ಬೆಂಗಳೂರು: ಕಳಪೆ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ಪ್ರಸ್ತುತ ಅತಿ ಚಿಕ್ಕ ವಯಸ್ಸಿನಲ್ಲಿ ಬಿಪಿ, ಶುಗರ್ ನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇವು ದೀರ್ಘಾವಧಿಯ ಕಾಯಿಲೆಗಳಾಗಿದ್ದು ಇವುಗಳ ನಿಯಂತ್ರಣಕ್ಕೆ ನಮ್ಮ ಆಹಾರಪದ್ದತಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ಬಿಪಿ ಎಂದೊಡನೆ ಆಹಾರದಲ್ಲಿ ಉಪ್ಪನ್ನು ಕಡಿಮೆ ಬಳಸುವಂತೆ, ಉಪ್ಪಿನಕಾಯಿ ಬಳಸದಂತೆ ಸಲಹೆ ನೀಡಲಾಗುತ್ತದೆ. ಆದರೆ, ಉಪ್ಪು ಮಾತ್ರವಲ್ಲ, ನಮ್ಮ ನಿತ್ಯ ಆಹಾರದ ಭಾಗವಾಗಿರುವ ಕೆಲವು ಆಹಾರಗಳು ಕೂಡ ತ್ವರಿತವಾಗಿ ರಕ್ತದೊತ್ತಡವನ್ನು ಹೆಚ್ಚಿಸಬಲ್ಲವು. ಅಂತಹ ಆಹಾರಗಳು ಯಾವುವು ಎಂದು ತಿಳಿಯೋಣ...
ಸಾಮಾನ್ಯವಾಗಿ ನಮ್ಮಲ್ಲಿ ಕೆಲವರು ಕಾಫಿ ಕುಡಿಯುವುದರಿದ ರಕ್ತದೊತ್ತಡ ಹೆಚ್ಚುತ್ತದೆ ಎಂದು ನಂಬುತ್ತಾರೆ. ಆದರೆ, ತಜ್ಞರ ಪ್ರಕಾರ ಕಾಫಿ ಕುಡಿಯುವುದರಿಂದ ರಕ್ತದೊತ್ತಡ ಹೆಚ್ಚಾಗುವುದಿಲ್ಲ. ಬದಲಿಗೆ ಆಲ್ಕೋಹಾಲ್ ಸೇವಿಸಿದರೆ, ನಂತರ ರಕ್ತದೊತ್ತಡವು ವೇಗವಾಗಿ ಹೆಚ್ಚಾಗುತ್ತದೆ ಎಂಬ ಅಂಶ ಹಲವು ಸಂಶೋಧನೆಗಳಲ್ಲಿ ಬೆಳಕಿಗೆ ಬಂದಿದೆ. ನಿಯಮಿತವಾಗಿ ಕೆಫೀನ್ ಸೇವಿಸುವುದರಿಂದ ರಕ್ತದೊತ್ತಡ ಹೆಚ್ಚಾಗುವುದಿಲ್ಲ. ಆದಾಗ್ಯೂ, ಸೋಡಾ ಅಥವಾ ಎನರ್ಜಿ ಡ್ರಿಂಕ್ಸ್‌ಗಿಂತ ಹೆಚ್ಚಿನ ಕೆಫಿನ್ ಸೇವಿಸುವವರಲ್ಲಿ ಇದರ ನಕಾರಾತ್ಮಕ ಪರಿಣಾಮ ಹೆಚ್ಚಾಗಿ ಕಂಡು ಬರುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ನಿಮಗೂ ಕೂಡ ಮೊಸರಿನೊಂದಿಗೆ ಈ ಪದಾರ್ಥ ಬೆರೆಸಿ ಸೇವಿಸುವ ಅಭ್ಯಾಸವಿದೆಯೇ? ತೂಕ ಹೆಚ್ಚಾಗಬಹುದು ಎಚ್ಚರ!
ಉಪ್ಪು ಮಾತ್ರವಲ್ಲ ಈ 5 ಆಹಾರಗಳಿಂದಲೂ ಹೆಚ್ಚಾಗುತ್ತೆ ಬಿಪಿ:
* ಸಕ್ಕರೆ:
ಹೈ ಬಿಪಿ ಇರುವವರು ಉಪ್ಪು ಮಾತ್ರವಲ್ಲ, ಸಕ್ಕರೆಯನ್ನೂ ಸೇವಿಸಬಾರದು. ಸಕ್ಕರೆ ಸೇವನೆಯು ಬಿಪಿ ರೋಗಿಗಳ ಸಮಸ್ಯೆಗನ್ನು ಹೆಚ್ಚಿಸುತ್ತದೆ. ಹಾಗಾಗಿ, ಅವರು ಸೀಮಿತ ಪ್ರಮಾಣದಲ್ಲಿ ಸಕ್ಕರೆ ಸೇವಿಸುವುದು ಒಳಿತು ಎಂದು ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಸಲಹೆ ನೀಡಿದೆ.
* ಸಂಸ್ಕರಿಸಿದ ಮಾಂಸ:
ಇತ್ತೀಚಿನ ದಿನಗಳಲ್ಲಿ ಸಂಸ್ಕರಿಸಿದ ಆಹಾರಗಳ ಸೇವನೆಯ ಸಂಸ್ಕೃತಿ ಹೆಚ್ಚಾಗುತ್ತಿದೆ. ಆದರೆ, ಸಂಸ್ಕರಿಸಿದ ಮಾಂಸದಲ್ಲಿ ಹೆಚ್ಚುವರಿ ಸೋಡಿಯಂ ಕಂಡುಬರುತ್ತದೆ, ಇದರಿಂದಾಗಿ ರಕ್ತದೊತ್ತಡವು ತಕ್ಷಣವೇ ಹೆಚ್ಚಾಗುವ ಅಪಾಯ ಹೆಚ್ಚಿರುತ್ತದೆ.
* ಇದಲ್ಲದೆ, ಬ್ರೆಡ್, ಸ್ಯಾಂಡ್‌ವಿಚ್, ಸಾಸ್, ಉಪ್ಪಿನಕಾಯಿ, ಚೀಸ್ ರೀತಿಯ ಆಹಾರಗಳಿಂದಲೂ ಕೂಡ ರಕ್ತದೊತ್ತಡ ಹೆಚ್ಚಾಗುತ್ತದೆ.
ಇದನ್ನೂ ಓದಿ- ಮಧುಮೇಹ ಮತ್ತು ಕೊಲೆಸ್ಟ್ರಾಲ್‌ನಿಂದ ಮುಕ್ತಿ ಪಡೆಯಲು ಸಹಕಾರಿ ಈ 4 ಎಲೆಗಳು
* ಪೀನಟ್ಸ್ ಬಟರ್:
ನಮ್ಮಲ್ಲಿ ಕೆಲವರು ತೂಕ ಇಳಿಕೆಗಾಗಿ ಬ್ರೌನ್ ಬ್ರೆಡ್ ಜೊತೆಗೆ ಪೀನಟ್ಸ್ ಬಟರ್ ಎಂದರೆ ಕಡಲೆಕಾಯಿ ಬೆಣ್ಣೆಯನ್ನು ಸವಿಯುತ್ತಾರೆ. ಆದರೆ, ಇದರಲ್ಲಿ ಸೋಡಿಯಂ ಪ್ರಮಾಣ ಅಧಿಕವಾಗಿರುವುದರಿಂದ ಇದು ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ.
* ಕರಿದ ಆಹಾರಗಳು:
ಕರಿದ ಆಹಾರಗಳು, ಫಾಸ್ಟ್ ಫುಡ್ ನ ಅತಿಯಾದ ಸೇವನೆಯೂ ಕೂಡ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.