Amazing Benefits Of Used Green Tea Bags - ಸಾಮಾನ್ಯವಾಗಿ ತೂಕ ಇಳಿಸಬೇಕು ಎಂದುಕೊಂಡು ಡಯೇಟ್ ಶುರು ಮಾಡುವವರು ಮಾಡುವ ಮೊದಲು ಮಾಡುವ ಕೆಲಸ ಅಂದ್ರೆ ಅದು ಗ್ರೀನ್ ಟೀ ಸೇವನೆ. ಹೌದು, ಗ್ರೀನ್ ಟೀ ಸೇವಿಸಿದರೆ ಆದಷ್ಟು ಬೇಗ ಆಶ್ಚರ್ಯಕರ ರೀತಿಯಲ್ಲಿ ನಾವು ತೆಳ್ಳಗಾಗುತ್ತೇವೆ ಎಂಬ ನಂಬಿಕೆಯೇ ಇದಕ್ಕೆ ಕಾರಣ. ಹಾಗಾದರೆ ಗ್ರೀನ್ ಟೀ ಕುಡಿದರೆ ದೇಹದ ತೂಕ ಕಳೆದುಕೊಳ್ಳುತ್ತೆವೆ ಮತ್ತು ಅದು ಆರೋಗ್ಯಕ್ಕೆ (Health Tips) ಒಳ್ಳೆಯದು ಎಂದಾದರೆ, ಬಳಸಿದ ಟೀ ಬ್ಯಾಗ್ ನಿಂದ ಕೂಡ ಲಾಭ ಇರಬಹುದಲ್ಲವೇ? ಹೌದು, ಹಸಿರು ಚಹಾ ಸೇವನೆ ಬಳಿಕ ಟೀ ಬ್ಯಾಗ್ ಅನ್ನು ಎಸೆಯಬೇಡಿ. ಏಕೆಂದರೆ, ಬಳಸಿದ ಟೀ ಬ್ಯಾಗ್ ನಿಂದ ನೀವು ಹಲವು ರೀತಿಯ ಪ್ರಯೋಜನಗಳನ್ನು ಪಡೆಯಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ
ಬಾಯಿ ಹುಣ್ಣಿಗೆ ರಾಮಬಾಣ (Mouth Ulcer)
ಬಳಸಿದ ಟೀ ಬ್ಯಾಗ್ ಅನ್ನು ಡೀಪ್ ಫ್ರೀಜ್ ಮಾಡಿ ಬಾಯಿ ಹುಣ್ಣಿನ ಮೇಲಿಟ್ಟರೆ, ಅದರಿಂದ ಸಿಗುವ ಕೂಲ್ ಎಫೆಕ್ಟ್ ನಿಂದ ಭಾರಿ ನೆಮ್ಮದಿ ಸಿಗುತ್ತದೆ. ತುಂಬಾ ಉರಿಯಿರುವ ಸಂದರ್ಭಗಳಲ್ಲಿ ಇದು ಕೊಂಚ ಮಟ್ಟಿಗೆ ಉಪಶಮನ ನೀಡುತ್ತದೆ.
ಸಣ್ಣಪುಟ್ಟ ಗಾಯಗಳಿಗೆ ಪರಿಹಾರ (Burn Injury)
ಕೈಗೆ ಗಾಯವಾಗಿ ರಕ್ತ ಸೋರುತ್ತಿದ್ದಲ್ಲಿ ಬಳಸಿದ ಟೀ ಬ್ಯಾಗ್ ಅನ್ನು ಬಿಸಿ ನೀರಿನಲ್ಲಿ ಅದ್ದಿ ತೆಗೆದು ಗಾಯದ ಮೇಲಿಡಿ. ಚಹಾನಲ್ಲಿರುವ ಟ್ಯಾನಿನ್ ಅಂಶವು ರಕ್ತ ಸೋರುವುದನ್ನು ನಿಲ್ಲಿಸುತ್ತದೆ. ಸಣ್ಣಪುಟ್ಟ ಗಾಯಗಳಾಗಿದ್ದಾಗ ಈ ರೀತಿ ಮಾಡುವುದರಿಂದ ಪ್ರಥಮ ಚಿಕಿತ್ಸೆ ರೂಪದಲ್ಲಿ ಪರಿಹಾರ ಸಿಗುತ್ತದೆ
ಗಾಯದ ಗುಳ್ಳೆಯಿಂದ ಉಪಶಮನ
ದೇಹದ ಯಾವುದೇ ಭಾಗಕ್ಕೆ ಸುಟ್ಟ ಗಾಯ ಅಥವಾ ಗುಳ್ಳೆಯಾಗಿದ್ದರೆ, ಬಳಸಿದ ಟೀ ಬ್ಯಾಗ್ ಅನ್ನು ಒದ್ದೇಮಾಡಿ ಇಡುವುದರಿಂದ ಸುಟ್ಟ ಗಾಯಕ್ಕೆ ತಂಪಿನ ಅನುಭವ ನೀಡುತ್ತದೆ, ಟೀಯಲ್ಲಿರುವ ಆಂಟಿ ಬ್ಯಾಕ್ಟೀರಿಯಾ ಅಂಶವೂ ಬ್ಯಾಕ್ಟೀರಿಯಾ ಸೋಂಕು ಹರಡದಂತೆ ನೋಡಿಕೊಳ್ಳುತ್ತದೆ.
ಕೀಟಗಳು ಕಚ್ಚಿದಾಗ ಬಳಸಬಹುದು
ಕೀಟಗಳು ಕಚ್ಚಿದಾಗಲೂ ತೇವಾಂಶವಿರುವ ಬಳಸಿದ ಟೀ ಬ್ಯಾಗ್ ಬಳಸಿ. ಇದರಿಂದ ಕೀಟ ಕಚ್ಚಿದ ಜಾಗದಲ್ಲಿ ಊತ ಕಾಣಿಸಿಕೊಳ್ಳುವುದಿಲ್ಲ ಮತ್ತು ಸೋಂಕು ಹರಡುವುದಿಲ್ಲ.
ಇದನ್ನೂ ಓದಿ-Belly Fat ಕರಗಿಸಲು ತಪ್ಪದೆ ಸೇವಿಸಿ ಈ 2 ಪದಾರ್ಥಗಳನ್ನು!
ತ್ವಚ್ಛೆಯ ಆರೈಕೆಗೆ ಉತ್ತಮ (Skin Care)
ಬೇಸಿಗೆ ಕಾಲದಲ್ಲಿ ಉಂಟಾಗುವ ಸನ್ ಬರ್ನ್ಗೆ ಬಳಸಿದ ಟೀ ಬ್ಯಾಗ್ ನಲ್ಲಿರುವ ECGC ಅಂಶವು ನೆರಳಾತೀತ ಕಿರಣಗಳಿಂದ ತ್ವಚೆಯನ್ನು ಕಾಪಾಡುತ್ತದೆ. ಟೀ ಬ್ಯಾಗ್ ಅನ್ನು ಐಸ್ಕ್ಯೂಬ್ ಮಾಡಿ ಮುಖದ ಮೇಲೆ ಮಸಾಜ್ ಮಾಡುವುದರಿಂದ ಚರ್ಮದ ಶುಶ್ಕತೆ ದೂರಾಗುತ್ತದೆ ಹಾಗೂ ಮುಖ ಕಾಂತಿಯಿಂದ ಕಂಗೊಳಿಸುತ್ತದೆ.
ಇದನ್ನೂ ಓದಿ-Belly Fat: ಬೆಳಿಗ್ಗೆ ಎದ್ದು ಈ 5 ಕೆಲಸ ಮಾಡಿದ್ರೆ ಜಿಮ್‌ಗೆ ಹೋಗದೆ ಬೆಲ್ಲಿ ಫ್ಯಾಟ್ ಕರಗಿಸಬಹುದು!
ಒರಟು ಪಾದಗಳ ಆರೈಕೆ ಮಾಡಬಹುದು (Foot Care)
ಒಂದು ಬಕೆಟ್ ನೀರಿನಲ್ಲಿ ಬಳಸಿದ ಟೀ ಬ್ಯಾಗ್ ಹಾಕಿ. ಅದರಲ್ಲಿ ನಿಮ್ಮ ಪಾದಗಳನ್ನ ಮುಳುಗಿಸಿ ಇಟ್ಟರೆ ಪಾದದ ಬಿರುಕು, ಪಾದದ ಒರಟು ಇಲ್ಲವಾಗಿ ಮೆತ್ತಗಾಗಿ ಮತ್ತೆ ನಿಮ್ಮ ಪಾದಕ್ಕೆ ಚೈತನ್ಯ ತುಂಬುತ್ತದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.