ಬೆಂಗಳೂರು : ತುಪ್ಪದ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆ ಇದೆ. ತುಪ್ಪ ಬೊಜ್ಜು (obesity) ಬೆಳೆಸುತ್ತದೆ, ಕೊಲೆಸ್ಟ್ರಾಲ್ (Cholesterol) ಹೆಚ್ಚಿಸುತ್ತದೆ. ತುಪ್ಪ ಹೃದಯದ (Heart) ಆರೋಗ್ಯಕ್ಕೆ ಒಳ್ಳೆಯದಲ್ಲ. ಅದು ಇದು ಎಲ್ಲಾ ಹೇಳುತ್ತಾರೆ. ಅವೆಲ್ಲ ಸುಳ್ಳು. ತುಪ್ಪ ತಿನ್ನೋದು ದೇಹಾರೋಗ್ಯಕ್ಕೆ ತುಂಬಾ ಒಳ್ಳೆಯದು. ತೂಕ ಇಳಿಸೋಕೆ ತುಪ್ಪ (Ghee) ಬೇಕೇ ಬೇಕು. ಹೃದಯದ ಆರೋಗ್ಯಕ್ಕೆ ತುಪ್ಪ ತುಂಬಾ ಒಳ್ಳೆಯದು. ಶುದ್ಧ ತುಪ್ಪ ತಿಂದರೆ ದೀರ್ಘಾಯುಷಿಗಳಾಗುತ್ತೀರಿ (Long Life) ಎನ್ನುತ್ತದೆ ಆರ್ಯುವೇದ (Ayurveda). ಹಾಗಾಗಿ, ತುಪ್ಪಅಂದರೆ ಯಾವುದೇ ಕಾರಣಕ್ಕೆ ಮೂಗು ಮುರಿಯಬೇಡಿ.
ತುಪ್ಪ ಯಾಕೆ ತಿನ್ನಬೇಕು..? ಆರೋಗ್ಯಕ್ಕೆ ಲಾಭ ಏನು.?
1. ಕೀಲು ನೋವು (Joint Pain) ಇರುವವರು ತುಪ್ಪ ತಿನ್ನಲೇ ಬೇಕು. ತುಪ್ಪ ಕೀಲು ನೋವು ಕಡಿಮೆ ಮಾಡುತ್ತೆ.
2. ಪದೇ ಪದೇ ಕೂದಲು ಉದುರುತ್ತದೆಯಾ (Hair fall)..? ತುಪ್ಪ ತಿಂದು ನೋಡಿ. ಕೂದಲು ಉದುರುವುದನ್ನೂ ಅದು ನಿಲ್ಲಿಸುತ್ತದೆ.
3. ನಮ್ಮ ದೇಹದ ಅತ್ಯಂತ ಮುಖ್ಯ ಅಂಗ ಮೆದುಳು . ತುಪ್ಪ ತಿಂದರೆ ಮೆದುಳು ಚುರುಕಾಗುತ್ತೆ (Active Brain)
4. ಗೊತ್ತಿರಲಿ ತುಪ್ಪ ನಮ್ಮ ದೇಹದ ಲಿಪಿಡ್ ಪ್ರೊಫೈಲ್ (Lipid Profile) ಸರಿಯಾಗಿಡುತ್ತದೆ
5. ತುಪ್ಪ ತಿಂದರೆ ಕಾಂತಿಯುಕ್ತ ಕಣ್ಣು ನಿಮ್ಮದಾಗುತ್ತದೆ.
6. ಖಿನ್ನತೆ (Depression), ಒತ್ತಡ(Stress), ಟೆನ್ಶನ್ (Tension)ಮುಂತಾದ ಮಾನಸಿಕ ಕಾಯಿಲೆಯಿಂದ ತುಪ್ಪ ನಿಮಗೆ ರಕ್ಷಣೆ ನೀಡುತ್ತದೆ
ಇದನ್ನೂ ಓದಿ : Military Diet ಅನುಸರಿಸಿ ಕೇವಲ ಮೂರೇ ದಿನಗಳಲ್ಲಿ ನಿಮ್ಮ ತೂಕ ಇಳಿಸಿ
ಹಾಗಂದ ಮಾತ್ರಕ್ಕೆ ಬೇಕಾಬಿಟ್ಟಿ ತುಪ್ಪ (Ghee) ತಿನ್ನಲೂ ಬಾರದು. ಯಾವ ವಯಸ್ಸಿನವರು ಎಷ್ಟು ತುಪ್ಪ ತಿನ್ನಬೇಕು ತಿಳಿದುಕೊಳ್ಳಿ. ದಿನಕ್ಕಿಷ್ಟೇ ಪ್ರಮಾಣದಲ್ಲಿ ತುಪ್ಪು ತಿನ್ನಬೇಕು. ಯಾವ ವಯಸ್ಸಿನವರು ದಿನಕ್ಕೆ ಎಷ್ಟು ಪ್ರಮಾಣದಲ್ಲಿ ತುಪ್ಪ ತಿನ್ನಬೇಕು, ಅದರಿಂದ ಏನು ಲಾಭ ಎಂಬ ವಿಸ್ತ್ರತ ಮಾಹಿತಿ ಇಲ್ಲಿದೆ. ಓದಿ.
1. ಮಕ್ಕಳು ದಿನಕ್ಕೆ ಎಷ್ಟು ತುಪ್ಪ ತಿನ್ನಬೇಕು?
10 ವರ್ಷ ಮತ್ತು ಅದಕ್ಕೂ ಕಡಿಮೆ ಪ್ರಾಯದವರಿಗೆ (Children) ತುಪ್ಪ ತುಂಬಾ ಒಳ್ಳೆಯದು. ದಿನವೂ ತುಪ್ಪ ತಿನ್ನಲೇ ಬೇಕು. ಹತ್ತು ವರ್ಷದೊಳಗಿನ ಮಕ್ಕಳು ಸಣ್ಣ ಚಮಚದಲ್ಲಿ 10 ರಿಂದ 12 ಚಮಚ ತುಪ್ಪು ತಿನ್ನಬಹುದು. ದಿನಕ್ಕೆ ಅಷ್ಟು ತುಪ್ಪ ಬೇಕು. ಇದರಿಂದ ಮಕ್ಕಳ ಮೆದುಳು (Brain) ತುಂಬಾ ಚುರುಕಾಗುತ್ತದೆ. ಮತ್ತು ಮೆದುಳಿನ ಸಮತೋಲಿತ ಬೆಳವಣಿಗೆಗೆ ಸಹಕಾರಿಯಾಗುತ್ತದೆ.
2. ಹತ್ತರಿಂದ 20 ವರ್ಷದ ಹದಿಹರೆಯದವರು:
10 ರಿಂದ 20 ವರ್ಷದ ಹಂತದಲ್ಲಿ ಮಕ್ಕಳು ಪ್ರೌಢಾವಸ್ಥೆಗೆ ಬದಲಾಗುತ್ತಿರುತ್ತಾರೆ. ಈ ಹಂತದಲ್ಲಿ ಹಲವು ಹೊಸ ಹಾರ್ಮೋನುಗಳು (Harmon)ದೇಹದಲ್ಲಿ ಸೃಷ್ಟಿಯಾಗುತ್ತಿರುತ್ತದೆ. ಈ ಹರೆಯದಲ್ಲಿ ಹದಿಹರೆಯದವರು (Teenagers) ದಿನಕ್ಕೆ ಸಣ್ಣ ಚಮಚದಲ್ಲಿ 8 ಚಮಚ ತುಪ್ಪ ತಿಂದರೆ ಒಳ್ಳೆಯದು. ಇದರಿಂದ ಹಾರ್ಮೋನ್ ಬ್ಯಾಲೆನ್ಸ್ ಆಗುತ್ತದೆ.
ಇದನ್ನೂ ಓದಿ : Healthy Kidney : ಕಿಡ್ನಿ ಸ್ಟೋನ್ ಗೆ ಕಾರಣವಾಗುವ ಈ ಐದು ತಪ್ಪು ಮಾಡಲೇಬೇಡಿ.!
3. 20 ರಿಂದ 45 ವರ್ಷದವರು.:
20 ರಿಂದ 45 ವರ್ಷದವರು ದಿನಕ್ಕೆ 5ರಿಂದ 9 ಚಮಚ ತುಪ್ಪ ತಿನ್ನಬಹುದು. ಆದರ ಜೊತೆ ಸಮತೋಲಿತವಾಗಿ ವರ್ಕೌಟ್ (work out) ಮಾಡಬೇಕು. ಇದರಿಂದ ಕೆಲಸದ ಒತ್ತಡ, ಟೆನ್ಶನ್, ಖಿನ್ನತೆ ಇದ್ದರೂ ದೂರವಾಗುತ್ತದೆ. ಒಳ್ಳೆಯ ನಿದ್ರೆ ಬರುತ್ತದೆ.
4. 45 ರಿಂದ 60 ವರ್ಷದವರು :
45 ರಿಂದ 60 ವರ್ಷದ ಮಧ್ಯವಯಸ್ಸಿನವರು (Middle age) ಆರೋಗ್ಯದ (Health) ಬಗ್ಗೆ ತುಂಬಾ ಗಮನವಹಿಸಬೇಕು. ಈ ಹಂತದಲ್ಲಿ ಅವರು ದಿನಕ್ಕೆ 5 ರಿಂದ 7 ಚಮಚ ತುಪ್ಪ ತಿನ್ನಬಹುದು. ಇದು ಕೀಲುಗಂಟಿನ ನೋವಿಗೆ ತುಂಬಾ ಒಳ್ಳೆಯದು. ಗಂಟು ನೋವು ಕಡಿಮೆಯಾಗುತ್ತದೆ. ಇಷ್ಟೇ ಅಲ್ಲ, ವಯಸ್ಸಾಗುವಾಗ ಆವರಿಸುವ ಮರೆವಿನ ಕಾಯಿಲೆಗೆ ತುಪ್ಪ ರಾಮಬಾಣ.
5. 60 ವರ್ಷದ ನಂತರ :
ಅರುವತ್ತರ ನಂತರ ವಯೋಸಹಜ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಈ ಹೊತ್ತಿನಲ್ಲಿ ನೀವು ದಿನಕ್ಕೆ 6 ಸಣ್ಣ ಚಮಚದಷ್ಟು ಪ್ರಮಾಣದಷ್ಟು ತುಪ್ಪ ನಿಮ್ಮ ದೇಹಕ್ಕೆ ಸಾಕಾಗುತ್ತದೆ. ಇದರಿಂದ ಪ್ರಯೋಜನವೆಂದರೆ, ಮಲಬದ್ಧತೆ ಉಂಟಾಗುವುದಿಲ್ಲ. ಜೊತೆಗೆ ವಯಸ್ಸಾದಾಗ ಕಾಡುವ ಮರೆಗುಳಿತನ ತುಂಬಾ ಕಡಿಮೆಯಾಗುತ್ತದೆ.
ಇದನ್ನೂ ಓದಿ : Spicy Food ತಿನ್ನುವುದರಿಂದ ಅನಾನುಕೂಲ ಮಾತ್ರವಲ್ಲ, ಕೆಲವು ಪ್ರಯೋಜನವೂ ಇದೆ
ಕೊನೆಯಲ್ಲಿ ನೆನಪಿಟ್ಟುಕೊಳ್ಳಿ. ಯಾವತ್ತೂ ಶುದ್ಧ ತುಪ್ಪವನ್ನೇ ತಿನ್ನಿ. ಮನೆಯಲ್ಲಿಯೇ ತುಪ್ಪ ಮಾಡಿದರೆ ಇನ್ನೂ ಒಳ್ಳೆಯದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.