತಿಯಾಗಿರುವ ಸಲ್ಮಾನ್‌ ಖಾನ್‌ 58 ನೇ ವಯಸ್ಸಿನಲ್ಲಿಯೂ ಕೂಡ ಮದುವೆಯಾಗದೆ ಉಳಿದಿದ್ದಾರೆ. ನಟ ಮದುವೆ ಯಾಕೆ ಆಗುತ್ತಿಲ್ಲ ಎಂದು ಅಭಿಮಾನಿಗಳು ಹಲವು ವರ್ಷಗಳಿಂದ ಪ್ರಶ್ನೆಗಳನ್ನು ಕೇಳುತ್ತಿದ್ದು, ನಟ ಸಲ್ಮಾನ್‌ ಖಾನ್‌ ಅವರ ತಂದೆ ಇದೀಗ ಈ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. 

Written by - Zee Kannada News Desk | Last Updated : Nov 4, 2024, 11:45 AM IST
  • ಸಲ್ಮಾನ್‌ ಖಾನ್‌ 58 ನೇ ವಯಸ್ಸಿನಲ್ಲಿಯೂ ಕೂಡ ಮದುವೆಯಾಗದೆ ಉಳಿದಿದ್ದಾರೆ.
  • ನಟ ಸಲ್ಮಾನ್‌ ಖನಾ ಅವರ ತಂದೆ ಇದೀಗ ಈ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
  • ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.
"ನನ್ನ ಮಗನಲ್ಲಿ ಈ ಕೊರತೆ ಇದೆ..." ಸಲ್ಮಾನ್‌ ಖಾನ್‌ ಮದುವೆಯಾಗದೆ ಇರುವುದಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ಬಾಲಿವುಡ್‌ ಬ್ಯಾಡ್‌ ಬಾಯ್‌ನ ತಂದೆ..!! title=

Salman Khan Saleem Khan: ಬಾಲಿವುಡ್‌ ಭಾಯ್‌ಜಾನ್‌ ಎಂದೆ ಪ್ರಖ್ಯಾತಿಯಾಗಿರುವ ಸಲ್ಮಾನ್‌ ಖಾನ್‌ 58 ನೇ ವಯಸ್ಸಿನಲ್ಲಿಯೂ ಕೂಡ ಮದುವೆಯಾಗದೆ ಉಳಿದಿದ್ದಾರೆ. ನಟ ಮದುವೆ ಯಾಕೆ ಆಗುತ್ತಿಲ್ಲ ಎಂದು ಅಭಿಮಾನಿಗಳು ಹಲವು ವರ್ಷಗಳಿಂದ ಪ್ರಶ್ನೆಗಳನ್ನು ಕೇಳುತ್ತಿದ್ದು, ನಟ ಸಲ್ಮಾನ್‌ ಖಾನ್‌ ಅವರ ತಂದೆ ಇದೀಗ ಈ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. 

ನಟ ಸಲ್ಮಾನ್‌ ಖಾನ್‌ ಅವರು ತಮ್ಮ ಡೇಟಿಂಗ್‌ ವದಂತಿಗಳ ಕಾರಣದಿಂದ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ನಟ ಸಲ್ಮಾನ್‌ ಖಾನ್‌ 58 ವರ್ಷ ವಯಸ್ಸಾದರೂ ಕೂಡ ಮದುವೆಯಾಗದೆ ಉಳಿದಿರುವ ಕಾರಣವನ್ನು ಸಲೀಂ ಖಾನ್‌ ಇದೀಗ ಬಿಚ್ಚಿಟ್ಟಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಈ ವಿಡಿಯೋದಲ್ಲಿ ನಟ ಸಲ್ಮಾನ್‌ ಖಾನ್‌ ಅವರ ತಂದೆ ತಮ್ಮ ಮಗ ಇನ್ನೂ ಮದುವೆಯಾಗದೆ ಉಳಿದಿರಲು ಕಾರಣ ಏನು ಎಂಬುದನ್ನು ಬಿಚ್ಚಿಟ್ಟಿದ್ದಾರೆ. 

ಇನ್ನೂ, ಈ ವಿಡಿಯೋದಲ್ಲಿ ಮಾತನಾಡಿರುವ ಸಲೀಂ ಖಾನ್‌ " ಸಲ್ಮಾನ್‌ ಖಾನ್‌ ಮಗ್ದ ಮನಸ್ಸಿನವನು, ಅವನು ಸುಲಭವಾಗಿ ಸಂಬಂಧದ ಒಳಗೆ ಪ್ರವೇಶಿಸುತ್ತಾನೆ ಆದರೆ ಅವನಿಗೆ ಮದುವೆಯಾಗಲು ಧೈರ್ಯವಿಲ್ಲ. ಏಕೆಂದರೆ ನನ್ನ ಮಗ ತುಂಬಾ ಸರಳ ಸ್ವಭಾವವನ್ನು ಹೊಂದಿದ್ದಾನೆ, ಮತ್ತು ಅತೀ ಬೇಗನೆ ಎಲ್ಲರ ಕಡೆಗೆ ಆಕರ್ಷಿತನಾಗುತ್ತಾನೆ. ತಾನು ಮದುವೆಯಾಗುವ ಹೆಣ್ಣು ತನ್ನ ತಾಯಿಯಂತೆ ಕುಟುಂಬವನ್ನು ನಿರ್ವಹಿಸಬಹುದೇ ಎಂಬ ಅನುಮಾನ ಅವನಿಗೆ ಸದಾ ಇದ್ದೇ ಇರುತ್ತದೆ. ಅವನು ತನ್ನ ಪತ್ನಿ ತನ್ನ ತಾಯಿಯಂತೆ ಪತ್ನಿ ಮಕ್ಕಳನ್ನು ನೋಡಿಕೊಳ್ಳಬೇಕು ಹಾಗೂ ಮಕ್ಕಳಿಗೆ ಊಟವನ್ನು ಬೇಯಿಸಬೇಕು, ಅವರು ತಯಾರಾಗಲು ಸಹಾಯ ಮಾಡಬೇಕು, ಮನೆಕೆಲಸವನ್ನು ಮಾಡಿಕೊಂಡು ಹೋಗಬೇಕು ಎಂದು ಬಯಸುತ್ತಾನೆ. ಇಂದಿನ ಕಾಲದಲ್ಲಿ ಇದು ಸುಲಭವಲ್ಲ" ಎಂದಿದ್ದಾರೆ. 

ಇಷ್ಟು ವರ್ಷಗಳಲ್ಲಿ ನಟ ಸಲ್ಮಾನ್‌ ಖಾನ್‌ ಅವರು ಸೋಮಿ ಅಲಿ, ಸಂಗೀತ ಬಿಜಲಾನಿ, ಐಶ್ವರ್ಯ ರೈ, ಕತ್ರೀನಾ ಕೈಫ್‌, ಯೂಲಿಯಾ ವಂತೂರ್‌ ಅವರ ಜೊತೆ ಸಂಬಂಧ ಹೊಂದಿದ್ದರಾದರೂ, ಇವರ್ಯಾರನ್ನು ಕೂಡ ಸಲ್ಮಾನ್‌ ಖಾನ್‌ ಮದುವೆಯಾಗಿಲ್ಲ. ಇದೀಗ ಸಲ್ಮಾನ್ ಖಾನ್‌ ಅವರು ಮದುವೆಯಾಗದೆ ಉಳಿದ ಹಿಂದಿನ ಸತ್ಯವನ್ನು ಇದೀಗ ಸಲ್ಮಾನ್‌ ಖಾನ್‌ ತಂದೆ ಬಿಚ್ಚಿಟ್ಟಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News