ಎಪಿ ಸಿಎಂ ಜಗನ್‌ಗೆ ಪವರ್‌ ವಾರ್ನಿಂಗ್‌ : ಪವನ್‌ ಕಲ್ಯಾಣ್‌ ಗೃಹ ಬಂಧನ..!

ಜನಸೇನಾ ಮುಖ್ಯಸ್ಥ, ನಟ, ಪವನ್ ಕಲ್ಯಾಣ್ ವಿಶಾಖಪಟ್ಟಣ ರ‍್ಯಾಲಿ ಹಿಂಸಾಚಾರಕ್ಕೆ ತಿರುಗಿದೆ. ಇನ್ನು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಅನೇಕ ಜನಸೇನಾ ಕಾರ್ಯಕರ್ತರು ಮತ್ತು ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಮುನ್ನೆಚ್ಚರಿಕಾ ಕ್ರಮವಾಗಿ ಪವನ್‌ ಕಲ್ಯಾಣ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಹೇಳಲಾಗಿದೆ.

Written by - Krishna N K | Last Updated : Oct 16, 2022, 01:20 PM IST
  • ಜನಸೇನಾ ಮುಖ್ಯಸ್ಥ, ನಟ, ಪವನ್ ಕಲ್ಯಾಣ್ ವಿಶಾಖಪಟ್ಟಣ ರ‍್ಯಾಲಿ ಹಿಂಸಾಚಾರಕ್ಕೆ ತಿರುಗಿದೆ
  • ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಅನೇಕ ಜನಸೇನಾ ಕಾರ್ಯಕರ್ತರು ಮತ್ತು ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ
  • ಮುನ್ನೆಚ್ಚರಿಕಾ ಕ್ರಮವಾಗಿ ಪವನ್‌ ಕಲ್ಯಾಣ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ
ಎಪಿ ಸಿಎಂ ಜಗನ್‌ಗೆ ಪವರ್‌ ವಾರ್ನಿಂಗ್‌ : ಪವನ್‌ ಕಲ್ಯಾಣ್‌ ಗೃಹ ಬಂಧನ..! title=

ಬೆಂಗಳೂರು : ಜನಸೇನಾ ಮುಖ್ಯಸ್ಥ, ನಟ, ಪವನ್ ಕಲ್ಯಾಣ್ ವಿಶಾಖಪಟ್ಟಣ ರ‍್ಯಾಲಿ ಹಿಂಸಾಚಾರಕ್ಕೆ ತಿರುಗಿದೆ. ಇನ್ನು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಅನೇಕ ಜನಸೇನಾ ಕಾರ್ಯಕರ್ತರು ಮತ್ತು ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಮುನ್ನೆಚ್ಚರಿಕಾ ಕ್ರಮವಾಗಿ ಪವನ್‌ ಕಲ್ಯಾಣ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಹೇಳಲಾಗಿದೆ.

ವಿಶಾಪಪಟ್ಟಣ ಸದ್ಯ ಬೂದಿ ಮುಚ್ಚಿದ ಕೆಂಡದತಾಂಗಿದೆ. ನಿನ್ನೆ ಜನಸೇನಾ ರ‍್ಯಾಲಿಯಲ್ಲಿ ನಡೆದ ಗಲಭೆ ಇದಕ್ಕೆಲ್ಲ ಕಾರಣವಾಗಿದೆ. ಯಾವಾಗ ಏನು ನಡೆಯುತ್ತೆ ಎನ್ನುವ ಆತಂಕದಲ್ಲಿ ನಗರವಾಸಿಗಳು ಇದ್ದಾರೆ. ಶನಿವಾರ ಸಂಜೆಯಿಂದ ಈ ಪರಿಸ್ಥಿತಿ ಮುಂದುವರೆದಿದೆ. ಇನ್ನು ಎಪಿ ಮಂತ್ರಿಗಳ ಮೇಲೆ ವಿಮಾನ ನಿಲ್ದಾಣದಲ್ಲಿ ಜನಸೇನಾ ಕಾರ್ಯಕರ್ತರು ದಾಳಿ ಮಾಡುವ ಮೂಲಕ ಗಲಾಟೆ ಮತ್ತಷ್ಟು ತೀವ್ರ ರೂಪಕ್ಕೆ ತಿರುಗಿದೆ.

ಇದನ್ನೂ ಓದಿ: ನನ್ನ ‘ರಾಣಾ’ ಸಿನಿಮಾಗೆ ನಾನೇ ಬೀದಿ ಸುತ್ತಿ ಪೋಸ್ಟರ್ ಅಂಟಿಸ್ತೀನಿ: ನಟ ಶ್ರೇಯಸ್ ಮಂಜು

ಇನ್ನು ಶನಿವಾರ ಗಲಭೆ ಮತ್ತು ಗಂಭೀರ ಪರಿಸ್ಥಿತಿಯ ನಡುವೆ ಪವನ್ ರ‍್ಯಾಲಿ ಸಾಗಿತು. ಆ ಸಮಯದಲ್ಲಿ ಪವರ್ ಕಟ್ ಕೂಡ ಮಾಡಲಾಯಿತು. ಆದ್ರೆ ಜನಸೇನಾ ಕಾರ್ಯಕರ್ತರ ತಮ್ಮ ಮೊಬೈಲ್ ಟಾರ್ಚ್‌ ಹಚ್ಚಿಕೊಂಡು ರ‍್ಯಾಲಿ ನಡೆಸಿದರು. ಇನ್ನು ವಿಮಾನದಲ್ಲಿ ಮಂತ್ರಿಗಳ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಜನಸೇನಾ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವರ್ತನೆಯನ್ನು ತೀವ್ರವಾಗಿ ಖಂಡಿಸಿರುವ ಪವನ್‌ ಕಲ್ಯಾಣ್‌ ಅವರು ತಮ್ಮ ಕಾರ್ಯಕರ್ತರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಬಂಧನಕ್ಕೊಳಗಾಗಿರುವ ಜನಸೇನಾ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡದಿದ್ದರೆ ಪೊಲೀಸ್ ಠಾಣೆಗೆ ತೆರಳಿ ಪ್ರತಿಭಟನೆ ಮಾಡುವುದಾಗಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಎಚ್ಚರಿಸಿದ್ದಾರೆ. ಅಲ್ಲದೆ, ಪವನ್ ತಂಗಿದ್ದ ಹೋಟೆಲ್ ಹತ್ತಿರ ತೀವ್ರ ಉದ್ವಿಗ್ನತೆ ಉಂಟಾಯಿತು. ಹೋಟೆಲ್‌ನಿಂದ ಹೊರಕ್ಕೆ ಬಾರದಂತೆ ಪವನ್‌ ಕಲ್ಯಾಣ್‌ನನ್ನು ಗೃಹ ಬಂಧನ ಮಾಡಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News