ಬೆಂಗಳೂರು :ಪೋಷಕಾಂಶಗಳಿಂದ ಕೂಡಿದ ಕರಿಬೇವಿನ ಎಲೆಗಳು ಅನೇಕ ಪ್ರಯೋಜನಗಳನ್ನು ಹೊಂದಿವೆ.ಇದನ್ನು ಆಹಾರದಲ್ಲಿ ಮಸಾಲೆಯಾಗಿ, ಒಗ್ಗರಣೆಗೆ ಬಳಸಲಾಗುತ್ತದೆ.ಕರಿಬೇವಿನ ಎಲೆಗಳನ್ನು ಬಳಸಿ ಹಾಕುವ ಒಗ್ಗರಣೆಯಿಂದ ಆಹಾರದ ರುಚಿ ಹೆಚ್ಚಾಗುತ್ತದೆ.ಕರಿ ಬೇವಿನ ಎಲೆಗಳು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಅಲ್ಲದೆ, ಕರಿಬೇವು ಹೃದ್ರೋಗ,ಸೋಂಕು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಇದರೊಂದಿಗೆ ಇದು ಮಧುಮೇಹವನ್ನು ನಿಯಂತ್ರಿಸುವಲ್ಲಿಯೂ ಪರಿಣಾಮಕಾರಿಯಾಗಿದೆ.ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್ ಸಿ ಯಂತಹ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಕರಿಬೇವಿನ ಎಲೆಗಳು ಹೆಚ್ಚಿನ ರೋಗಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ.
ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಕರಿಬೇವು ಸಹಾಯಕ :
ಕರಿಬೇವಿನ ಎಲೆಗಳನ್ನು ಬಳಸಿ ಅಧಿಕ ರಕ್ತದ ಸಕ್ಕರೆಯ ಮಟ್ಟವನ್ನು ಶೇಕಡಾ 45 ರಷ್ಟು ಕಡಿಮೆ ಮಾಡಬಹುದು ಎನ್ನುವುದು ಸಂಶೋಧನೆಯಲ್ಲಿಯೂ ಸಾಬೀತಾಗಿದೆ. ಕರಿಬೇವಿನ ಎಲೆಗಳು ಮಧುಮೇಹವನ್ನು ನಿಯಂತ್ರಿಸುವಲ್ಲಿ ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತದೆ.ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರಗೊಳಿಸಲು ಮತ್ತು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಪೋಷಕಾಂಶಗಳಿಂದ ಸಮೃದ್ಧ :
ಜೀವಸತ್ವಗಳು, ಬೀಟಾ-ಕ್ಯಾರೋಟಿನ್ ಮತ್ತು ಕಾರ್ಬಜೋಲ್ ಆಲ್ಕಲಾಯ್ಡ್ಗಳಂತಹ ಉತ್ಕರ್ಷಣ ನಿರೋಧಕಗಳು ಕರಿಬೇವಿನ ಎಲೆಗಳಲ್ಲಿ ಕಂಡುಬರುತ್ತವೆ.ಇದು ಆಕ್ಸಿಡೇಟಿವ್ ಹಾನಿಗೆ ಸಂಬಂಧಿಸಿದ ಅನೇಕ ಕಾಯಿಲೆಗಳನ್ನು ತಡೆಯುತ್ತದೆ. ಅವುಗಳಲ್ಲಿ ಪ್ರಮುಖವಾದವು ಮಧುಮೇಹ.
ಫೈಬರ್ ನಲ್ಲಿ ಸಮೃದ್ಧ :
ಕರಿಬೇವಿನ ಎಲೆಯಲ್ಲಿ ನಾರಿನಂಶ ಹೇರಳವಾಗಿದೆ.ಫೈಬರ್ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವ ಕೆಲಸ ಮಾಡುತ್ತದೆ.ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ.
ಇನ್ಸುಲಿನ್ ಚಟುವಟಿಕೆಯನ್ನು ಹೆಚ್ಚಿಸುತ್ತದೆ :
ಕರಿಬೇವಿನ ಎಲೆಗಳು ಇನ್ಸುಲಿನ್ ಚಟುವಟಿಕೆಯನ್ನು ಹೆಚ್ಚಿಸುತ್ತವೆ.ದೇಹವು ಇನ್ಸುಲಿನ್ ಅನ್ನು ಸರಿಯಾಗಿ ಬಳಸಿದಾಗ,ರಕ್ತದಲ್ಲಿನ ಸಕ್ಕರೆಯ ಮಟ್ಟವು ಸ್ಥಿರವಾಗಿರುತ್ತದೆ.
ಇದನ್ನೂ ಓದಿ : ಸಂಜೆ 7 ಗಂಟೆಯ ಮೊದಲು ಊಟ ಮಾಡುವುದರಿಂದ ಸಿಗುವ ಅದ್ಭುತ ಲಾಭಗಳಿವು!
ಅಧ್ಯಯನದ ಪ್ರಕಾರ,ಕರಿಬೇವಿನ ಎಲೆಗಳಲ್ಲಿ ಕಂಡುಬರುವ ಆಂಟಿ-ಹೈಪರ್ಗ್ಲೈಸೆಮಿಕ್ ಗುಣಲಕ್ಷಣಗಳಿಂದಾಗಿ,ಇದು ಮಧುಮೇಹ ರೋಗಿಗಳಿಗೆ ತುಂಬಾ ಪರಿಣಾಮಕಾರಿಯಾಗಿದೆ.
ಇದು ಮಧುಮೇಹ ರೋಗಿಗಳಲ್ಲಿ ಗ್ಲೂಕೋಸ್ ಆಗಿ ಪಿಷ್ಟದ ವಿಭಜನೆಯ ದರವನ್ನು ನಿಧಾನಗೊಳಿಸುವ ಸಂಯುಕ್ತಗಳನ್ನು ಒಳಗೊಂಡಿದೆ.ಕರಿಬೇವಿನ ಎಲೆಗಳು ರಕ್ತಕ್ಕೆ ಸೇರುವ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸಬಹುದು.
ಮಧುಮೇಹವನ್ನು ನಿಯಂತ್ರಿಸಲು ಕರಿಬೇವಿನ ಎಲೆಗಳನ್ನು ಬಳಸುವುದು ಹೇಗೆ? :
ಎಂಟರಿಂದ 10 ತಾಜಾ ಕರಿಬೇವಿನ ಎಲೆಗಳನ್ನು ಜಗಿದು ತಿನ್ನಬಹುದು ಅಥವಾ ಅದರ ರಸ ತೆಗೆದು ಕುಡಿಯಬಹುದು. ಇದನ್ನು ಅನ್ನ ಮತ್ತು ಸಲಾಡ್ಗೆ ಸೇರಿಸಿ ಕೂಡಾ ಸೇವಿಸಬಹುದು.
ನಿಯಮಿತವಾಗಿ ಕರಿಬೇವಿನ ಎಲೆಗಳನ್ನು ತಿನ್ನುವ ಮೊದಲು ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ. ಏಕೆಂದರೆ ಈ ಎಲೆಗಳು ಮತ್ತು ಔಷಧಿಗಳನ್ನು ಒಟ್ಟಿಗೆ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.