Shatavari For Male Fertility : ಮದುವೆಯ ನಂತರ ಪುರುಷನು ತನ್ನ ಹೆಂಡತಿಯ ಜೊತೆಗಿನ ಸಂಬಂಧವು ಉತ್ತಮವಾಗಿರಬೇಕು ಮತ್ತು ವೈವಾಹಿಕ ಜೀವನದಲ್ಲಿ ಯಾವತ್ತೂ ಸಂತೋಷ ಕಡಿಮೆಯಾಗಬಾರದು ಎಂದು ಬಯಸುತ್ತಾನೆ, ಆದರೆ ದೈಹಿಕ ದೌರ್ಬಲ್ಯವಿದ್ದರೆ, ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ. ಇದರಿಂದಾಗಿ ಹೆಂಡತಿಯನ್ನು ತೃಪ್ತಿ ಪಡೆಸುವುದು, ತಂದೆಯಾಗುವುದು ಹೀಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕಾಗಿ ಇಂದು ನಾವು ಶತಾವರಿ ಸೇವಿಸುವ ಮೂಲಕ ನಿಮ್ಮ ದೈಹಿಕ ಶಕ್ತಿಯನ್ನು ಹೇಗೆ ಹೆಚ್ಚಿಸಿಕೊಳ್ಳಬೇಕು. ಇದನ್ನೂ ಹೇಗೆ ಸೇವಿಸಬೇಕು? ಎಂಬ ಮಾಹಿತಿ ತಂದಿದ್ದೇವೆ ಇಲ್ಲಿದೆ ನೋಡಿ..
ಪುರುಷರ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಶತಾವರಿ
ಶತಾವರಿ ಪುರುಷರಿಗೆ ಮಾತ್ರವಲ್ಲದೆ ಎಲ್ಲರಿಗೂ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಕಾರ್ಬೋಹೈಡ್ರೇಟ್, ಸಕ್ಕರೆ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಪ್ರೊಟೀನ್, ಶಕ್ತಿ, ಕಬ್ಬಿಣ ಮತ್ತು ಅನೇಕ ರೀತಿಯ ವಿಟಮಿನ್ಗಳನ್ನು ಒಳಗೊಂಡಿದೆ. ವಿವಾಹಿತ ಪುರುಷರು ಶತಾವರಿ ಸೇವನೆಯಿಂದ ಹೇಗೆ ಪ್ರಯೋಜನ ಪಡೆಯಬಹುದು.
ಇದನ್ನೂ ಓದಿ : Benefits Of Dates : ಪುರುಷರ ಆರೋಗ್ಯಕ್ಕೆ 4 ನೆನಸಿದ ಖರ್ಜೂರ : ಇದು ನಿಮ್ಮ ಶಕ್ತಿ ಹೆಚ್ಚಿಸುತ್ತದೆ
ವಿವಾಹಿತ ಪುರುಷರಿಗೆ ಶತಾವರಿ ಏಕೆ ಪ್ರಯೋಜನಕಾರಿ?
1. ಲೈಂಗಿಕ ಸಾಮರ್ಥ್ಯ ಹೆಚ್ಚಾಗುತ್ತದೆ
ಮದುವೆಯ ನಂತರ ಪುರುಷರು ನಿಯಮಿತವಾಗಿ ಶತಾವರಿಯನ್ನು ಸೇವಿಸಿದರೆ, ಅವರ ದೈಹಿಕ ಮತ್ತು ಲೈಂಗಿಕ ಸಾಮರ್ಥ್ಯವು ಬಹಳಷ್ಟು ಸುಧಾರಿಸುತ್ತದೆ. ಇದಕ್ಕಾಗಿ ರಾತ್ರಿ ಮಲಗುವ ಮುನ್ನ ಹಾಲನ್ನು ಸ್ವಲ್ಪ ಬಿಸಿ ಮಾಡಿ ಅದಕ್ಕೆ ಇಂಗು ಪುಡಿಯನ್ನು ಬೆರೆಸಿ ಕುಡಿಯಿರಿ. ಹೀಗೆ ಮಾಡುವುದರಿಂದ ಸ್ನಾಯುಗಳು ಕೂಡ ಗಟ್ಟಿಯಾಗುತ್ತವೆ.
3. ಸ್ವಪ್ನ ದೋಷ ದೂರಾಗುತ್ತದೆ
ಕೆಲವೊಮ್ಮೆ ಸ್ವಪ್ನ ದೋಷವಾಗುವುದು ಸಹಜ, ಆದರೆ ಅದು ವಿಪರೀತವಾಗಿದ್ದರೆ, ಶತಾವರಿಯು ನಿಮಗೆ ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ ಶತಾವರಿ ಪುಡಿಯನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಸಕ್ಕರೆ ಮಿಠಾಯಿ ಮಿಶ್ರಣ ಮಾಡಿ ನಂತರ ಅದನ್ನು ಹಾಲಿನೊಂದಿಗೆ ಕುಡಿಯಿರಿ. ಇದರಿಂದ ಕೆಟ್ಟ ಸ್ವಪ್ನ ದೋಷ ದೂರಾಗುತ್ತದೆ.
4. ಹೆಚ್ಚುತ್ತಿರುವ ವಯಸ್ಸಿನ ಪರಿಣಾಮ ಕಡಿಮೆ ಮಾಡುತ್ತದೆ
ವಯಸ್ಸಾದಂತೆ, ಪುರುಷರು ಅನೇಕ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸುತ್ತಾರೆ, ಅದು ವಿವಿಧ ಕಾಯಿಲೆಗಳಾಗಿ ಬದಲಾಗುತ್ತದೆ. ಶತಾವರಿಯು ಆಂಟಿಆಕ್ಸಿಡೆಂಟ್ ಮತ್ತು ಗ್ಲುಟಾಥಿಯೋನ್ ಎಂಬ ಸಂಯುಕ್ತವನ್ನು ಹೊಂದಿರುವುದರಿಂದ ಇದು ವಯಸ್ಸಿನ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : Muscle Pain in Winter Season : ಚಳಿಗಾಲದ ಬೆನ್ನು ಮತ್ತು ಹಿಮ್ಮಡಿ ನೋವಿಗೆ ಇಲ್ಲಿದೆ ಪರಿಹಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.