Chanakya Niti: ನಿಮ್ಮ ಬಾಲ್ಯದಲ್ಲಿ ಆಚಾರ್ಯ ಚಾಣಕ್ಯರ ಬಗ್ಗೆ ನೀವು ಕೇಳಿರಬೇಕು ಅಥವಾ ಓದಿರಬೇಕು. ರಾಜನನ್ನೇ ಸಿಂಹಾಸನದಿಂದ ಕೆಳಗಿಳಿಸಿ ಕುರುಬನ ಮಗನಿಗೆ ಸಿಂಹಾಸನವನ್ನು ನೀಡುವ ಮೂಲಕ ತಮಗಾದ ಅವಮಾನಕ್ಕೆ ಚಾಣಕ್ಯರು ಸೇಡು ತೀರಿಸಿಕೊಂಡಿದ್ದರು. ಆಚಾರ್ಯ ಚಾಣಕ್ಯರು ಚಂದ್ರಗುಪ್ತ ಮೌರ್ಯನಿಗೆ ಸಿಂಹಾಸನವನ್ನು ಹಸ್ತಾಂತರಿಸುವ ಮೂಲಕ ಅವರನ್ನು ಸಮರ್ಥ ರಾಜನನ್ನಾಗಿ ಮಾಡಿದನು. ಇದರೊಂದಿಗೆ ಅವರು ಆದರ್ಶ ಜೀವನದ ಬಗ್ಗೆ ಒಂದು ಪುಸ್ತಕವನ್ನೂ ಬರೆದರು, ಇದನ್ನು ಚಾಣಕ್ಯ ನೀತಿ ಅಥವಾ ನೀತಿ ಶಾಸ್ತ್ರ ಎಂದು ಕರೆಯಲಾಗುತ್ತದೆ. ನೀತಿಶಾಸ್ತ್ರದಲ್ಲಿ ಬರೆದಿರುವ ಅನೇಕ ವಿಷಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಯಾವುದೇ ಒಬ್ಬ ವ್ಯಕ್ತಿಯು ಆದರ್ಶ ಜೀವನವನ್ನು ನಡೆಸಬಹುದು.
ಹಲವಾರು ಕಾರಣಗಳಿಂದ ಅನೇಕ ಜನರು ತಮ್ಮ ಜೀವನದುದ್ದಕ್ಕೂ ಬಡವರಾಗಿರುತ್ತಾರೆ ಎಂದು ಚಾಣಕ್ಯರು ಹೇಳಿದ್ದಾರೆ. ಮೊದಲ ಕಾರಣ ಅವರ ಕರ್ಮ, ಎರಡನೆಯದು ತಪ್ಪು ಸ್ಥಳದಲ್ಲಿ ವಾಸಿಸುವುದು. ಜನರ ಬಡತನದಲ್ಲಿ ಇವುಗಳ ಪಾತ್ರ ದೊಡ್ಡದು ಎಂದು ಚಾಣಕ್ಯರು ಹೇಳಿದ್ದಾರೆ. ಚಾಣಕ್ಯ ನೀತಿಯಲ್ಲಿ ಶ್ರೀಮಂತಿಕೆ ಮತ್ತು ಬಡತನದ ಬಗ್ಗೆಯೂ ಅವರು ತಿಳಿಸಿದ್ದಾರೆ. ಯಾರು ಹೇಗೆ ಶ್ರೀಮಂತರಾಗುತ್ತಾರೆ ಮತ್ತು ಯಾರು ಯಾವ ತಪ್ಪಿನಿಂದ ಬಡವರಾಗಿ ಉಳಿಯುತ್ತಾರೆ ಅನ್ನೋದನ್ನ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: 100 ವರ್ಷಗಳ ನಂತರ ಹೋಳಿಯಂದು ತ್ರಿಗ್ರಹಿ ಯೋಗ..! ಈ ರಾಶಿಯವರು ಹಣದ ಬಗ್ಗೆ ಚಿಂತಿಸುವ ಹಾಗಿಲ್ಲ..!
ನೀತಿ ಶಾಸ್ತ್ರದ ಮೊದಲ ಅಧ್ಯಾಯದ 9ನೇ ಶ್ಲೋಕದಲ್ಲಿ ಆಚಾರ್ಯ ಚಾಣಕ್ಯರು, ʼಐದು ಸ್ಥಳಗಳಲ್ಲಿ ವಾಸಿಸುವ ಜನರು ಯಾವಾಗಲೂ ತಮ್ಮ ಜೀವನದಲ್ಲಿ ಬಡವರು ಮತ್ತು ಅತೃಪ್ತರಾಗಿರುತ್ತಾರೆ ಎಂದು ಹೇಳಿದ್ದಾರೆ. ಈ ಜನರು ಎಷ್ಟೇ ಕಷ್ಟಪಟ್ಟರೂ ಸಹ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಈ ಜನರು ಒಬ್ಬ ಕಾಮುಕ ಮತ್ತು ಮೂರ್ಖ ವ್ಯಕ್ತಿಯಂತೆ ಬದುಕುತ್ತಾರೆ. ಅವರಿಗೆ ಶಾಸ್ತ್ರಗಳ ಜ್ಞಾನವೂ ಇರಲ್ಲ, ಕಲಿಯಲು ಪ್ರಯತ್ನಿಸುವುದೂ ಇಲ್ಲʼವೆಂದು ತಿಳಿಸಿದ್ದಾರೆ.
ಯಾವುದೇ ವ್ಯಕ್ತಿ ವಾಸಿಸಬಾರದ 5 ಸ್ಥಳಗಳು
ಬ್ರಾಹ್ಮಣರು ವಾಸಿಸುವ ಸ್ಥಳ: ಆಚಾರ್ಯ ಚಾಣಕ್ಯರ ಪ್ರಕಾರ, ವೇದಗಳನ್ನು ತಿಳಿದಿರುವ ಯಾವುದೇ ಬ್ರಾಹ್ಮಣರು ವಾಸಿಸುವ ಸ್ಥಳ. ಇಂತಹ ಸ್ಥಳಗಳಲ್ಲಿ ವಾಸಿಸದ ಜನರು ಯಾವಾಗಲೂ ಬಡವರಾಗಿಯೇ ಇರುತ್ತಾರೆ. ಆದ್ದರಿಂದ ಈ ಸ್ಥಳವನ್ನು ತಕ್ಷಣವೇ ಬಿಡಬೇಕು. ಏಕೆಂದರೆ ಬ್ರಾಹ್ಮಣರು ಧಾರ್ಮಿಕ ಚಟುವಟಿಕೆಗಳ ಮೂಲಕ ಧರ್ಮವನ್ನು ರಕ್ಷಿಸುತ್ತಾರೆ ಎಂದು ಆಚಾರ್ಯ ಚಾಣಕ್ಯರು ನಂಬಿದ್ದಾರೆ. ಬ್ರಾಹ್ಮಣರು ಅಂದರೆ ಬುದ್ಧಿವಂತರು ವಾಸಿಸುವ ಸ್ಥಳಗಳಲ್ಲಿ ವಾಸಿದದರೆ ಮಾತ್ರ ವ್ಯಕ್ತಿ ಪ್ರಗತಿ ಹೊಂದಲು ಸಾಧ್ಯವೆಂದು ಅವರು ಪ್ರತಿಪಾದಿಸಿದ್ದಾರೆ.
ವ್ಯಾಪಾರಸ್ಥರು ವಾಸಿಸದ ಸ್ಥಳ: ವ್ಯಾಪಾರಸ್ಥರು ವಾಸಿಸದ ಸ್ಥಳದಲ್ಲಿ ಯಾವುದೇ ವ್ಯಕ್ತಿ ಇದ್ದರೆ ಆತ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಆ ಸ್ಥಳದ ಜನರು ಕೂಡ ಬಡವರಾಗಿಯೇ ಇರುತ್ತಾರೆ. ಹೀಗಾಗಿ ಈ ಸ್ಥಳವನ್ನೂ ತಕ್ಷಣವೇ ಬಿಡಬೇಕು.
ಬಲಿಷ್ಠ ರಾಜ ಅಥವಾ ಆಡಳಿತ: ಯಾವ ಪ್ರದೇಶದಲ್ಲಿ ಬಲಿಷ್ಠ ರಾಜನಿಲ್ಲವೋ ಅಥವಾ ಆಡಳಿತ ವ್ಯವಸ್ಥೆ ಇರುವುದಿಲ್ಲವೋ ಅಂತಹ ಸ್ಥಳದಲ್ಲಿ ಯಾವುದೇ ವ್ಯಕ್ತಿ ವಾಸಿಸಬಾರದು. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿ ಅರಾಜಕತೆ ಹರಡುತ್ತದೆ. ಆದ್ದರಿಂದ ಇಲ್ಲಿ ವಾಸಿಸುವ ಮೂಲಕ ಯಾರೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಒಂದು ಈ ಸ್ಥಳದಲ್ಲಿ ವಾಸಿಸಿದರೆ ಆ ವ್ಯಕ್ತಿಗೆ ಆರ್ಥಿಕ ನಷ್ಟವಾಗುತ್ತದೆ.
ಇದನ್ನೂ ಓದಿ: ಸೋಮವಾರದಂದು ನಾವು ಯಾವ ದೇವರನ್ನು ಪೂಜಿಸಿದರೆ ಒಳ್ಳೆಯದು ಗೊತ್ತಾ? ಇಲ್ಲಿದೆ ಮಹತ್ವದ ಮಾಹಿತಿ..!
ನೀರು ಇಲ್ಲದ ಸ್ಥಳ: ನೀರು ಇದ್ದರೆ ಮಾತ್ರ ನಮ್ಮ ಜೀವನ. ಯಾವ ವ್ಯಕ್ತಿ ನೀರು-ನದಿ ಇಲ್ಲದ ಸ್ಥಳದಲ್ಲಿ ವಾಸಿಸುತ್ತಾರೋ ಅವರ ಜೀವನ ನರಕಮಯವಾಗುತ್ತದೆ. ಹೀಗಾಗಿ ಆ ಸ್ಥಳದಲ್ಲಿ ವಾಸಿಸುವುದು ಸರಿಯಲ್ಲ. ನದಿ ಇಲ್ಲದೆ ಜೀವನ ತುಂಬಾ ಕಷ್ಟ. ಜೀವನ ಮತ್ತು ನೀರಾವರಿ ಎರಡಕ್ಕೂ ನೀರು ಅವಶ್ಯಕ.
ವೈದ್ಯರು ಇಲ್ಲದ ಸ್ಥಳ: ವೈದ್ಯ ಅಂದರೆ ವೈದ್ಯರು ಇಲ್ಲದ ಸ್ಥಳದಲ್ಲಿ ಯಾವುದೇ ವ್ಯಕ್ತಿ ವಾಸಿಸಬಾರದು. ಯಾವುದೇ ಕಾಯಿಲೆಯ ಚಿಕಿತ್ಸೆಗೆ ವೈದ್ಯರ ಉಪಸ್ಥಿತಿ ಅಗತ್ಯವಾದ್ದರಿಂದ ಆ ಸ್ಥಳದಲ್ಲಿ ಉಳಿಯುವುದು ಸರಿಯಲ್ಲ. ಅಂತಹ ಸ್ಥಳದಲ್ಲಿ ಯಾವುದೇ ವ್ಯಕ್ತಿ ವಾಸಿಸುವುದು ಸೂಕ್ತವಲ್ಲ. ಹೀಗಾಗಿ ವೈದ್ಯರು ಇರುವ ಸ್ಥಳದಲ್ಲಿಯೇ ವಾಸಿಸಬೇಕು.
(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.