ನವದೆಹಲಿ : ನೀವು ದೀರ್ಘಾವಧಿಯ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ಪೋಸ್ಟ್ ಆಫೀಸ್ ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಯೋಜನೆ ಅತ್ಯುತ್ತಮ ಆಯ್ಕೆಯಾಗಿರಬಹುದು. ಕಿಸಾನ್ ವಿಕಾಸ್ ಪತ್ರವು ಭಾರತ ಸರ್ಕಾರದ ಒಂದು-ಬಾರಿ ಹೂಡಿಕೆ ಯೋಜನೆಯಾಗಿದ್ದು, ಒಂದು ನಿರ್ದಿಷ್ಟ ಅವಧಿಯಲ್ಲಿ ನಿಮ್ಮ ಹಣ ದ್ವಿಗುಣಗೊಳ್ಳುತ್ತದೆ. ದೇಶದ ಎಲ್ಲಾ ಅಂಚೆ ಕಚೇರಿಗಳು (POST OFFICE) ಮತ್ತು ದೊಡ್ಡ ಬ್ಯಾಂಕುಗಳಲ್ಲಿ ನೀವು ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡಬಹುದು. ಇದರ ಮುಕ್ತಾಯ ಅವಧಿ 124 ತಿಂಗಳುಗಳು. ಇದರಲ್ಲಿ ಕನಿಷ್ಠ ಹೂಡಿಕೆ 1000 ರೂಪಾಯಿ. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ನಿರ್ದಿಷ್ಟವಾಗಿ ರೈತರಿಗಾಗಿ ಈ ಯೋಜನೆಯನ್ನು ಪರಿಚಯಿಸಲಾಗಿದ್ದು ಇದರಿಂದ ಅವರು ತಮ್ಮ ಹಣವನ್ನು ದೀರ್ಘಕಾಲದವರೆಗೆ ಉಳಿಸಬಹುದು.
5 ವರ್ಷಗಳ ಹಿಂದೆ ಲ್ಯಾಪ್ಸ್ ಆದ ವಿಮಾ ಪಾಲಿಸಿಯನ್ನು ಪುನರುಜ್ಜೀವನಗೊಳಿಸುವ ವಿಶೇಷ ಅವಕಾಶ
ಪ್ರತಿಯೊಬ್ಬರೂ ತಮ್ಮ ಹಣವನ್ನು ಆದಷ್ಟು ಬೇಗ ದ್ವಿಗುಣಗೊಳಿಸಬೇಕೆಂದು ಬಯಸುತ್ತಾರೆ, ಆದರೆ ಅದೇ ಸಮಯದಲ್ಲಿ ಠೇವಣಿ ಇರಿಸಿದ ಹಣದ ಸಂಪೂರ್ಣ ಭದ್ರತೆ ಇರಲಿ ಎಂದು ಹಾರೈಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನೀವು ಕಿಸಾನ್ ವಿಕಾಸ್ ಪತ್ರ (ಕೆವಿಪಿ) ದಲ್ಲಿ ಹೂಡಿಕೆ ಮಾಡಲು ಬಯಸಿದರೆ, ಈ ಯೋಜನೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಿ.
ಯಾರು ಹೂಡಿಕೆ ಮಾಡಬಹುದು?
ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡಲು ಕನಿಷ್ಠ 18 ವರ್ಷ ವಯಸ್ಸಾಗಿರುವುದು ಮುಖ್ಯ. ಏಕ ಖಾತೆಯ ಹೊರತಾಗಿ ಇದು ಜಂಟಿ ಖಾತೆಯ ಸೌಲಭ್ಯವನ್ನೂ ಸಹ ಹೊಂದಿದೆ. ಅದೇ ಸಮಯದಲ್ಲಿ, ಅಪ್ರಾಪ್ತ ವಯಸ್ಕರನ್ನು ಸಹ ಯೋಜನೆಯಲ್ಲಿ ಸೇರಿಸಿಕೊಳ್ಳಬಹುದು, ಆದರೆ ಅವರ ಪೋಷಕರು ಅದನ್ನು ನಿರ್ವಹಿಸಬೇಕಾಗುತ್ತದೆ. ಹಿಂದೂ ಅವಿಭಜಿತ ಕುಟುಂಬ (ಎಚ್ಯುಎಫ್) ಮತ್ತು ಎನ್ಆರ್ಐ ಈ ಯೋಜನೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಆದಾಗ್ಯೂ ಈ ಯೋಜನೆ ಟ್ರಸ್ಟ್ಗಳಿಗೆ ಅನ್ವಯಿಸುತ್ತದೆ.
ಪ್ರಮಾಣಪತ್ರ ರೂಪದಲ್ಲಿ ಹೂಡಿಕೆ :
ಕಿಸಾನ್ ವಿಕಾಸ್ ಪತ್ರ (ಕೆವಿಪಿ) 1000 ರೂ, 5000, 10,000 ರೂ ಮತ್ತು 50,000 ರೂ. ವರೆಗೆ ಪ್ರಮಾಣಪತ್ರಗಳನ್ನು ಹೊಂದಿದ್ದು, ಅದನ್ನು ಖರೀದಿಸಬಹುದು.
ನಿಮ್ಮ ಫೋಷಕರಿಗಾಗಿ ಅತ್ಯುತ್ತಮ ಪೋಸ್ಟ್ ಆಫೀಸ್ ಯೋಜನೆ
ಕೆವಿಪಿಯ ವಿಶೇಷತೆ?
ಕೆವಿಪಿ ಒಂದು ರೀತಿಯ ಸಣ್ಣ ಉಳಿತಾಯ ಯೋಜನೆಯಾಗಿದೆ. ಯಾವುದೇ ಅಪಾಯವಿಲ್ಲದೆ ಆದಾಯವನ್ನು ಪಡೆಯುವ ಭರವಸೆ ಇದೆ. ಇದು ಹೂಡಿಕೆ ಮಾಡಲು ಸುರಕ್ಷಿತ ಮಾರ್ಗವಾಗಿದೆ ಮತ್ತು ಅದರ ಮುಕ್ತಾಯ ಅವಧಿ ಮುಗಿದ ನಂತರ, ನೀವು ಬಡ್ಡಿಯೊಂದಿಗೆ ಹೂಡಿಕೆ ಮಾಡಿದ ಮೊತ್ತವನ್ನು ಪಡೆಯುತ್ತೀರಿ. ಈ ಯೋಜನೆ ಆದಾಯ ತೆರಿಗೆ ಕಾಯ್ದೆ 80 ಸಿ ಅಡಿಯಲ್ಲಿ ಬರುವುದಿಲ್ಲ. ಆದ್ದರಿಂದ ಯಾವುದೇ ಆದಾಯಕ್ಕೆ ತೆರಿಗೆ ವಿಧಿಸಲಾಗುತ್ತದೆ. ಈ ಯೋಜನೆಯಲ್ಲಿ ಟಿಡಿಎಸ್ ಅನ್ನು ಕಡಿತಗೊಳಿಸಲಾಗುವುದಿಲ್ಲ. ಕಿಸಾನ್ ವಿಕಾಸ್ ಪತ್ರದಲ್ಲಿ ಪ್ರಸ್ತುತ ಬಡ್ಡಿದರವು ಶೇಕಡಾ 6.9 ಆಗಿದೆ. ನಿಮ್ಮ ಹೂಡಿಕೆಯ ಮೇಲೆ ನೀವು ಸಂಯುಕ್ತ ಬಡ್ಡಿಯನ್ನು ಪಡೆಯುತ್ತೀರಿ.
ಕೆವಿಪಿಯಲ್ಲಿ ಎಷ್ಟು ಬಡ್ಡಿ ಪಡೆಯಲಾಗುತ್ತದೆ?
ಪ್ರಸ್ತುತ ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಯಲ್ಲಿ ಹೂಡಿಕೆ ಮಾಡುವುದರಿಂದ ಶೇ 6.9 ರಷ್ಟು ಬಡ್ಡಿ ಗಳಿಸಲಾಗುತ್ತಿದೆ. ಅಂಚೆ ಕಚೇರಿ ಠೇವಣಿ ಯೋಜನೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿದರಗಳನ್ನು ನಿಗದಿಪಡಿಸಲಾಗುತ್ತದೆ. ಈ ದರಗಳನ್ನು 1 ಜುಲೈ 2020 ರಂದು ನಿಗದಿಪಡಿಸಲಾಗಿದೆ. 30 ಸೆಪ್ಟೆಂಬರ್ 2020 ರವರೆಗೆ ಹೂಡಿಕೆಗೆ ಶೇ 6.9 ರಷ್ಟು ಬಡ್ಡಿ ಸಿಗುತ್ತದೆ. ಅಕ್ಟೋಬರ್ 1, 2020 ರಂದು ಬಡ್ಡಿದರಗಳನ್ನು ಮತ್ತೊಮ್ಮೆ ಪರಿಷ್ಕರಿಸಬಹುದು.
ಹಣ ಎಷ್ಟು ದಿನದಲ್ಲಿ ದ್ವಿಗುಣಗೊಳ್ಳುತ್ತದೆ?
ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಯಲ್ಲಿ ಠೇವಣಿ ಇರಿಸಿದ ಹಣವು ಮುಕ್ತಾಯ ಅವಧಿಯ ನಂತರ ದ್ವಿಗುಣಗೊಳ್ಳುತ್ತದೆ. ಪೋಸ್ಟ್ ಆಫೀಸ್ ವೆಬ್ಸೈಟ್ ಪ್ರಕಾರ ಈ ಯೋಜನೆಯ ಮುಕ್ತಾಯ ಅವಧಿ 124 ತಿಂಗಳುಗಳು. ಈ ರೀತಿಯಾಗಿ ನಿಮ್ಮ ಹಣವು 10 ವರ್ಷ ಮತ್ತು 4 ತಿಂಗಳ ನಂತರ ದ್ವಿಗುಣಗೊಳ್ಳುತ್ತದೆ ಈ ಯೋಜನೆಯಲ್ಲಿ ನೀವು ಹಣವನ್ನು ಠೇವಣಿ ಮಾಡಲು ಬಯಸಿದರೆ, 1000 ರೂಪಾಯಿ, 5000 ರೂಪಾಯಿ, 10,000 ರೂಪಾಯಿ ಹೀಗೆ ನಿಮಗೆ ಸಾಧ್ಯವಾದಷ್ಟು ಹೂಡಿಕೆ ಮಾಡಬಹುದು.
ಅಗತ್ಯ ದಾಖಲೆಗಳು:
- ಕೆವೈಸಿ ಪ್ರಕ್ರಿಯೆಗೆ ಗುರುತಿನ ಪುರಾವೆ
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಮತದಾರರ ಗುರುತಿನ ಚೀಟಿ
- ಚಾಲನಾ ಪರವಾನಿಗೆ
- ಪಾಸ್ಪೋರ್ಟ್
- ಕೆವಿಪಿ ಅರ್ಜಿ ನಮೂನೆ
ವಿಳಾಸ ಪುರಾವೆ:
ಜನನ ಪ್ರಮಾಣಪತ್ರ
ಖಾತೆ ತೆರೆಯುವುದು ಹೇಗೆ?
- ಯಾವುದೇ ಅಂಚೆ ಕಚೇರಿಗೆ ಹೋಗಿ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ನೀವು ಖಾತೆಯನ್ನು ತೆರೆಯಬಹುದು. ಫಾರ್ಮ್ ಅನ್ನು ಆನ್ಲೈನ್ ಮೂಲಕವೂ ಡೌನ್ಲೋಡ್ ಮಾಡಬಹುದು.
- ಫಾರ್ಮಿನಲ್ಲಿ ಪೂರ್ಣ ಹೆಸರು, ಹುಟ್ಟಿದ ದಿನಾಂಕ ಮತ್ತು ನಾಮಿನಿಯ ವಿಳಾಸವನ್ನು ಬರೆಯಬೇಕು.
- ಖರೀದಿ ಮೊತ್ತವನ್ನು ಸ್ಪಷ್ಟವಾಗಿ ಬರೆಯಬೇಕು.
- ಕೆವಿಪಿ ಫಾರ್ಮ್ ಮೊತ್ತವನ್ನು ಚೆಕ್ ಅಥವಾ ನಗದು ಮೂಲಕ ಪಾವತಿಸಬಹುದು.
- ನೀವು ಚೆಕ್ ಮೂಲಕ ಪಾವತಿಸುತ್ತಿದ್ದರೆ, ಫಾರ್ಮ್ನಲ್ಲಿ ಚೆಕ್ ಸಂಖ್ಯೆಯ ಮಾಹಿತಿಯನ್ನು ಬರೆಯಿರಿ.
- ಯಾವ ಆಧಾರದ ಮೇಲೆ ಖರೀದಿಸಲಾಗುತ್ತಿದೆ ಎಂದು ಎಂದರೆ ಕೆವಿಪಿ ಸಿಂಗಲ್ ಅಥವಾ ಜಂಟಿ 'ಎ' ಅಥವಾ ಜಂಟಿ 'ಬಿ' ಸದಸ್ಯತ್ವ ರೂಪದಲ್ಲಿ ಎಂಬುದನ್ನು ವಿವರಿಸಿ.
- ಜಂಟಿ ಖರೀದಿಯಲ್ಲಿ ಎರಡೂ ಫಲಾನುಭವಿಗಳ ಹೆಸರನ್ನು ಬರೆಯಿರಿ.
- ಫಲಾನುಭವಿ ಅಪ್ರಾಪ್ತ ವಯಸ್ಸಿನವರಾಗಿದ್ದರೆ ಫಲಾನುಭವಿಯ ಹುಟ್ಟಿದ ದಿನಾಂಕವನ್ನು (ಪೋಷಕರ ಹೆಸರು) ಬರೆಯಿರಿ.
- ಫಾರ್ಮ್ ಅನ್ನು ಸಲ್ಲಿಸಿದಾಗ ಫಲಾನುಭವಿಯ ಹೆಸರು, ಮುಕ್ತಾಯ ದಿನಾಂಕ ಮತ್ತು ಮುಕ್ತಾಯ ಮೊತ್ತದೊಂದಿಗೆ ಕಿಸಾನ್ ವಿಕಾಸ್ ಪ್ರಮಾಣಪತ್ರವನ್ನು ನೀಡಲಾಗುತ್ತದೆ.