ಅವನ ಪಾಪಕರ್ಮ ಅವನನ್ನೇ ಸುಡುತ್ತದೆ, ಮದಕ್ಕೆ ಕಾರುಣ್ಯದ ಅರಿವಿಲ್ಲಾ! ಹಿರಿಯ ನಟ ಜಗ್ಗೇಶ್ ಮಾರ್ಮಿಕ ಟ್ವೀಟ್‌

Jaggesh: ದರ್ಶನ್‌ ಕೊಲೆ ಪ್ರಕರಣದ ಬೆನ್ನಲ್ಲೆ ಜಗ್ಗೇಶ್‌ ಒಂದು ಟ್ವೀಟ್‌ ಮಾಡಿದ್ದಾರೆ. ಅವರು ಮಾಡಿರುವ ಟ್ವೀಟ್‌ ಇದಿಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ.  

Written by - Zee Kannada News Desk | Last Updated : Jun 12, 2024, 01:32 PM IST
  • ಕರ್ಮದ ಕುರಿತು ಜಗ್ಗೇಶ್‌ ಟ್ವೀಟ್‌.
  • "ಸರ್ವ ಆತ್ಮಾನೇನಬ್ರಹ್ಮ ಸರ್ವ ಜೀವಿಯಲ್ಲಿ ದೇವರಿದ್ದಾನೆ ಯಾರನ್ನು ಕೊಲ್ಲುವ ಹಕ್ಕು ಜೀವನಿಗಿಲ್ಲಾ!"
  • ದರ್ಶನ್‌ ಕೊಲೆ ಪ್ರಕರಣದ ಬೆನ್ನಲ್ಲೆ ಜಗ್ಗೇಶ್‌ ಮಾಡಿದ ಟ್ವೀಟ್‌ ವೈರಲ್‌
ಅವನ ಪಾಪಕರ್ಮ ಅವನನ್ನೇ ಸುಡುತ್ತದೆ, ಮದಕ್ಕೆ ಕಾರುಣ್ಯದ ಅರಿವಿಲ್ಲಾ! ಹಿರಿಯ ನಟ ಜಗ್ಗೇಶ್ ಮಾರ್ಮಿಕ ಟ್ವೀಟ್‌ title=

Jaggesh Tweet: ದರ್ಶನ್‌ ಕೊಲೆ ಪ್ರಕರಣ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ.  ಈ ಕುರಿತು ಸ್ಟಾರ್‌ ನಟರು ಪರ ವಿರೋಧಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೊರ ಹಾಕುತ್ತಿದ್ದಾರೆ. ನಿನ್ನೆಯಷ್ಟೆ ನಟಿ ರಮ್ಯಾ, ಸಂಜನಾ ಗಲ್ರಾನಿ ಈ ವಿಷಯದ ಕುರಿತು ತಮ್ಮ ಅಭಿಪ್ರಾಯ ಶೇರ್‌ ಮಾಡಿದ್ದರು. ಇದೀಗ ಹಿರಿಯ ನಟ ಜಗ್ಗೇಶ್‌ ಕರ್ಮದ ಕುರಿತು ಒಂದು ಟೀಟ್‌ ಮಾಡಿದ್ದು, ಇದು ಹೇಳಿದ್ದು ಯಾರಿಗೆ ಎಂಬ ಅನುಮಾನ ನೆಟ್ಟಿಗರನ್ನು ಕಾಡುತ್ತಿದೆ. 

"ಸರ್ವ ಆತ್ಮಾನೇನಬ್ರಹ್ಮ ಸರ್ವ ಜೀವಿಯಲ್ಲಿ ದೇವರಿದ್ದಾನೆ ಯಾರನ್ನು ಕೊಲ್ಲುವ ಹಕ್ಕು ಜೀವನಿಗಿಲ್ಲಾ!" ಹೀಗೆ ಕರ್ಮಕ್ಕೆ ತಕ್ಕ ಫಲ ಸಿಗುವುದು ಎಂಬ ಅರ್ಥ ಕೊಡುವ ಕೆಲ ಸಾಲುಗಳನ್ನ ಬರೆದು ತಮ್ಮ ಎಕ್ಸ್‌ ಖಾತೆಯಲ್ಲಿ (ಹಿಂದಿನ ಟಿಟ್ಟರ್‌) ಬರೆದು ಪೋಸ್ಟ್‌ ಮಾಡಿದ್ದಾರೆ. 

ಇದನ್ನೂ ಓದಿ: ದರ್ಶನ್‌ ಅರೆಸ್ಟ್‌ ಆಗ್ತಿದ್ದಂತೆ ಮನನೊಂದ ಪತ್ನಿ ವಿಜಯಲಕ್ಷ್ಮಿ ದಿಟ್ಟ ನಿರ್ಧಾರ? ಮುರಿದೇ ಹೋಯ್ತಾ ಈ ಸಂಬಂಧ!?

"ಕರ್ಮ ಜೀವನನ ಹಿಂದೆ ಹಿಂಬಾಲಿಸುತ್ತದೆ. ಅವನ ಪಾಪಕರ್ಮ ಅವನ ಸುಡುತ್ತದೆ!ಕಲಿಯುಗದಲ್ಲಿ ದೇವರು ಕಲ್ಲಲ್ಲಾ ಎಲ್ಲಾ ಕರ್ಮಕ್ಕೂ ತತಕ್ಷಣ ಫಲಿತಾಂಶ 
ಉಂಟು! ರಾಮನಾಗು ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ! ಮದಕ್ಕೆ ಕಾರುಣ್ಯದ ಅರಿವಿಲ್ಲಾ!" ಹೀಗೆ ಬರೆದು ನಟ ಜಗ್ಗೇಶ್‌ ಪೋಸ್ಟ್‌ ಮಾಡಿದ್ದಾರೆ. ದರ್ಶನ್‌ ಕೊಲೆ ಪ್ರಕರಣದ ಬೆನ್ನಲ್ಲೆ ಜಗ್ಗೇಶ್‌ ಇಂತಹದ್ದೊಂದು ಮಾರ್ಮಿಕ ಟ್ವೀಟ್‌ ಮಾಡಿದ್ದಾರೆ. 

ದರ್ಶನ್‌ ಬಂಧನವಾಗಿದ್ದೇಕೆ? 

ರೇಣುಕಾ ಸ್ವಾಮಿ ಹತ್ಯೆ ಆರೋಪದ ಮೇಲೆ ಟ ದರ್ಶನ್ ಅವರನ್ನು ಬಂಧಿಸಲಾಗಿದೆ. 6 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿ ಕೋರ್ಟ್‌ ಆದೇಶಿಸಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್​ ಠಾಣೆಯಲ್ಲಿ ಇವರನ್ನು ಇರಿಸಲಾಗಿದೆ. ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ಠಾಣೆಗೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

DarshanPavithra GowdaDarshan mobile seized

Trending News