ಬೆಂಗಳೂರು: ಹಾಲು ಒಂದು ಸೂಪರ್ ಫುಡ್. ಆಯುರ್ವೇದದಲ್ಲಿ ಅರಿಶಿನವನ್ನು ಉತ್ತಮ ಔಷಧ ಎಂದು ಪರಿಗಣಿಸಲಾಗಿದೆ. ಇದರಲ್ಲಿ ಆಂಟಿ-ಆಕ್ಸಿಡೆಂಟ್ ಗುಣಗಳು ಸಮೃದ್ಧವಾಗಿದ್ದು ಇದೂ ಸಹ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಇವೆರಡನ್ನೂ ಒಟ್ಟಿಗೆ ಬೆರೆಸಿ ಅಂದರೆ ಅರಿಶಿನದೊಂದಿಗೆ ಹಾಲು ಬೆರೆಸಿ ಕುಡಿಯುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದಾಗಿದೆ. ತಜ್ಞರ ಪ್ರಕಾರ, ಕೆಲವು ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯಲು ಅರಿಶಿನದ ಹಾಲು ಅತ್ಯುತ್ತಮ ಮನೆಮದ್ದು ಎಂದು ಸಾಬೀತುಪಡಿಸಲಿದೆ.
ಹಾಲಿಗೆ ಅರಿಶಿನ ಬೆರೆಸಿ ಸವಿದರೆ ಕೆಲವೇ ದಿನಗಳಲ್ಲಿ ಮಾಯವಾಗುತ್ತೆ ಈ ಆರೋಗ್ಯ ಸಮಸ್ಯೆಗಳು :
ರೋಗನಿರೋಧಕ ಶಕ್ತಿ ಹೆಚ್ಚಳ:
ಅರಿಶಿನವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ನಮ್ಮನ್ನು ಹಲವು ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯುವಂತೆ ಮಾಡುತ್ತದೆ. ಹಾಗಾಗಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಳಪಡಿಸಿ, ಸೋಂಕುಗಳ ವಿರುದ್ಧ ರಕ್ಷಣೆ ಪಡೆಯಲು ಹಾಲಿನೊಂದಿಗೆ ಅರಿಶಿನ ಬೆರೆಸಿ ಕುಡಿಯಿರಿ.
ಶೀತ, ಗಂಟಲಿನ ನೋವು:
ಅರಿಶಿನ ಹಾಲಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಕಂಡುಬರುತ್ತವೆ. ಇದು ಶೀತ ಮತ್ತು ಗಂಟಲು ನೋವಿನಂತಹ ಸಮಸ್ಯೆಗಳಲ್ಲಿ ಪರಿಹಾರವನ್ನು ನೀಡುತ್ತದೆ.
ಇದನ್ನೂ ಓದಿ- ಬೇಸಿಗೆಯಲ್ಲಿ ಹೊಟ್ಟೆಯ ಕೊಬ್ಬನ್ನು ಕರಗಿಸಬಲ್ಲ 7 ಚಮತ್ಕಾರಿ ಪಾನೀಯಗಳಿವು
ಆರೋಗ್ಯಕರ ಮೂಳೆ:
ವಯಸ್ಸಾದಂತೆ ಮೂಳೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇದನ್ನು ತಪ್ಪಿಸಲು ಅರಿಶಿನದ ಹಾಲು ಅತ್ಯುತ್ತಮ ಪರಿಹಾರವಾಗಿದೆ.
ಪಿರಿಯಡ್ಸ್ ಸಮಯದಲ್ಲಿ ಉಂಟಾಗುವ ನೋವು:
ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು ಮುಟ್ಟಿನ ಸಮಯದಲ್ಲಿ ಉಂಟಾಗುವ ಹೊಟ್ಟೆ ನೋವು, ಕೈ-ಕಾಲು ಸೆಳೆತದಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಲು ಸಹ ಅರಿಶಿನದ ಹಾಲು ಅತ್ಯುತ್ತಮ ಮನೆಮದ್ದು ಎಂದು ಸಾಬೀತುಪಡಿಸಲಿದೆ.
ಇದನ್ನೂ ಓದಿ- ಉತ್ತಮ ಆರೋಗ್ಯಕ್ಕಾಗಿ ಇಂದಿನಿಂದಲೇ ಒತ್ತಡ ಹೆಚ್ಚಿಸುವ ಈ ಆಹಾರಗಳಿಂದ ದೂರವಿರಿ
ಊತದಿಂದ ಪರಿಹಾರ:
ಸಾಮಾನ್ಯವಾಗಿ ದೇಹದ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳುವ ಊತದ ಸಮಸ್ಯೆಯಿಂದ ಪರಿಹಾರ ಪಡೆಯಲು ಸಹ ನಿತ್ಯ ಅರಿಶಿನದ ಹಾಲಿನ ಸೇವನೆ ಬಹಳ ಪ್ರಯೋಜನಕಾರಿ ಆಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.