Pain Killer: ಈಗಿನ ಬಿಡುವಿಲ್ಲದ ಜೀವನಶೈಲಿ, ಅನಾರೋಗ್ಯಕರ ಆಹಾರದಿಂದಾಗಿ ಜನರು ಆಗಾಗ್ಗೆ ತಲೆನೋವು, ಒತ್ತಡ ಮತ್ತು ಖಿನ್ನತೆಗೆ ಬಲಿಯಾಗುತ್ತಾರೆ. ಇದನ್ನು ಹೋಗಲಾಡಿಸಲು ನೋವು ನಿವಾರಕಗಳನ್ನು ಬಳಸುತ್ತಾರೆ. ಅಂತಹ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಅವರು ತಕ್ಷಣದ ಪ್ರಯೋಜನವನ್ನು ಪಡೆಯುತ್ತಾರೆ, ಆದರೆ ದೀರ್ಘಾವಧಿಗೆ ಇದು ತುಂಬಾ ಅಪಾಯಕಾರಿ.
ಪೇನ್ ಕಿಲ್ಲರ್ ಅಭ್ಯಾಸವು ಮಾರಕ ಎಂದು ಸಾಬೀತುಪಡಿಸಬಹುದು:
ಜೆನೆರಿಕ್ ಔಷಧವಾದ ಡಿಕ್ಲೋಫೆನಾಕ್ (Diclofenac) ಬಳಕೆಯು ಹೃದಯಾಘಾತದಂತಹ ಮಾರಣಾಂತಿಕ ಹೃದಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಬಹುದು. ಈ ಬಗ್ಗೆ ಅಧ್ಯಯನವೊಂದು ಎಚ್ಚರಿಕೆ ನೀಡಿದೆ. BMJ ನಲ್ಲಿ ಪ್ರಕಟವಾದ ಸಂಶೋಧನೆಯು, ಪ್ಯಾರಸಿಟಮಾಲ್ (Paracetamol)ಮತ್ತು ಇತರ ಸಾಂಪ್ರದಾಯಿಕ ಔಷಧಗಳನ್ನು ಡಿಕ್ಲೋಫೆನಾಕ್ ಔಷಧಿಗಳಿಗೆ ಹೋಲಿಸಿದೆ.
ಇದನ್ನೂ ಓದಿ- Hair Care Tips: ಡ್ಯಾಂಡ್ರಫ್ ಮುಕ್ತ, ಉದ್ದವಾದ ಕೂದಲಿಗಾಗಿ ವಾರದಲ್ಲಿ ಎರಡು ದಿನ ಈ ಎಣ್ಣೆಯನ್ನು ಕೂದಲಿಗೆ ಹಚ್ಚಿ
ಪೇನ್ ಕಿಲ್ಲರ್ ಪ್ಯಾಕೆಟ್ ಮೇಲೆ ಎಚ್ಚರಿಕೆ ಎಂದು ಬರೆಯಲಾಗಿರುತ್ತದೆ:
ಡೆನ್ಮಾರ್ಕ್‌ನ ಆರ್ಹಸ್ ಯೂನಿವರ್ಸಿಟಿ ಆಸ್ಪತ್ರೆಯ ಸಂಶೋಧಕರು ಡಿಕ್ಲೋಫೆನಾಕ್ (Diclofenac) ಸಾಮಾನ್ಯ ಮಾರಾಟಕ್ಕೆ ಲಭ್ಯವಿರುವುದಿಲ್ಲ ಮತ್ತು ಅದನ್ನು ಮಾರಾಟ ಮಾಡಿದರೆ, ಅದರ ಪ್ಯಾಕೆಟ್‌ನ ಮುಂಭಾಗವು ಅದರ ಸಂಭಾವ್ಯ ಅಪಾಯವನ್ನು ವಿವರಿಸುತ್ತದೆ.
ಇದನ್ನೂ ಓದಿ- Skin Care Tips: ಚರ್ಮದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಬೆಳ್ಳುಳ್ಳಿ ಮೊಗ್ಗು
ಡಿಕ್ಲೋಫೆನಾಕ್ ಔಷಧ ಎಂದರೇನು?
ಡಿಕ್ಲೋಫೆನಾಕ್ ಒಂದು ಸಾಂಪ್ರದಾಯಿಕ ನಾನ್-ಸ್ಟೆರಾಯ್ಡ್ ಉರಿಯೂತದ ಔಷಧವಾಗಿದೆ, ಇದನ್ನು ನೋವು ಮತ್ತು ಉರಿಯೂತದ ಚಿಕಿತ್ಸೆಗಾಗಿ ವಿಶ್ವಾದ್ಯಂತ ವ್ಯಾಪಕವಾಗಿ ಬಳಸಲಾಗುತ್ತದೆ. ಈ ಸಂಶೋಧನೆಯು ಇತರ NSAID ಔಷಧಿಗಳು ಮತ್ತು ಪ್ಯಾರಸಿಟಮಾಲ್ ಅನ್ನು ಅಧಿಕವಾಗಿ ಬಳಸುವವರಲ್ಲಿ ಹೃದಯರಕ್ತನಾಳದ ಕಾಯಿಲೆಯ ಅಪಾಯ ಹೆಚ್ಚು ಎಂದು ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.