ಕೆಮ್ಮು ಜ್ವರ ಈಗ ಸಾಮಾನ್ಯ ! ಆದರೆ H3N2 ಮತ್ತು ಕೋವಿಡ್ 19 ನಡುವಿನ ವ್ಯತ್ಯಾಸ ಪತ್ತೆ ಹಚ್ಚುವುದು ಹೇಗೆ ?

H3N2 v/s Covid19 :  ಸದ್ಯ ಜನರನ್ನು ಕಾಡುತ್ತಿರುವ ಜ್ವರ H3N2  ಇನ್‌ಫ್ಲುಯೆಂಜಾನಾ  ಅಥವಾ ಓಮಿಕ್ರಾನ್ ಉಪಜಾತಿಗಳಿಂದ ಉಂಟಾಗುವ ಕೋವಿಡಾ ಎಂದು ತಿಳಿಯುವುದು ಹೇಗೆ ? ಎನ್ನುವುದೇ ಜನ ಸಾಮಾನ್ಯರ ಮನದಲ್ಲಿರುವ ಪ್ರಶ್ನೆ.   

Written by - Ranjitha R K | Last Updated : Mar 17, 2023, 10:00 AM IST
  • ಕೆಮ್ಮು, ಮೈ ಕೈ ನೋವು ಜ್ವರ ಎಲ್ಲರನ್ನೂ ಬಾಧಿಸುತ್ತಿದೆ.
  • H3N2 ವೈರಸ್‌ ಆತಂಕ ಹೆಚ್ಚಾಗಿದೆ.
  • H3N2 ಕೊವಿಡ್ ನಡುವಿನ ವ್ಯತ್ಯಾಸ ತಿಳಿಯುವುದು ಹೇಗೆ ?
ಕೆಮ್ಮು ಜ್ವರ ಈಗ ಸಾಮಾನ್ಯ ! ಆದರೆ H3N2 ಮತ್ತು ಕೋವಿಡ್ 19   ನಡುವಿನ ವ್ಯತ್ಯಾಸ ಪತ್ತೆ ಹಚ್ಚುವುದು ಹೇಗೆ ?  title=

ಬೆಂಗಳೂರು : ಭಾರತದಲ್ಲಿ ಪ್ರಸ್ತುತ ಕೆಮ್ಮು, ಮೈ ಕೈ ನೋವು ಜ್ವರ ಎಲ್ಲರನ್ನೂ ಬಾಧಿಸುತ್ತಿದೆ. ಕರೋನಾ ಪ್ರಕರಣ ಕಡಿಮೆಯಾಗುತ್ತಿದ್ದಂತೆಯೇ  H3N2 ವೈರಸ್‌ ಆತಂಕ ಹೆಚ್ಚಾಗಿದೆ. ಆದರೆ ಸದ್ಯ ಜನರನ್ನು ಕಾಡುತ್ತಿರುವ ಜ್ವರ H3N2 ಇನ್‌ಫ್ಲುಯೆಂಜಾನಾ  ಅಥವಾ ಓಮಿಕ್ರಾನ್ ಉಪಜಾತಿಗಳಿಂದ ಉಂಟಾಗುವ ಕೋವಿಡಾ ಎಂದು ತಿಳಿಯುವುದು ಹೇಗೆ ? ಎನ್ನುವುದೇ ಜನ ಸಾಮಾನ್ಯರ ಮನದಲ್ಲಿರುವ ಪ್ರಶ್ನೆ. 

h3n2 ವೈರಸ್ :
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮಾಹಿತಿಯ ಪ್ರಕಾರ, ಕೋವಿಡ್ -19 ವೈರಸ್, ಹಂದಿ ಜ್ವರ (H1N1), H3N2 ಮತ್ತು  ಸೀಸನಲ್ ಬ್ಯಾಕ್ಟೀರಿಯಾ ಮತ್ತು ಯಮಗಾಟಾ ವಂಶಾವಳಿಯ ಇನ್ಫ್ಲುಯೆನ್ಸ ಬಿ ವೈರಸ್‌ ಸಂಯೋಜನೆಯಾಗಿದೆ. H3N2 ಮತ್ತು H13N1 ಎರಡೂ ರೀತಿಯ ಇನ್ಫ್ಲುಯೆನ್ಸವು ವೈರಸ್ ಆಗಿದೆ. ಇದನ್ನು ಸಾಮಾನ್ಯವಾಗಿ ಫ್ಲೂ ಎಂದು ಕರೆಯಲಾಗುತ್ತದೆ. ಇದರ ಕೆಲವು ಸಾಮಾನ್ಯ ಲಕ್ಷಣಗಳೆಂದರೆ ದೀರ್ಘಕಾಲದ ಜ್ವರ, ಕೆಮ್ಮು, ಸ್ರವಿಸುವ ಮೂಗು ಮತ್ತು ಮೈ ಕೈ ನೋವು. ಆದರೆ ತೀವ್ರತರವಾದ ಪ್ರಕರಣಗಳಲ್ಲಿ, ಉಸಿರಾಟದ ತೊಂದರೆ ಅಥವಾ ಉಬ್ಬಸವನ್ನು ಕೂಡಾ ಜನ ಎದುರಿಸಬಹುದು. 

ಇದನ್ನೂ ಓದಿ : World Sleep Day 2023 : ಉತ್ತಮ ನಿದ್ರೆಗಾಗಿ ರಾತ್ರಿ ಊಟದ ಸಮಯದಲ್ಲಿ ಈ ಆಹಾರಗಳನ್ನು ತಪ್ಪಿಸಿ..!

ಕೋವಿಡ್ ಮತ್ತು ಎಚ್3ಎನ್2 ನಡುವಿನ ವ್ಯತ್ಯಾಸ :
COVID, H3N2 ಮತ್ತು H13N1  ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯುವುದು ತುಂಬಾ ಕಷ್ಟ. ಸಾಮಾನ್ಯವಾಗಿ ನಾಸೊಫಾರ್ಂಜಿಯಲ್ ಸ್ವ್ಯಾಬ್ ಮಾದರಿಯಿಂದ  ಈ ರೋಗವನ್ನು ನಿರ್ಣಯ ಮಾಡಬಹುದಾಗಿದೆ.  ತಜ್ಞ ವೈದ್ಯರ ಪ್ರಕಾರ, “ಪ್ರಸ್ತುತ  ಪರಿಸ್ಥಿತಿಯಲ್ಲಿ ಇದರ ನಡುವೆ ಕಂಡು ಬರುವ  ಒಂದೇ ವ್ಯತ್ಯಾಸವೆಂದರೆ ಕೋವಿಡ್‌ನ ಲಕ್ಷಣಗಳು 2-3 ದಿನಗಳ ನಂತರ ಉಳಿಯುವುದಿಲ್ಲ. ರೋಗಿಗಳು ಕೂಡಾ ಯಾವುದೇ ತೊಂದರೆಗಳಿಲ್ಲದೆ ತ್ವರಿತವಾಗಿ ಚೇತರಿಸಿಕೊಳ್ಳುತ್ತಾರೆ. 

"H3N2 ಮತ್ತು H13N1ನಲ್ಲಿ ಕೆಮ್ಮು ಕಫ ಕೆಲವು ವಾರಗಳವರೆಗೆ ಇರುತ್ತದೆ. ನ್ಯುಮೋನಿಯಾ ಅಥವಾ  ಇತರ ಬ್ಯಾಕ್ಟೀರಿಯಾದ ಸೋಂಕಿಗೆ ಕಾರಣವಾಗುವ ಸಾಧ್ಯತೆ ಕೂಡಾ ಇದರಲ್ಲಿ ಹೆಚ್ಚು. 

"ಎಚ್3ಎನ್2 ಪೀಡಿತ ಜನರಲ್ಲಿ ಗಂಟಲು ನೋವು ಮತ್ತು ಕಿರಿಕಿರಿ ಕಾಣಿಸಿಕೊಳ್ಳುತ್ತದೆ. ಮತ್ತು ಈ ಸಮಸ್ಯೆ ಎರಡರಿಂದ ಮೂರು ವಾರಗಳವರೆಗೆ ಇರುತ್ತದೆ. ಕೋವಿಡ್ -19 ಸೋಂಕಿಗೆ ಒಳಗಾದವರು ಸಾಮಾನ್ಯವಾಗಿ ಕಟ್ಟಿದ ಮೂಗಿನ ಸಮಸ್ಯೆ ಎದುರಿಸುತ್ತಾರೆ. ಮೂರರಿಂದ ನಾಲ್ಕು ದಿನಗಳವರೆಗೆ ಜ್ವರವನ್ನು ಹೊಂದಿರುತ್ತಾರೆ. 

ಇನ್ಫ್ಲುಯೆನ್ಸ ಮಾರಣಾಂತಿಕವಲ್ಲ. ಆದರೆ ಈಗಾಗಲೇ ಕೆಲವು ಪ್ರಮುಖ ಕಾಯಿಲೆಗಲಿದ್ದು, ಈ ವೈರಸ್ ಬಗ್ಗೆ ನಿರ್ಲಕ್ಷ್ಯ ತೋರಿದರೆ ಮರಣ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಚಿಕ್ಕ ಮಕ್ಕಳು, 65 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರು, ಗರ್ಭಿಣಿ ರೋಗಿಗಳು, ಇಮ್ಯುನೊಕೊಂಪ್ರೊಮೈಸ್ಡ್ ರೋಗಿಗಳಿಗೆ ಇದರಿಂದ ಅಪಾಯ ಹೆಚ್ಚು. 

ಇದನ್ನೂ ಓದಿ :  Kidney Health : ಕಿಡ್ನಿ ಆರೋಗ್ಯಕ್ಕೆ ಅನುಸರಿಸಿ ಈ ನಿಯಮ : ಯಾವಾಗಲೂ ಫಿಟ್ ಆಗಿರುತ್ತದೆ!

ಸೋಂಕು ಹೆಚ್ಚಲು ಏನು ಕಾರಣ ?  : 
ಬದಲಾಗುತ್ತಿರುವ ಹವಾಮಾನದ ಜತೆಗೆ ಮಾಲಿನ್ಯವೂ ವೈರಲ್ ಸೋಂಕಿಗೆ  ಹೆಚ್ಚಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಇನ್ಫ್ಲುಯೆನ್ಸ ವೈರಸ್  ತೊಡಕುಗಳನ್ನು ತಡೆಗಟ್ಟುವ ಏಕೈಕ ಮಾರ್ಗವೆಂದರೆ ವರ್ಷಕ್ಕೊಮ್ಮೆ ಫ್ಲೂ ಲಸಿಕೆ ಹಾಕಿಸಿಕೊಳ್ಳುವುದು. 

ಈ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿಕೊಳ್ಳಿ : 
1.ಮಾಸ್ಕ್‌ಗಳನ್ನು ಬಳಸುವುದು 
2. ಕೈಗಳ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು 
3. ಜನ ಸಂದಣಿ ಇರುವ ಪ್ರದೇಶಗಳಿಗೆ ಹೋಗದಿರುವುದು.
4.  ವಾರ್ಷಿಕ ಫ್ಲೂ ಲಸಿಕೆ ಹಾಕಿಸಿಕೊಳ್ಳುವುದು 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News