ನವದೆಹಲಿ: ಮೊಸರನ್ನು ಯಾರೂ ತಾನೇ ಇಷ್ಟಪಡುವುದಿಲ್ಲ ಹೇಳಿ. ಪ್ರತಿದಿನ ಊಟದಲ್ಲಿ ಮೊಸರು ಸೇವಿಸುವುದು ಸಾಮಾನ್ಯ. ಊಟದ ನಂತರ ಸಕ್ಕರೆ ಹಾಕಿಕೊಂಡು ಮೊಸರು ಸೇವಿಸುವ ರೂಢಿ ಸಹ ಇದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಸಾಮಾನ್ಯವಾಗಿ ಮೊಸರನ್ನು ಎಲ್ಲರೂ ಇಷ್ಟಪಟ್ಟು ಸೇವಿಸುತ್ತಾರೆ. ಆದರೆ, ಯಾವ ಸಮಯದಲ್ಲಿ ಮೊಸರು ತಿನ್ನಬೇಕು ಅನ್ನೋದು ಬಹುತೇಕರಿಗೆ ಕನ್ಫೂಸ್ ಆಗಿರುತ್ತದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಬಹುತೇಕ ಜನರು ಪ್ರತಿದಿನ ಸೇವಿಸುವ ಆಹಾರದಲ್ಲಿ ಮೊಸರು ಬಳಸುತ್ತಾರೆ. ಬೆಳಗಿನ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಮೊಸರು ಬೇಕೇ ಬೇಕು. ಮೊಸರು ಇಲ್ಲದಿದ್ದರೆ ಕೆಲವರು ಊಟವನ್ನೇ ಮಾಡುವುದಿಲ್ಲ. ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಮೊಸರು ಸೂಪರ್‌ಫುಡ್ ಆಗಿದೆ. ಮೊಸರಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ವಿಟಮಿನ್ ಬಿ-12, ಲಿನೋಲಿಕ್ ಆಮ್ಲ ಮತ್ತು ಇತರ ಪ್ರಮುಖ ಕೊಬ್ಬಿನಾಮ್ಲಗಳು ಹೇರಳವಾಗಿರುತ್ತದೆ.
ಇದನ್ನೂ ಓದಿ: ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಲು ಇದುವೇ ಪ್ರಮುಖ ಕಾರಣ ..! ಅಪಾಯಕ್ಕಿಂತ ಮುನ್ನ ಎಚ್ಚೆತ್ತುಕೊಳ್ಳಿ
ಎಲ್ಲಾ ಋತುವಿನಲ್ಲಿಯೂ ಮೊಸರು ಲಭ್ಯವಿರುತ್ತದೆ. ಆದರೆ, ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಮೊಸರಿನಿಂದ ಲಸ್ಸಿ ಸೇರಿದಂತೆ ಅನೇಕ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ವಿವಿಧ ರೀತಿ ಮೊಸರಿನಿಂದ ತಯಾರಿಸಿದ ಉತ್ಪನ್ನಗಳನ್ನು ಸೇವಿಸುವುದರಿಂದ ನಮ್ಮ ಮನಸ್ಸು ಉಲ್ಲಸಿತವಾಗುತ್ತದೆ. ನಿಯಮಿತವಾಗಿ ಮೊಸರು ಸೇವಿಸುವುದರಿಂದ ಅನೇಕ ಆರೋಗ್ಯಕಾರಿ ಪ್ರಯೋಜನಗಳಿವೆ. ಕೇವಲ ಊಟಕ್ಕೆ ಮಾತ್ರವಲ್ಲದೆ ಸೌಂದರ್ಯವರ್ಧಕವಾಗಿಯೂ ಮೊಸರನ್ನು ಬಳಕೆ ಮಾಡಲಾಗುತ್ತದೆ. ಮೊಸರಿನ ಫೇಸ್‍ಪ್ಯಾಕ್ ಬಳಸುವುದರಿಂದ ಸುಂದರ ತ್ವಚೆ ನಿಮ್ಮದಾಗುತ್ತದೆ. ಪುರುಷ-ಮಹಿಳೆಯರಿಗೆ ಕಾಡುವ ತಲೆಹೊಟ್ಟು ಮತ್ತು ಹೊಳೆಯುವ ಕೂದಲಿನ ಆರೈಕೆಗೂ ಸಹ ಮೊಸರು ಸಹಕಾರಿಯಾಗಿದೆ.
ಯಾವ ಸಮಯದಲ್ಲಿ ಮೊಸರು ಸೇವಿಸಿದರೆ ಉತ್ತಮ?
ವರದಿಗಳ ಪ್ರಕಾರ ಪ್ರತಿದಿನವೂ ಮೊಸರು ಅನ್ನವನ್ನು ಸೇವಿಸಬಾರದಂತೆ. ಯಾವುದೇ ಆಹಾರವಿರಲಿ ಸರಿಯಾದ ರೀತಿ ಬಳಕೆ ಮಾಡುವುದು ಉತ್ತಮ. ಸರಿಯಾದ ಸಮಯದಲ್ಲಿ, ಸರಿಯಾದ ಪ್ರಮಾಣದಲ್ಲಿ ಸೇವಿಸದಿದ್ದರೆ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಹೀಗಾಗಿ ಪ್ರತಿದಿನ ಮೊಸರನ್ನವನ್ನು ಸೇವಿಸಬಾರದು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: Diabetes Diet: ಮಧುಮೇಹಿಗಳಿಗೆ ಅಪಾರ ಪ್ರಯೋಜನ ನೀಡಲಿದೆ ಈ ಬೀಜ
ಇದಲ್ಲದೆ ರಾತ್ರಿ ವೇಳೆ ಮೊಸರು ತಿನ್ನಬಾರದಂತೆ. ರಾತ್ರಿ ಸಮಯದಲ್ಲಿ ಮೊಸರು ತಿಂದರೆ ದೇಹದಲ್ಲಿ ಹೆಚ್ಚಿನ ಲೋಳೆ ಉತ್ಪತ್ತಿಯಾಗುತ್ತದೆ. ಇದು ಎದೆಯ ಸೋಂಕು ಮತ್ತು ಚರ್ಮ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ. ಇದಲ್ಲದೆ ಪ್ರತಿದಿನ ಮೊಸರು ಸೇವನೆಯು ಆರೋಗ್ಯಕ್ಕೆ ಪ್ರಯೋಜನಕಾರಿಯಲ್ಲವಂತೆ.
ಮೊಸರು ಉತ್ತಮ ಬ್ಯಾಕ್ಟೀರಿಯಾ ಗುಣ ಹೊಂದಿರುತ್ತದೆ. ಹೀಗಾಗಿ ಮೊಸರನ್ನು ಮಜ್ಜಿಗೆಯ ರೂಪದಲ್ಲಿ ಸೇವನೆ ಮಾಡಬೆಕು. ಹೀಗೆ ಮಾಡಿದ್ರೆ ನಿಮ್ಮ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ನಿಯಮಿತವಾಗಿ ಮೊಸರು ಸೇವಿಸುವುದರಿಂದ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ. ಆದರೆ, ‘ಅತಿಯಾದರೆ ಅಮೃತವೂ ವಿಷ’ ಅನ್ನೋ ಗಾದೆಮಾತು ನೆನಪಿರಬೇಕು. ಯಾವುದೇ ಆಗಲಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಅನ್ನೋದನ್ನು ಮರೆಯಬಾರದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.