ಹೈದರಾಬಾದ್: ಆಂಧ್ರಪ್ರದೇಶದ ನಲ್ಗೊಂಡ ಜಿಲ್ಲೆಯಲಿ ಬುಧವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರ ಮಗ, ತೆಲುಗು ನಟ ಮತ್ತು ಟಿಡಿಪಿ ಮುಖಂಡ ನಂದಮೂರಿ ಹರಿಕೃಷ್ಣ(61) ಮೃತಪಟ್ಟಿದ್ದಾರೆ.
#SpotVisuals: Actor and TDP leader Nandamuri Harikrishna dies in a car accident in Telangana's Nalgonda district. pic.twitter.com/4EusxbqXmw
— ANI (@ANI) August 29, 2018
ಹರಿಕೃಷ್ಣ ಅವರೇ ಕಾರು ಚಾಲನೆ ಮಾಡಿಕೊಂಡು ಅಭಿಮಾನಿಯೊಬ್ಬರ ಮಗನ ವಿವಾಹ ಸಮಾರಂಭಕ್ಕಾಗಿ ನಲ್ಲೂರಿಗೆ ತೆರಳುತ್ತಿದ್ದರು. ಕಾರನ್ನು ಅತಿ ವೇಗವಾಗಿ ಚಲಾಯಿಸುತ್ತಿದ್ದರು ಎನ್ನಲಾಗಿದೆ. ನಾರ್ಕೆಟ್ಪಲ್ಲಿ-ಆದಂಕಿ ಹೆದ್ದಾರಿಯಲ್ಲಿ ಎದುರು ಇದ್ದ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಪ್ರಯತ್ನಿದಾಗ ಕಾರು ನಿಯಂತ್ರಣ ತಪ್ಪಿ ಉರುಳಿದೆ. ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಹರಿಕೃಷ್ಣ ತಲೆಗೆ ಗಂಭೀರ ಗಾಯವಾಗಿದ್ದ ನಟ, ರಾಜಕೀಯ ಮುಖಂಡ ನಂದಮೂರಿ ಹರಿಕೃಷ್ಣ ಅವರನ್ನು ನಾರ್ಕೆಟ್‌ಪಲ್ಲಿಯ ಕಾಮಿನೇನಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಆಸ್ಪತ್ರೆ ತಲುಪುವ ಮೊದಲೇ ಅವರು ಅಸುನೀಗಿದ್ದರು.
ಪ್ರಾಸಂಗಿಕವಾಗಿ, 2014 ರಲ್ಲಿ, ಹರಿಕೃಷ್ಣ ಅವರ ಇನ್ನೊಬ್ಬ ಮಗ ನಂದಮುರಿ ಜಾನಕಿರಾಮ್ ಸಹ ರಸ್ತೆ ಅಪಘಾತದಲ್ಲಿ ಮರಣ ಹೊಂದಿದರು.