ಚೆನ್ನೈ: ಚೆನ್ನೈ ಅಪಾರ್ಟ್ಮೆಂಟ್ ಕಟ್ಟಡದಲ್ಲಿ 11 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಕೆಲವು ತಿಂಗಳುಗಳಿಂದ ಹಲವು ಜನರು ಅತ್ಯಾಚಾರ ಸಂಗತಿ ಈಗ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಕಟ್ಟಡದ ಭದ್ರತಾ ಸಿಬ್ಬಂದಿ ಸೇರಿದಂತೆ 17 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಆ ಬಾಲಕಿಯ ಪಾನೀಯಗಳನ್ನು ನೀಡಿ ಅವಳನ್ನು ಬ್ಲ್ಯಾಕ್ಮೇಲ್ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈಗ ಬಂಧಿತರಾದವರಲ್ಲಿ ಲಿಫ್ಟ್ ಮ್ಯಾನ್ ಮತ್ತು ನೀರು ಸರಬರಾಜುದಾರ ಎಂದು ತಿಳಿದುಬಂದಿದೆ.
ಈ ಎಲ್ಲ ಘಟನೆಯನ್ನು ಈ ಬಾಲಕಿ ತನ್ನ ಹಿರಿಯ ಸಹೋದರಿಗೆ ತಿಳಿಸಿದಾಗ ಅವಳು ನಂತರ ಅದನ್ನು ಪೋಷಕರ ಹೆತ್ತವರ ಗಮನಕ್ಕೆ ತಂದಿದ್ದಾಳೆ.ಆಗ ಅವರು ಪೋಲಿಸರನ್ನು ಭೇಟಿಯಾಗಿ ದೂರು ದಾಖಲಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು.
ಈ ತಿಂಗಳ ಆರಂಭದಲ್ಲಿ, ನಿವೃತ್ತ ಶಾಲಾ ಪ್ರಾಂಶುಪಾಲರಾಗಿದ್ದ 99 ರ ಹರೆಯದ ವ್ಯಕ್ತಿಯೋರ್ವನು ಚೆನ್ನೈನಲ್ಲಿ 10 ವರ್ಷ ವಯಸ್ಸಿನ ಹುಡುಗಿಯನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಬಂಧಿಸಲಾಗಿತ್ತು.