Neem Leaves Benefits: ಬೇವಿನ ಗಿಡವು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನವನ್ನು ನೀಡುತ್ತದೆ ಎಂಬ ಅಂಶ ನಮಗೆಲ್ಲರಿಗೂ ತಿಳಿದಿದೆ, ಏಕೆಂದರೆ ಈ ಮರದ ಪ್ರತಿಯೊಂದು ಭಾಗವು ಯಾವುದೋ ಒಂದು ರೀತಿಯಲ್ಲಿ ಮನುಷ್ಯನ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಇದರ ಎಲೆಗಳು, ಮರ, ತೊಗಟೆ, ಹಣ್ಣು ಮತ್ತು ಹೂವುಗಳು ಎಲ್ಲಾ ಔಷಧೀಯ ಗುಣಗಳನ್ನು ಹೊಂದಿವೆ, ಆದ್ದರಿಂದ ಇದನ್ನು ಆಯುರ್ವೇದದ ನಿಧಿ ಎಂದು ಕರೆಯಲಾಗುತ್ತದೆ, ತೂಕವನ್ನು ಕಳೆದುಕೊಳ್ಳಲು ಕೂಡ ಬೇವನ್ನು ಬಳಸಬಹುದು.
ಪ್ರತಿದಿನ ಬೇವಿನ ಎಲೆಗಳನ್ನು ಅಗಿಯಿರಿ
ಆರೋಗ್ಯ ತಜ್ಞರ ಪ್ರಕಾರ, ನೀವು ಪ್ರತಿದಿನ 3 ರಿಂದ 4 ಬೇವಿನ ಎಲೆಗಳನ್ನು ಅಗೆದು ತಿಂದರೆ, ಅದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ ಎನ್ನಲಾಗಿದೆ. ಬೇವಿನ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿದ್ದು, ಸೋಂಕುಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಬೇವಿನ ಎಲೆಗಳನ್ನು ಜಗಿಯುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ.
ಬೇವಿನ ಎಲೆಗಳ ಪ್ರಯೋಜನಗಳು
1. ಹೆಚ್ಚುತ್ತಿರುವ ತೂಕವನ್ನು ಬೇವಿನ ಎಲೆಗಳನ್ನು ತಿನ್ನುವುದರಿಂದ ಕಡಿಮೆ ಮಾಡಿಕೊಳ್ಳಬಹುದು, ಇದಕ್ಕಾಗಿ ಬೇವಿನ ಎಲೆಗಳಿಂದ ಜ್ಯೂಸ್ ತಯಾರಿಸಿ ಪ್ರತಿದಿನ ಬೆಳಗ್ಗೆ ಕುಡಿಯಿರಿ, ಇದು ಹೊಟ್ಟೆಯ ಕೊಬ್ಬನ್ನು ವೇಗವಾಗಿ ಕರಗಿಸುತ್ತದೆ.
2. ಬೇವಿನ ಎಲೆಗಳನ್ನು ಜಗಿಯುವುದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಇದು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಕರೋನಾ ಅವಧಿಯಿಂದಲೂ, ರೋಗನಿರೋಧಕ ಶಕ್ತಿ ಹೆಚ್ಚಿಸುವ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ.
3. ಬೇವು ದೇಹದಲ್ಲಿ ಇರುವ ವಿಷಕಾರಿ ಪದಾರ್ಥಗಳನ್ನು ಹೊರಹಾಕುತ್ತದೆ , ಅದಕ್ಕಾಗಿಯೇ ಬೇವಿನ ಎಲೆಗಳಿಂದ ತಯಾರಿಸಿದ ರಸವನ್ನು ಡಿಟಾಕ್ಸ್ ಡ್ರಿಂಕ್ಸ್ ಎಂದೂ ಕೂಡ ಕರೆಯುತ್ತಾರೆ.
4. ಬೇವಿನ ಎಲೆಗಳಲ್ಲಿ ಸಾಕಷ್ಟು ಫೈಬರ್ ಕಂಡುಬರುತ್ತದೆ, ಇದರಿಂದಾಗಿ ಜೀರ್ಣಕ್ರಿಯೆಯು ಉತ್ತಮವಾಗುತ್ತದೆ ಮತ್ತು ಚಯಾಪಚಯ ಕ್ರಿಯೆಗೆ ಬಲ ಸಿಗುತ್ತದೆ.
5. ಈ ಎಲೆಯಲ್ಲಿ ಅನೇಕ ರೀತಿಯ ಆ್ಯಂಟಿ ಆಕ್ಸಿಡೆಂಟ್‌ಗಳು ಕಂಡುಬರುತ್ತವೆ, ಇದು ಕ್ಯಾಲೊರಿಗಳನ್ನು ಬರ್ನ್ ಮಾಡುವ ಕೆಲಸ ಮಾಡುತ್ತದೆ.
6. ನಿಮ್ಮ ಹಲ್ಲುಗಳಲ್ಲಿ ಕುಳಿ ಇದ್ದರೆ, ಅದರ ಎಲೆಗಳನ್ನು ಪುಡಿಮಾಡಿ ಪೇಸ್ಟ್ ತಯಾರಿಸಿ ಮತ್ತು ಹಲ್ಲುಗಳ ಮೇಲೆ ಉಜ್ಜಿದರೆ, ಅದು ಬಾಯಿಯೊಳಗಿನ ಸಮಸ್ಯೆಗಳನ್ನು ತೆಗೆದುಹಾಕುತ್ತದೆ.
ಇದನ್ನೂ ಓದಿ-Raisins Water: ಒಣ ದ್ರಾಕ್ಷಿ ನೀರು ಸೇವನೆಯ ಆರೋಗ್ಯಕರ ಲಾಭದ ಕುರಿತು ನಿಮಗೆ ತಿಳಿದಿದೆಯೇ?
7. ಬೆಂಕಿಯಿಂದ ದೇಹದ ಯಾವುದೇ ಭಾಗ ಸುಟ್ಟರೆ ಬೇವಿನ ಸೊಪ್ಪನ್ನು ಮಿಕ್ಸಿಯಲ್ಲಿ ಅರೆದು ಬಾಧಿತ ಜಾಗಕ್ಕೆ ಹಚ್ಚಿ. ಇದರ ನಂಜುನಿರೋಧಕ ಗುಣಲಕ್ಷಣಗಳು ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ-Diabetes ರೋಗಿಗಳು ಈ ರೀತಿ ನಿಮ್ಮ ಹೃದಯದ ಆರೋಗ್ಯವನ್ನು ರಕ್ಷಿಸಿ, ಸ್ವಲ್ಪ ಅಜಾಗರೂಕತೆಯಿಂದ ಪ್ರಾಣಕ್ಕೆ ಕುತ್ತು
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.