ನವದೆಹಲಿ: ಮುಸ್ಲಿಂನಾಗಿ ಶಿವಸೇನಾ ಮುಖ್ಯಸ್ಥ ಬಾಳಸಾಹೇಬ್ ಠಾಕ್ರೆ ಜೀವನಾಧಾರಿತ ಸಿನಿಮಾದಲ್ಲಿ ಠಾಕ್ರೆ ಪಾತ್ರದಲ್ಲಿ ನಟಿಸಿರುವ ಕುರಿತಾಗಿ ಪ್ರತಿಕ್ರಿಯಿಸಿರುವ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ "ನಟನಾದವನಿಗೆ ಸ್ವಂತ ಯಾವುದೇ ಸಿದ್ದಾಂತವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಖಾಸಗಿ ಪತ್ರಿಕೆಯೊಂದಿಗೆ ಮಾತನಾಡುತ್ತಾ ತಿಳಿಸಿರುವ ಸಿದ್ದಿಕಿ "ನಟನಿಗೆ ಸ್ವಂತ ಯಾವುದೇ ಸಿದ್ಧಾಂತವಿರುವುದಿಲ್ಲ.ನಾನು ಯಾವುದೇ ಪಾತ್ರವನ್ನು ಮಾಡುವಾಗ ಆಯಾ ಪಾತ್ರದ ಸಿದ್ಧಾಂತ ಮತ್ತು ಫಿಲಾಸಫಿಯನ್ನು ನಂಬುತ್ತೇನೆ,ಅವರ ಪಾತ್ರದ ಸಿದ್ದಾಂತ ಅರಿತುಕೊಳ್ಳದೆ ನಾನು ಆ ಪಾತ್ರಕ್ಕೆ ನ್ಯಾಯ ಒದಗಿಸುವುದಕ್ಕೆ ಸಾಧ್ಯವಿಲ್ಲ. ಒಮ್ಮೆ ಆ ಪಾತ್ರದ ಕೆಲಸ ಮುಗಿದ ನಂತರ ಅದರಿಂದ ಹೊರಬಂದು ಇನ್ನೊಂದು ಪಾತ್ರ ಮತ್ತು ಸಿದ್ಧಾಂತದ ಪಾತ್ರದಲ್ಲಿ ಭಾಗಿಯಾಗುವುದು" ಎಂದು ತಿಳಿಸಿದರು.
ಇದೇ ವೇಳೆ ತಾವು ರಾಜಕೀಯ ಸಂಭಂಧಿತ ಚಿತ್ರಗಳನ್ನು ಮಾಡಬಹುದು.ಆದರೆ ನಾನು ರಾಜಕೀಯಕ್ಕೆ ಸೇರುವುದಿಲ್ಲ, ಭವಿಷ್ಯದಲ್ಲಿಯೂ ಕೂಡ ನಾನು ಕಲಾವಿದನಾಗಿ ಮುಂದುವರೆಯುತ್ತೇನೆ ಎಂದು ನವಾಜುದ್ದೀನ್ ಸಿದ್ದಿಕಿ ತಿಳಿಸಿದರು.