ದೆಹಲಿ: ಫ್ರಾನ್ಸ್ನಲ್ಲಿ10 ದಿನಗಳ ಕಾಲ ನಡೆಯುವ ದೊಡ್ಡ ಉತ್ಸವ ಎಂದರೆ ಕಾನ್ಸ್ ಫಿಲ್ಮ್ ಫೆಸ್ಟಿವಲ್. ಕಾನ್ಸ್ ಫಿಲ್ಮ್ ಫೆಸ್ಟಿವಲ್ ಎಂದರೆ ಸಿನಿಮಾ ತಾರೆಯರಿಗೆ ದೊಡ್ಡ ಉತ್ಸವ. ಈ ಫಿಲ್ಮ್ ಉತ್ಸವದಲ್ಲಿ ಹೆಚ್ಚಿನ ಸಿನಿಮಾ ನಟರು ಭಾಗಿಯಾಗುತ್ತಾರೆ. ಈ ಬಾರಿ ಅನೇಕ ಭಾರತೀಯ ನಟರು ಭಾಗಿಯಾಗಿದ್ದರು.
ಮುಖ್ಯವಾಗಿ ಬಾಲಿವುಡ್, ಟಾಲಿವುಡ್ ಸೇರಿದಂತೆಯೇ ಅನೇಕರು ಭಾಗಿಯಾಗಿದ್ದರು. ಅದರಲ್ಲೂ ವಿಶೇಷವಾಗಿ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ವಿಭಿನ್ನ ಉಡುಗೆ ತೊಟ್ಟು ಎಲ್ಲರ ಮನ ಸೆಳೆಯುತ್ತಿದ್ದರು. ಸದ್ಯ ನಟಿ ಐಶ್ವರ್ಯ ರೈ ಮಾತ್ರವಲ್ಲದೇ ಅನೇಕ ನಟಿಯರು ವಿಭಿನ್ನವಾಗಿ ಉಡುಗೆ ತೊಟ್ಟು ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿ ಪೋಸ್ ನೀಡಿದರು.
ಇದನ್ನೂ ಓದಿ: Karnataka CM: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ತಾರೆಯರ ಸಮಾಗಮ!
ಸದ್ಯ ಇದೀಗ ಬಾಲಿವುಡ್ ನಟಿಯರ ಉಡುಗೆಗಳ ಬಗ್ಗೆ ಅದರಲ್ಲೂ ಮುಖ್ಯವಾಗಿ ಮಾಜಿ ವಿಶ್ವ ಸುಂದರಿ ಉಡುಗೆಗೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಹಿಟ್ ಆದ ಬಳಿಕ ಖ್ಯಾತಿ ಪಡೆದ ವಿವೇಕ್ ಅಗ್ನಿಹೋತ್ರಿ ಬಾರಿ ಟೀಕೆ ವ್ಯಕ್ತ ಪಡಿಸಿದ್ದಾರೆ. ಈ ಪ್ರತಿಷ್ಠಿತ ಸಿನಿಮೋತ್ಸವದಲ್ಲಿ ಐಶ್ವರ್ಯಾ ರೈ ಬಚ್ಚನ್ ಅವರು ಧರಿಸಿದ್ದ ಕಾಸ್ಟ್ಯೂಮ್ ಬಗ್ಗೆ ವಿವೇಕ್ ಅಗ್ನಿಹೋತ್ರಿ ಕಿಡಿಕಾರಿದ್ದಾರೆ. ಈ ಫಿಲ್ಮ್ ಫೆಸ್ಟಿವಲ್ನಲ್ಲಿ ಸೆಲೆಬ್ರಿಟಿಗಳು ಬಗೆಬಗೆಯ ಕಾಸ್ಟ್ಯೂಮ್ ಧರಿಸಿ, ರೆಡ್ ಕಾರ್ಪೆಟ್‌ನಲ್ಲಿ ಪೋಸ್ ಕೊಡುವುದು ಸಾಕಷ್ಟು ಹೈಲೈಟ್ ಹೊಸದೆನಲ್ಲ.
ಆದರೆ ಈ ಚಲನಚಿತ್ರೋತ್ಸವ ಕುರಿತಂತೆ ಹೇಳಿರುವ ಅವರು, ಕಾನ್ ಚಲನಚಿತ್ರೋತ್ಸವ ಬಗ್ಗೆ ತಿಳಿದಿಯೇ , ಇದು ಫ್ಯಾಶನ್ ಶೋ ಅಂತ ನೀವು ಭಾವಿಸುತ್ತಿದ್ದರೆ ನಾನು ನಿಮಗೆ ನೆನಪಿಸುತ್ತಿದ್ದೇನೆ’ ಎಂದು ತಮ್ಮ ಟ್ವೀಟ್ರ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Rakshit Shetty: ಟೊವಿನೋ ಥಾಮಸ್ ʼARMʼ ಟೀಸರ್ ರಿಲೀಸ್ ಮಾಡಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ
Do you know that Cannes Film Festival is about films?
I thought I should remind you just in case you were thinking it’s a fashion show.
— Vivek Ranjan Agnihotri (@vivekagnihotri) May 20, 2023
ವಿವೇಕ್ ಅಗ್ನಿಹೋತ್ರಿಯವರ ಟ್ವೀಟ್ಗೆ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಅವರ ಟ್ವೀಟ್ ವಿಚಾರವಾಗಿ ನಟಿ ಮೀರಾ ಚೋಪ್ರಾ, ‘ಇದು ತುಂಬಾ ಬೇಸರದ ಸಂಗತಿ ನೀವು ಏನನ್ನು ಧರಿಸಿದ್ದೀರಿ ಮತ್ತು ನಿಮ್ಮೆಲ್ಲರನ್ನು ಮಾಧ್ಯಮಗಳಲ್ಲಿ ಹೇಗೆ ತೋರಿಸಲಾಗಿದೆ ಎಂಬುದರ ಬಗ್ಗೆ ಮಾಧ್ಯಮಗಳಲ್ಲಿ ಹೇಗೆ ತೋರಿಸಲಾಗಿದೆ.
ಇದರ ಬಗ್ಗೆ ಬಾಲಿವುಡ್ ಮಾತ್ರ ತಲೆಗೆ ತೆಗೆದುಕೊಳ್ಳುತ್ತಿಲ್ಲ ಬೇರೆ ದೇಶದವರು ಫ್ಯಾಷನ್ ಬಗ್ಗೆ ಅವರು ನಮ್ಮಷ್ಟು ತಲೆ ಕೆಡಿಸಿಕೊಂಡಿಲ್ಲ ನಮ್ಮ ದೇಶದಲ್ಲಿ ಮಾತ್ರ ಉಡುಗೆ ಬಗ್ಗೆ ಅಳವಾಗಿ ಯೋಚಿಸುತ್ತಾರೆ ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ