ಈ ಆಹಾರಗಳನ್ನು ಸೇವಿಸೋದ್ರಿಂದ ಕಿಡ್ನಿ ಸ್ಟೋನ್ಸ್‌ ಉಂಟಾಗುವುದನ್ನ ತಡೆಯಬಹುದು.

Kidney Stones: ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಮೂತ್ರಪಿಂಡಗಳು ಒಂದಾಗಿದೆ. ಮೂತ್ರಪಿಂಡಗಳು ನಮ್ಮ ರಕ್ತವನ್ನು ಫಿಲ್ಟರ್ ಮಾಡಲು ಮತ್ತು ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ. ಆದರೆ ನೀವು ಸೇವಿಸುವ ಆಹಾರ, ಜೀವನಶೈಲಿ ಮತ್ತು ಕೆಲವು ಕಾಯಿಲೆಗಳು ಮೂತ್ರಪಿಂಡದಲ್ಲಿ ಕಲ್ಲು ಸೃಷ್ಟಿಯಾಗಲು ಕಾರಣವಾಗಬಹುದು. ಹಾಗಾದರೆ ಹೇಗೆ ಈ ಮೂತ್ರಪಿಂಡಗಳನ್ನು ಕರಗಿಸುವುದು. ಇವುಗಳನ್ನು ಕರಗಿಸಲು ಯಾವ ಆಹಾರಗಳನ್ನು ಸೇವಿಸಬೇಕು ಎಂಬುವ ಬಗ್ಗೆ ಇಲ್ಲಿದೆ ಮಾಹಿತಿ.   

Written by - Zee Kannada News Desk | Last Updated : Jan 18, 2024, 03:27 PM IST
  • ಮೂತ್ರಪಿಂಡಗಳು ನಮ್ಮ ರಕ್ತವನ್ನು ಫಿಲ್ಟರ್ ಮಾಡಲು ಮತ್ತು ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ.
  • ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟಲು ಉತ್ತಮ ಮಾರ್ಗವೆಂದರೆ ಸಾಕಷ್ಟು ನೀರು ಕುಡಿಯುವುದು.
  • ಮೂತ್ರಪಿಂಡದ ಕಲ್ಲುಗಳಲ್ಲಿನ ಆಕ್ಸಲೇಟ್ ಅಂಶವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಈ ಆಹಾರಗಳನ್ನು ಸೇವಿಸೋದ್ರಿಂದ ಕಿಡ್ನಿ ಸ್ಟೋನ್ಸ್‌ ಉಂಟಾಗುವುದನ್ನ ತಡೆಯಬಹುದು. title=

Health Tips: ನಮ್ಮ ದೇಹದಲ್ಲಿ ಮೂತ್ರಪಿಂಡ ಒಂದು ಪ್ರಮುಖವಾದ ಅಂಗ ಎಂದು ಎಲ್ಲರಿಗೂ ತಿಳಿದಿದೆ. ನಮ್ಮ ದೇಹದಲ್ಲಿರುವ ಬೇಡವಾದ ಕೆಟ್ಟ ಅಂಶಗಳನ್ನು ಫಿಲ್ಟರ್‌ ಮಾಡಿ ಹೊರಹಾಕುವಲ್ಲಿ ಇವು ಬಹಳಷ್ಟು ಸಹಕಾರಿ. ಕಿಡ್ನಿಗಳ ಕಾರ್ಯನಿರ್ವಹಣೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ನಮ್ಮ ದೇಹದಲ್ಲಿರುವ ತ್ಯಾಜ್ಯ ವಸ್ತುಗಳು ರಕ್ತದಲ್ಲಿಯೇ ಉಳಿಯುತ್ತವೆ. ಈ ತ್ಯಾಜ್ಯಗಳು ರಕ್ತದಲ್ಲಿಯೇ ಉಳಿಯುವುದರಿಂದ ಅನೇಕ ರೋಗಗಳಿಗೆ ಇದು ದಾರಿ ಮಾಡಿಕೊಡುತ್ತದೆ. 

ಕಿಡ್ನಿ ಸ್ಟೋನ್‌ನ ಲಕ್ಷಣಗಳು

ಮೂತ್ರ ವಿಸರ್ಜನೆ ವೇಳೆ ವಿಪರೀತ ನೋವು 
ಮೂತ್ರದಲ್ಲಿ ರಕ್ತ
ಬೆನ್ನು ನೋವು
ಆಗಾಗ ವಾಕರಿಕೆ ಮತ್ತು ವಾಂತಿ 
ಮೂತ್ರ ವಿಸರ್ಜನೆ ವೇಳೆ ಉರಿ
ಸೊಂಟದ ಕೆಳಭಾಗದಲ್ಲಿ ನೋವು
ಜ್ವರ 
ಮೂತ್ರದ ಸೋಂಕು
ಮೂತ್ರದಲ್ಲಿ ವಾಸನೆ

ಇದನ್ನೂ ಓದಿ: ಏನಾದರೂ ತಿಂದ ಕೂಡಲೇ ಕಾಣಿಸಿಕೊಳ್ಳುವ ಹೊಟ್ಟೆನೋವಿಗೆ ಈ ಮೂರು ವಸ್ತುಗಳ ಮಿಶ್ರಣವೇ ಪರಿಹಾರ!

ಈ ರೋಗಲಕ್ಷಣಗಳೊಂದಿಗೆ ನೀವು ಕಿಡ್ನಿ ಸ್ಟೋನ್‌ ಅನ್ನು ಪತ್ತೆಹಚ್ಚಬಹುದು. ಸಾಮಾನ್ಯವಾಗಿ ಈ ಕಲ್ಲುಗಳು ಮೂತ್ರದೊಂದಿಗೆ ಹೊರಹೋಗುತ್ತವೆ. ಆದರೆ ಕೆಲವೊಮ್ಮೆ ಇವು ತುಂಬಾ ದೊಡ್ಡದಾಗಿರುತ್ತವೆ. ಈ ಸಂದರ್ಭದಲ್ಲಿ, ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು. ಅದಕ್ಕಾಗಿಯೇ ಮೂತ್ರಪಿಂಡದ ಕಲ್ಲುಗಳನ್ನು ತಡೆಯುವುದು ಬಹಳ ಮುಖ್ಯ. ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟಲು ಉತ್ತಮ ಮಾರ್ಗವೆಂದರೆ ಸಾಕಷ್ಟು ನೀರು ಕುಡಿಯುವುದು. ಇವುಗಳ ಜೊತೆಗೆ ಕಿಡ್ನಿಯಲ್ಲಿ ಕಲ್ಲು ಬರದಂತೆ ತಡೆಯುವ ಕೆಲವು ಆಹಾರಗಳ ಬಗ್ಗೆ ಇಲ್ಲಿ ತಿಳಿಯೋಣ. 

* ಬ್ರೊಕೊಲಿ

ಬ್ರೊಕೊಲಿಯು ಅಲ್ಪ ಪ್ರಮಾಣದ ಆಕ್ಸಲೇಟ್ ಅನ್ನು ಹೊಂದಿರುತ್ತದೆ. ಮೂತ್ರಪಿಂಡದ ಕಲ್ಲುಗಳಲ್ಲಿನ ಆಕ್ಸಲೇಟ್ ಅಂಶವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.  ಅದಕ್ಕಾಗಿಯೇ ಬ್ರೊಕೊಲಿ ಸೇವಿಸುವುದರಿಂದ ಮೂತ್ರಪಿಂಡದ ಕಲ್ಲುಗಳನ್ನು ತಡೆಗಟ್ಟಬಹುದು. ಬ್ರೊಕೊಲಿ 90 ರಷ್ಟು ನೀರಿನಿಂದ ಕೂಡಿದ್ದು. ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದು ಬಹಳ ಪ್ರಯೋಜನಕಾರಿಯಾಗಿದೆ. 

* ಕಲ್ಲಂಗಡಿ

ಕಲ್ಲಂಗಡಿಯಲ್ಲಿ ಪೊಟ್ಯಾಶಿಯಮ್ ಸಮೃದ್ಧವಾಗಿದೆ. ಕಲ್ಲಂಗಡಿ ತಿನ್ನುವುದರಿಂದ ಮೂತ್ರಪಿಂಡದ ಕಲ್ಲುಗಳನ್ನು ತಡೆಯಬಹುದು. ಅಲ್ಲದೆ, ಹೆಚ್ಚಿನ ನೀರಿನ ಅಂಶದಿಂದಾಗಿ, ಇದು ಮೂತ್ರಪಿಂಡದ ರೋಗಿಗಳಿಗೆ ತುಂಬಾ ಉಪಕಾರಿಯಾಗಿದೆ. 

ಇದನ್ನೂ ಓದಿ: Diabetes Control Tips: ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ನಿಮ್ಮ ಆಹಾರದಲ್ಲಿರಲಿ ಈ ಎಣ್ಣೆ!

* ಮೊಸರು

ಮೊಸರು ಕ್ಯಾಲ್ಸಿಯಂ ಅಂಶವನ್ನು ಹೊಂದಿದೆ. ಇದು ಆಕ್ಸಲೇಟ್ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಇದು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಡೈರಿ ಉತ್ಪನ್ನಗಳು ಕಿಡ್ನಿ ಪೇಷಂಟ್‌ಗಳಿಗೆ ಬಹಳ ಉಪಕಾರಿಯಾಗಿದ್ದು. ಇದನ್ನು ಸೇವಿಸುವುದು ಉತ್ತಮ.
 
* ಕಿತ್ತಳೆ

ಕಿತ್ತಳೆಗಳು ಸಿಟ್ರಿಕ್ ಆಸಿಡ್‌ನ ಉತ್ತಮ ಮೂಲವಾಗಿದೆ. ಮೂತ್ರಪಿಂಡದ ಕಲ್ಲುಗಳಿಂದ ರಕ್ಷಿಸುವಲ್ಲಿ ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಇವುಗಳ ಜೊತೆಗೆ ನಿಂಬೆಹಣ್ಣನ್ನು ಸೇವಿಸುವುದರಿಂದ ಕಿಡ್ನಿ ಕಲ್ಲುಗಳನ್ನು ಕರಗಿಸಬಹುದು. 

* ಸ್ಟ್ರಾಬೆರಿ

ಸ್ಟ್ರಾಬೆರಿ ತಿನ್ನುವುದು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸ್ಟ್ರಾಬೆರಿಗಳು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಅವುಗಳಲ್ಲಿ ಆಕ್ಸಲೇಟ್ ಕೂಡ ಕಡಿಮೆ. ಇದರೊಂದಿಗೆ, ಬೆರಿಹಣ್ಣುಗಳನ್ನು ತಿನ್ನುವುದು ನಿಮ್ಮ ಮೂತ್ರಪಿಂಡಗಳ ಕಲ್ಲನ್ನು ಕರಗಿಸುವಲ್ಲಿ ಕೂಡ  ಪ್ರಯೋಜನಕಾರಿಯಾಗಿದೆ.

( ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. )

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News