High BP: ಅಧಿಕ ರಕ್ತದೊತ್ತಡ ಸಮಸ್ಯೆ ನಿವಾರಣೆಗೆ ಆಹಾರದಲ್ಲಿರಲಿ ಬಾಳೆಕಾಯಿ!

Health Tips: ಕಚ್ಚಾ ಬಾಳೆಹಣ್ಣಿನಲ್ಲಿ ಹಲವು ಪೋಷಕಾಂಶಗಳಿರುತ್ತವೆ.ಈ ಲೇಖನದಲ್ಲಿ ನಾವು ನಿಮಗೆ ಬಾಳೆಕಾಯಿ ಸೇವನೆಯಿಂದ ಯಾವ ಯಾವ ಆರೋಗ್ಯಕರ ಲಾಭಗಳಾಗುತ್ತೇವೆ ಎಂಬುದನ್ನು ಹೇಳಿಕೊಡಲಿದ್ದೇವೆ.  

Written by - Nitin Tabib | Last Updated : Jul 1, 2023, 10:20 PM IST
  • ಜೀರ್ಣಕ್ರಿಯೆಯನ್ನು ಸುಧಾರಿಸಲು ಬಾಳೆಕಾಯಿ ಸೇವಿಸುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
  • ಬಾಳೆಕಾಯಿ ಫೈಬರ್ನಲ್ಲಿ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
  • ಇದು ಮಲಬದ್ಧತೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
High BP: ಅಧಿಕ ರಕ್ತದೊತ್ತಡ ಸಮಸ್ಯೆ ನಿವಾರಣೆಗೆ ಆಹಾರದಲ್ಲಿರಲಿ ಬಾಳೆಕಾಯಿ! title=

Health Tips: ಹಸಿ ಬಾಳೆಹಣ್ಣಿನ ಸೇವನೆ ಆರೋಗ್ಯಕ್ಕೆ ತುಂಬಾ ಹಿತಕಾರಿಯಾಗಿದೆ. ಅನೇಕ ಪೌಷ್ಟಿಕಾಂಶಗಳು ಹಸಿ ಬಾಳೆಹಣ್ಣಿನಲ್ಲಿ ಕಂಡುಬರುತ್ತವೆ, ಇದು ಅನೇಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹಸಿ ಬಾಳೆಹಣ್ಣಿನ ಸೇವನೆಯು ರಕ್ತದೊತ್ತಡವನ್ನು ನಿಯಂತ್ರಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಇನ್ನೊಂದೆಡೆ, ಬಾಳೆಕಾಯಿ ಫೈಬರ್ ನ ಸಮೃದ್ಧ ಮೂಲವಾಗಿದೆ, ಇದು ಹೊಟ್ಟೆಯ ಆರೋಗ್ಯಕ್ಕೂ ಕೂಡ ಪ್ರಯೋಜನಕಾರಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹಸಿ ಬಾಳೆಹಣ್ಣಿನ ಸೇವನೆಯಿಂದ ಆಗುವ ಆರೋಗ್ಯ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಬಾಳೆಕಾಯಿ ಸೇವನೆಯ ಪ್ರಯೋಜನಗಳು
ಹೃದಯ ಆರೋಗ್ಯ ರಕ್ಷಕ

ಹಸಿ ಬಾಳೆಹಣ್ಣಿನ ಸೇವನೆಯು ಹೃದಯವನ್ನು ಆರೋಗ್ಯ ರಕ್ಷಣೆಗೆ ಪ್ರಯೋಜನಕಾರಿಯಾಗಿದೆ. ಹಸಿ ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಇರುತ್ತದೆ. ಇದು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಅದು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಹೀಗಾಗಿ ನೀವೂ ಕೂಡ ನಿಮ್ಮ ಆಹಾರದಲ್ಲಿ ಹಸಿ ಬಾಳೆಹಣ್ಣನ್ನು ಸೇರಿಸಿಕೊಳ್ಳಬಹುದು.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ಜೀರ್ಣಕ್ರಿಯೆಯನ್ನು ಸುಧಾರಿಸಲು ಬಾಳೆಕಾಯಿ ಸೇವಿಸುವುದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಬಾಳೆಕಾಯಿ ಫೈಬರ್ನಲ್ಲಿ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ತೂಕ ಇಳಿಕೆಗೆ ಪ್ರಯೋಜನಕಾರಿಯಾಗಿದೆ
ಹಸಿ ಬಾಳೆಹಣ್ಣನ್ನು ಸೇವಿಸುವುದು ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತದೆ. ಹಸಿ ಬಾಳೆಹಣ್ಣಿನಲ್ಲಿ ಸಾಕಷ್ಟು ನಾರಿನಂಶವಿದೆ. ಇದರಿಂದ ಹೊಟ್ಟೆ ತುಂಬಾ ಹೊತ್ತು ತುಂಬಿದ ಅನುಭವ ನೀಡುತ್ತದೆ ಮತ್ತು ಹಸಿವು ಕೂಡ ಕಡಿಮೆಯಾಗುತ್ತದೆ. ಹೀಗಾಗಿ ಇದು ತೂಕವನ್ನು ಇಳಿಕೆ ಮಾಡಲು ಸಹಾಯಕವಾಗಿದೆ.

ಇದನ್ನೂ ಓದಿ-Ghee Benefits: ನಿಮ್ಮ ಮುಂಗಾರಿನ ಆಹಾರದಲ್ಲಿರಲಿ ದೇಸಿ ತುಪ್ಪ, ಕಾರಣ ಇಲ್ಲಿದೆ

ಮೂಳೆಗಳ ಆರೋಗ್ಯ ರಕ್ಷಕ 
ಮೂಳೆಗಳನ್ನು ಬಲಪಡಿಸಲು ಹಸಿ ಬಾಳೆಹಣ್ಣು ತುಂಬಾ ಪ್ರಯೋಜನಕಾರಿಯಾಗಿದೆ. ಹಸಿ ಬಾಳೆಹಣ್ಣಿನಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಇದ್ದು ಮೂಳೆಗಳು ಗಟ್ಟಿಯಾಗಲು ಇದು ಸಹಾಯ ಮಾಡುತ್ತದೆ.

ಇದನ್ನೂ ಓದಿ-Sleep Disorder: ರಾತ್ರಿ ಹೊತ್ತು ಸರಿಯಾಗಿ ನಿದ್ರಿಸಲು ಈ ಉಪಾಯಗಳನ್ನು ಒಮ್ಮೆ ಅನುಸರಿಸಿ ನೋಡಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿವೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಗಳನ್ನು ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News