ಬೆಂಗಳೂರು: ‘ಸೈಮಾ’.. ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್.. ಇದು SIIMAದ ವಿಸ್ತಾರ ರೂಪ. ಚಿತ್ರರಂಗದ ಸಾಧಕರಿಗಾಗಿ 2012ರಿಂದ ಈ ಪ್ರಶಸ್ತಿ ಕೊಡಲಾಗುತ್ತಿದೆ. ಅಲ್ಲಿಂದ ಇಲ್ಲಿಯವರೆಗೆ ಅದೆಷ್ಟೋ ನಟ-ನಟಿಯರು ಈ ಪ್ರತಿಷ್ಠಿತ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದಾರೆ. ಸೈಮಾ ಅವಾರ್ಡ್ ಪಡೆದುಕೊಳ್ಳಬೇಕು ಅನ್ನೋದು ಚಿತ್ರಂಗದ ಪ್ರತಿಯೊಬ್ಬರ ಕನಸಾಗಿರುತ್ತೆ. ಅದರಂತೆ 2022ನೇ ಸಾಲಿನ ಸೈಮಾ ಅವಾರ್ಡ್ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಿತು. 2 ದಿನಗಳ ಈ ಕಾರ್ಯಕ್ರಮದಲ್ಲಿ ಶನಿವಾರ(ಸೆ.10) ಕನ್ನಡ ಮತ್ತು ತೆಲುಗು ಚಿತ್ರರಂಗದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಲಾಯಿತು. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‍ನಲ್ಲಿ ನಡೆದ ಸೈಮಾ ಕಾರ್ಯಕ್ರಮ ರಂಗೇರಿತ್ತು. ಯಾಕಂದ್ರೆ ಸೆಲೆಬ್ರೇಟಿಗಳನ್ನು ಇಲ್ಲಿ ನೋಡೋದೇ ಕಲರ್‍ಫುಲ್ ಅಂದ್ರೆ ತಪ್ಪಾಗಲ್ಲ.
ಇದನ್ನೂ ಓದಿ: Swara Accused Shahrukh: 'ನನ್ನ ಜೀವನವನ್ನೇ ಹಾಳು ಮಾಡಿದ' ಶಾರುಕ್ ವಿರುದ್ಧ ಸ್ವರಾ ಭಾಸ್ಕರ್ ಗಂಭೀರ ಆರೋಪ!
2021ರ ಅಕ್ಟೋಬರ್ 29ರಂದು ನಿಧನ ಹೊಂದಿದ ಕರುನಾಡಿನ ಹೆಮ್ಮೆಯ ಪುತ್ರ ಡಾ.ಪುನೀತ್ ರಾಜ್ಕುಮಾರ್ ಅವರಿಗೆ ಸೈಮಾ ಕಾರ್ಯಕ್ರಮದಲ್ಲಿ ವಿಶೇಷ ಗೌರವನಮನಬ ಸಲ್ಲಿಸಲಾಯಿತು. ಹಲವು ಸಿನಿಮಾಗಳು ಪ್ರಶಸ್ತಿಯನ್ನು ಬಾಚಿಕೊಳ್ಳುವುದರ ಮೂಲಕ ಸದ್ದು ಮಾಡಿವೆ. 2021ರಲ್ಲಿ ತೆರೆಗೆ ಬಂದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳನ್ನು ನಾಮಿನೆಷನ್ ಮಾಡಲಾಗಿತ್ತು. ಈ ಪೈಕಿ ಒಂದಷ್ಟು ಸಿನಿಮಾಗಳು ಪ್ರಶಸ್ತಿಯನ್ನು ಗೆದ್ದಿವೆ.
ಈ ಬಾರಿ ಪ್ರಶಸ್ತಿ ಗೆದ್ದ ಕನ್ನಡ ಸಿನಿಮಾಗಳು ಯಾವುವು..?
ಅತ್ಯುತ್ತಮ ನಟ (ಕನ್ನಡ): ಪುನೀತ್ ರಾಜ್ಕುಮಾರ್ (ಯುವರತ್ನ)
ಅತ್ಯುತ್ತಮ ನಟಿ (ಕನ್ನಡ): ಆಶಿಕಾ ರಂಗನಾಥ್ (ಮದಗಜ)
ಅತ್ಯುತ್ತಮ ನಟಿ ಕ್ರಿಟಿಕ್ಸ್ (ಕನ್ನಡ): ಅಮೃತಾ ಅಯ್ಯಂಗಾರ್ (ಬಡವ ರಾಸ್ಕಲ್)
ಅತ್ಯುತ್ತಮ ಹಾಸ್ಯ ನಟ: ಚಿಕ್ಕಣ್ಣ (ಪೊಗರು)
ಅತ್ಯುತ್ತಮ ನಿರ್ದೇಶನ; ತರುಣ್ ಸುಧೀರ್ (ರಾಬರ್ಟ್)
ಅತ್ಯುತ್ತಮ ಪೋಷಕ ನಟಿ: ಆರೋಹಿ ನಾರಾಯಣ್ (ದೃಶ್ಯ- 2)
ಅತ್ಯುತ್ತಮ ಪೋಷಕ ನಟ: ಪ್ರಮೋದ್ (ರತ್ನನ್ ಪ್ರಪಂಚ)
ಅತ್ಯುತ್ತಮ ಹಿನ್ನೆಲೆ ಗಾಯಕಿ (ಕನ್ನಡ): ಚೈತ್ರಾ ಆಚಾರ್ (‘ಗರುಡ ಗಮನ ವೃಷಭ ವಾಹನ’ ಚಿತ್ರದ ‘ಸೋಜುಗಾದ ಸೂಜುಮಲ್ಲಿಗೆ ಹಾಡು’)
ಅತ್ಯುತ್ತಮ ಸಂಗೀತ ನಿರ್ದೇಶಕ: ಅರ್ಜುನ್ ಜನ್ಯ- ‘ರಾಬರ್ಟ್’
ಇದನ್ನೂ ಓದಿ: Shivaji Surathkal-2: "IKEA"ದಲ್ಲಿ ಬಿಡುಗಡೆಯಾದ ‘ಶಿವಾಜಿ ಸುರತ್ಕಲ್ 2’ ಟೀಸರ್
2021ರಲ್ಲಿ ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್’ ಸಿನಿಮಾ ತೆರೆಗೆ ಬಂತು. ಸುಧಾಕರ್ ರಾಜ್ ಅವರು ಈ ಚಿತ್ರದ ಸಿನಿಮಾಟೋಗ್ರಫಿಗೆ ‘ಬೆಸ್ಟ್ ಸಿನಿಮಾಟೋಗ್ರಫಿ’ (ಕನ್ನಡ) ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ನಿನ್ನ ಸನಿಹಕೆ’ ಸಿನಿಮಾದ ‘ನೀ ಪರಿಚಯ..’ ಹಾಡಿಗೆ ವಾಸುಕಿ ವೈಭವ್ ‘ಅತ್ಯುತ್ತಮ ಗೀತ ರಚನೆಕಾರ’ (ಕನ್ನಡ) ಪ್ರಶಸ್ತಿ ಬಾಚಿಕೊಂಡಿದ್ದಾರೆ. ಸೈಮಾ ಅವಾರ್ಡ್ ಶುರುವಾಗಿ ಭರ್ತಿ 10 ವರ್ಷವಾಗಿದ್ದು, ಈ ಬಾರಿ ವಿಜೃಂಭಣೆಯಿಂದಲೇ ಕಾರ್ಯಕ್ರಮ ನಡೆಸಲಾಗಿದೆ. ಎಲ್ಲಾ ಭಾಷೆಯ ಸಿನಿಮಾಗಳ 19 ವಿಭಾಗಗಳಿಗೆ ಈ ಬಾರಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.