Neena Gupta and Vivian Richards Love Story: ನೀನಾ ಗುಪ್ತಾ ಬಾಲಿವುಡ್‌ನ ಪ್ರಸಿದ್ಧ ನಟಿ. 65 ನೇ ವಯಸ್ಸಿನಲ್ಲಿಯೂ ಸಹ ತಮ್ಮ ನಟನೆಯಿಂದ ಜನರನ್ನು ಹುಚ್ಚರನ್ನಾಗಿ ಮಾಡುತ್ತಿದ್ದಾರೆ. ವೆಸ್ಟ್ ಇಂಡೀಸ್‌ನ ಶ್ರೇಷ್ಠ ಬ್ಯಾಟ್ಸ್‌ಮನ್ ವಿವಿಯನ್ ರಿಚರ್ಡ್ಸ್ ಅವರೊಂದಿಗಿನ ಸಂಬಂಧಕ್ಕಾಗಿ ನೀನಾ ಗುಪ್ತಾ ಸುದ್ದಿಯಲ್ಲಿದ್ದರು. ನೀನಾ ಗುಪ್ತಾ ಮದುವೆಯಾಗದೆ ಗರ್ಭಿಣಿಯಾದರು ಮತ್ತು ಹೆಣ್ಣು ಮಗುವಿಗೆ ಜನ್ಮ ನೀಡಿದರು.
ಖ್ಯಾತ ಬಾಲಿವುಡ್ ನಟಿ ನೀನಾ ಗುಪ್ತಾ ಯಾವಾಗಲೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮತ್ತು ತಮ್ಮ ಮಗಳು ಮಸಾಬಾಳನ್ನು ಒಂಟಿಯಾಗಿ ಬೆಳೆಸಿದ ಬಗ್ಗೆ ಮಾತನಾಡುತ್ತಾರೆ. ನೀನಾ ಗುಪ್ತಾ ತನ್ನ ಯೌವನದಲ್ಲಿ ವೆಸ್ಟ್ ಇಂಡೀಸ್ ಸ್ಟಾರ್ ಕ್ರಿಕೆಟಿಗ ವಿವ್ ರಿಚರ್ಡ್ಸ್ ಅವರನ್ನು ಪ್ರೀತಿಸಿ ಮದುವೆಯಾಗದೆಯೇ ಮಗುವಿನ ತಾಯಿಯಾದರು.
ತಾನು ಗರ್ಭಿಣಿ ಎಂಬ ಬಗ್ಗೆ ತಿಳಿದ ಸಮಯವನ್ನು ನೀನಾ ನೆನಪಿಸಿಕೊಂಡರು. ಈ ಬಗ್ಗೆ ಅವರು ವೆಸ್ಟ್ ಇಂಡೀಸ್ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಅವರಿಗೆ ಮಾಹಿತಿ ನೀಡಿದರು. ನೀನಾ ವಿವಾಹಿತ ಕ್ರಿಕೆಟಿಗನನ್ನು ಪ್ರೀತಿಸುತ್ತಿದ್ದರು ಮತ್ತು ಗರ್ಭಿಣಿಯಾದಾಗ, ಅದರ ಬಗ್ಗೆ ಚಿಂತಿತಳಾಗಿದ್ದರು.
ಇದನ್ನೂ ಓದಿ: ‘ಅಂದೊಂದಿತ್ತು ಕಾಲ‘ ಚಿತ್ರದ ‘ಮುಂಗಾರು ಮಳೆಯಲ್ಲಿ’ ಹಾಡಿಗೆ ಮೆಚ್ಚುಗೆಯ ಮಹಾಪೂರ
ನೀನಾ ಗುಪ್ತಾ ಮಗಳು ಮಸಾಬಾಗೆ ಜನ್ಮ ನೀಡಿದ್ದು ಮಾತ್ರವಲ್ಲದೆ, ಅವಳನ್ನು ಒಂಟಿಯಾಗಿ ಬೆಳೆಸಿದರು. ಆ ಸಮಯದಲ್ಲಿ ಬೇರೊಬ್ಬರನ್ನು ಮದುವೆಯಾಗಿದ್ದ ವಿವಿಯನ್, ಮಗುವನ್ನು ತನ್ನಲ್ಲೇ ಇಟ್ಟುಕೊಳ್ಳುವಂತೆ ನೀನಾ ಗುಪ್ತಾ ಮನವೊಲಿಸಿದರು. ನೀನಾಳ ಕುಟುಂಬ ಆರಂಭದಲ್ಲಿ ಈ ನಿರ್ಧಾರವನ್ನು ಬೆಂಬಲಿಸಲಿಲ್ಲ. ಆದರೂ ತಂದೆ ಅದನ್ನು ಬಳಿಕ ಒಪ್ಪಿಕೊಂಡರು.
"ಹ್ಯೂಮನ್ಸ್ ಆಫ್ ಬಾಂಬೆ" ಜೊತೆ ಮಾತನಾಡಿದ ನೀನಾ, ನಾನು ಅವನ ಪ್ರೀತಿಯಲ್ಲಿ ಸಂತೋಷ ಕಂಡೆ. ನಾನು ಅವನಿಗೆ ಕರೆ ಮಾಡಿ ನಿನಗೆ ಮಗು ಬೇಡವೇ ಎಂದು ಕೇಳಿದೆ. ಅವನು, ಮಗುವನ್ನು ನೀನು ಇಟ್ಟುಕೊಳ್ಳಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದನು ಎಂದಿದ್ದಾರೆ ನೀನಾ ಗುಪ್ತಾ.
ತನ್ನ ನಿರ್ಧಾರಕ್ಕೆ ಬಂದ ವಿರೋಧದ ಬಗ್ಗೆ ಮಾತನಾಡಿದ ನೀನಾ ಗುಪ್ತಾ, ಅವನು ಈಗಾಗಲೇ ಮದುವೆಯಾಗಿದ್ದನು ಮತ್ತು ನಾನು ಅವನನ್ನು ಮದುವೆಯಾಗಿ ಆಂಟಿಗುವಾಗೆ ಹೋಗಿ ಅಲ್ಲಿ ವಾಸಿಸಲು ಸಾಧ್ಯವಾಗಲಿಲ್ಲ. ಆದರೆ ಯೌವನದಲ್ಲಿ ನೀವು ಕುರುಡರಾಗಿರುತ್ತೀರಿ. ನೀವು ಪ್ರೀತಿಸುತ್ತಿರುವಾಗ, ನೀವು ಯಾರ ಮಾತನ್ನೂ ಕೇಳುವುದಿಲ್ಲ. ಯಾವುದೇ ಮಗು ತನ್ನ ಹೆತ್ತವರ ಮಾತನ್ನು ಕೇಳುವುದಿಲ್ಲ ಮತ್ತು ನಾನು ಹಾಗೆಯೇ ಇದ್ದೆ ಎಂದು ಹೇಳಿದ್ದಾರೆ.
ನೀನಾ ಗುಪ್ತಾ ಮತ್ತು ವಿವಿಯನ್ ರಿಚರ್ಡ್ಸ್ ಜೈಪುರದಲ್ಲಿ ಭೇಟಿಯಾದರು. ಆಗ ನಟಿ ವಿನೋದ್ ಖನ್ನಾ ಅವರೊಂದಿಗೆ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದರು. ಈ ಸಮಯದಲ್ಲಿ ವಿವ್ ರಿಚರ್ಡ್ಸ್ ಅವರನ್ನು ಭೇಟಿಯಾದರು. ಇಬ್ಬರ ನಡುವಿನ ಆತ್ಮೀಯತೆ ಹೆಚ್ಚಾಯಿತು ಮತ್ತು ನಂತರ ಸಂಬಂಧವು ಪ್ರೀತಿಗೆ ತಿರುಗಿತು. ನೀನಾ ಅವರ ಪುತ್ರಿ ಮಸಾಬಾ ಪ್ರಸಿದ್ಧ ಫ್ಯಾಷನ್ ಡಿಸೈನರ್ ಮತ್ತು ನಟಿ ಆಗಿದ್ದಾರೆ.
ಇದನ್ನೂ ಓದಿ:ಅಮರಾವತಿ ಪೋಲಿಸ್ ಸ್ಟೇಷನ್ ಚಿತ್ರದ ಟೀಸರ್ ಬಿಡುಗಡೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.