ನವದೆಹಲಿ: ತೆಲಂಗಾಣದಲ್ಲಿ ಕೆಸಿಆರ್ ನೇತೃತ್ವದ ಟಿಆರೆಸ್ಸ್ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರ ರಚಿಸಲಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ತಿಳಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಅಸಾದುದ್ದೀನ್ ಓವೈಸಿ " ನಾನು ತೆಲಂಗಾಣದ ಮುಖ್ಯಮಂತ್ರಿ ಕೆಸಿಆರ್ ಸಾಹೇಬ್ ರನ್ನು ಮುಖ್ಯಮಂತ್ರಿ ಕಚೇರಿಯಲ್ಲಿ ಇಂದು 1.30 ಕ್ಕೆ ಭೇಟಿ ಮಾಡಲಿದ್ದೇನೆ. ಅವರು ಸ್ವಂತ ಬಲದ ಮೇಲೆ ಸರ್ಕಾರ ರಚಿಸುತ್ತಾರೆ ಮಜ್ಲಿಸ್ ಅವರಿಗೆ ಬೆಂಬಲ ನೀಡಲಿದೆ. ಇದು ಬೃಹತ್ ರಾಷ್ಟ್ರದ ನಿರ್ಮಾಣಕ್ಕಾಗಿ ನಾವು ಇಟ್ಟಿರುವ ಮೊದಲ ಹೆಜ್ಜೆ" ಎಂದು ತಿಳಿಸಿದ್ದಾರೆ.
I’ll be meeting Telangana’s caretaker & next CM of Telangana, KCR sahab @TelanganaCMO at 1:30 PM today. Inshallah he’ll form government on his own strength, and Majlis will stand by him. This is our first step towards a larger goal of nation building.....
— Asaduddin Owaisi (@asadowaisi) December 10, 2018
ಈ ಬಾರಿ ಚುನಾವಣೆಯಲ್ಲಿ ಎಐಎಂಐಎಂ ಪಕ್ಷವು ಎಂಟು ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ.ಈ ಹಿಂದೆ 2014ರಲ್ಲಿ ಅದು ಏಳು ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಮಂಗಳವಾರದಂದು ಅಂತಿಮ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.