Clove With Honey: ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಹುರಿದ ಲವಂಗವನ್ನು ಜೇನುತುಪ್ಪದೊಂದಿಗೆ ತಿನ್ನಿರಿ

Clove With Honey: ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಜೇನುತುಪ್ಪ ಮತ್ತು ಲವಂಗವನ್ನು ಸೇವಿಸುವುದರಿಂದ ನಿಮ್ಮ ರೋಗವನ್ನು ಮೂಲದಿಂದ ಗುಣಪಡಿಸುತ್ತದೆ. ಇದನ್ನು ತಿನ್ನುವುದರಿಂದ ನೀವು ಹೇಗೆ ಪ್ರಯೋಜನ ಪಡೆಯುತ್ತೀರಿ ಎಂದು ತಿಳಿಯಿರಿ.

Written by - Yashaswini V | Last Updated : Jan 26, 2022, 02:45 PM IST
  • ಲವಂಗವು ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ
  • ಇದರ ಸೇವನೆಯಿಂದ ಕೆಮ್ಮು ಮತ್ತು ಇತರ ಹಲವು ರೋಗಗಳು ನಿವಾರಣೆಯಾಗುತ್ತವೆ
  • ಲವಂಗ ಮತ್ತು ಜೇನುತುಪ್ಪದ ಮಿಶ್ರಣವು ತುಂಬಾ ಪ್ರಯೋಜನಕಾರಿಯಾಗಿದೆ
Clove With Honey: ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಹುರಿದ ಲವಂಗವನ್ನು ಜೇನುತುಪ್ಪದೊಂದಿಗೆ ತಿನ್ನಿರಿ  title=
Consuming honey with cloves is very beneficial for all types of cough

Clove With Honey: ಸಾಮಾನ್ಯವಾಗಿ ಚಳಿಗಾಲದಲ್ಲಿ ಕೆಮ್ಮಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವುದರಿಂದ, ಈ ಋತುವಿನಲ್ಲಿ ಹೆಚ್ಚಿನ ಜನರನ್ನು ಶೀತ, ಕೆಮ್ಮು, ಜ್ವರ ಮತ್ತು ಶೀತದ ಸಮಸ್ಯೆ ಕಾಡುತ್ತದೆ. ಅದೇ ಸಮಯದಲ್ಲಿ, ಆಸ್ತಮಾ ರೋಗಿಗಳಿಗೆ ಇದು ಹೆಚ್ಚು ಕಷ್ಟಕರವಾಗುತ್ತದೆ. ಕೆಮ್ಮಿನಿಂದ ನೀವು ತೊಂದರೆಗೊಳಗಾಗಿದ್ದರೆ, ನಂತರ ಜೇನುತುಪ್ಪದೊಂದಿಗೆ ಹುರಿದ ಲವಂಗವನ್ನು ತೆಗೆದುಕೊಳ್ಳಿ. ಇದರಿಂದ ಪ್ರಯೋಜನವಾಗಲಿದೆ. ಜೇನುತುಪ್ಪದೊಂದಿಗೆ ಲವಂಗ ಸೇವಿಸಲು ಸರಿಯಾದ ಮಾರ್ಗವನ್ನು ತಿಳಿಯಿರಿ-

ಲವಂಗವನ್ನು ಜೇನುತುಪ್ಪದೊಂದಿಗೆ ಈ ರೀತಿಯಲ್ಲಿ ಬಳಸಿ:
ನಾಯಿಕೆಮ್ಮು (Whooping cough), ಒಣ ಕೆಮ್ಮು (Dry cough) ಮತ್ತು  ಕಫಾಕೆಮ್ಮಿನಿಂದ (Wet cough) ಪರಿಹಾರ ಪಡೆಯಲು ಈ ಮಿಶ್ರಣವು ಪ್ರಯೋಜನಕಾರಿಯಾಗಿದೆ. ಇದು ನೋಯುತ್ತಿರುವ ಗಂಟಲು, ಶೀತ ಮತ್ತು ಮೂಗಿನ ದಟ್ಟಣೆಯಿಂದ ಪರಿಹಾರವನ್ನು ನೀಡುತ್ತದೆ. ಒಂದು ತವಾದಲ್ಲಿ ನಾಲ್ಕೈದು ಲವಂಗವನ್ನು ಹುರಿದು ಮಲಗುವ ಮುನ್ನ ಒಂದು ಚಮಚ ಜೇನುತುಪ್ಪದೊಂದಿಗೆ ಇದನ್ನು ಸೇವಿಸಿ. ನಿಯಮಿತವಾಗಿ ಕೆಲವು ದಿನಗಳವರೆಗೆ ಈ ಮಿಶ್ರಣವನ್ನು ಸೇವಿಸುವುದರಿಂದ ಕೆಮ್ಮಿನ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.

ಇದನ್ನೂ ಓದಿ- Almonds: ಶುಗರ್, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮಧ್ಯಾಹ್ನದ ಊಟಕ್ಕೂ ಮೊದಲು ಇದನ್ನು ತಪ್ಪದೇ ಸೇವಿಸಿ

ಕೆಮ್ಮಿನ ನಿವಾರಣೆಗೆ ಮನೆಮದ್ದು:
ಲವಂಗದಲ್ಲಿ ಫೀನಾಲಿಕ್ ಸಂಯುಕ್ತಗಳು ಕಂಡುಬರುತ್ತವೆ. ಇದು ಯುಜೆನಾಲ್, ಗ್ಯಾಲಿಕ್ ಆಮ್ಲ ಮತ್ತು ಯುಜೆನಾಲ್ ಅಸಿಟೇಟ್‌ನ ಉತ್ತಮ ಮೂಲವಾಗಿದೆ. ಅಧ್ಯಯನಗಳ ಪ್ರಕಾರ, ಲವಂಗ ಸೇವನೆಯು (Consumption of cloves) ಕೆಮ್ಮು ಮತ್ತು ಇತರ ಅನೇಕ ಕಾಯಿಲೆಗಳಿಗೆ ಒಳ್ಳೆಯದು. ಲವಂಗವು ಉತ್ಕರ್ಷಣ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದಲ್ಲದೆ, ಫ್ಲೇವನಾಯ್ಡ್‌ಗಳು, ಹೈಡ್ರಾಕ್ಸಿಬೆನ್ಜೋಯಿಕ್ ಆಮ್ಲ, ಹೈಡ್ರಾಕ್ಸಿಫೆನೈಲ್ ಪ್ರೊಪೇನ್, ಕೆಫೀಕ್ ಆಮ್ಲ ಮತ್ತು ಕ್ವೆರ್ಸೆಟಿನ್ ನಂತಹ ಸಂಯುಕ್ತಗಳು ಲವಂಗದಲ್ಲಿ ಕಂಡುಬರುತ್ತವೆ, ಇದು ಕೆಮ್ಮು ಚಿಕಿತ್ಸೆಯಲ್ಲಿ ಸಹಾಯಕವಾಗಿದೆ. 

ಇದನ್ನೂ ಓದಿ- Benefits Of Ghee-Coffee: ತುಪ್ಪ ಬೆರೆಸಿದ ಕಾಫಿ ಸೇವನೆಯಿಂದ ನಿಮ್ಮ ದಿನ ಆರಂಭಿಸಿ, ಸಿಗಲಿವೆ ಹಲವು ಲಾಭಗಳು

ನೀವು ಡಬಲ್ ಲಾಭವನ್ನು ಪಡೆಯುತ್ತೀರಿ:
ಲವಂಗದೊಂದಿಗೆ ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದ (Mixing honey with cloves benefits) ಅದರ ಉತ್ಕರ್ಷಣ ನಿರೋಧಕ ಗುಣಗಳು ಹೆಚ್ಚುತ್ತವೆ. ಜೇನುತುಪ್ಪದಲ್ಲಿ ಹಲವು ಔಷಧೀಯ ಗುಣಗಳಿದ್ದು, ಕೆಮ್ಮಿನ ಜೊತೆಗೆ ಹಲವು ರೋಗಗಳನ್ನು ಗುಣಪಡಿಸಲು ಸಹಕಾರಿಯಾಗಿದೆ. ಒಂದು ಅಧ್ಯಯನದ ಪ್ರಕಾರ, ಜೇನುತುಪ್ಪದ ಸೇವನೆಯು ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಸೋಂಕುಗಳನ್ನು ಗುಣಪಡಿಸುತ್ತದೆ. ಇದನ್ನು ತಿನ್ನುವುದರಿಂದ ರಾತ್ರಿಯಲ್ಲಿ ಬರುವ ಯಾವುದೇ ರೀತಿಯ ಕೆಮ್ಮು ಕಡಿಮೆಯಾಗುತ್ತದೆ ಮತ್ತು ನಿದ್ರೆ ಸುಧಾರಿಸುತ್ತದೆ. ಜೇನುತುಪ್ಪವು ಕೆಮ್ಮು ನಿವಾರಕವಾದ ಡೆಕ್ಸ್ಟ್ರೋಮೆಥೋರ್ಫಾನ್ ಅನ್ನು ಹೊಂದಿದ್ದು, ಕೆಮ್ಮಿನ ಸಮಸ್ಯೆ ನಿವಾರಿಸಲು ಇದು ತುಂಬಾ ಪರಿಣಾಮಕಾರಿಯಾಗಿದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News