Coronavirus ನಿಂದ ಪಾರಾಗಲು ರಿಕ್ಷಾ ಡಿಸೈನ್ ಬದಲಿಸಿದ ಚಾಲಕನಿಗೆ ನೌಕರಿ ಆಫರ್ ನೀಡಿದ ಆನಂದ್ ಮಹಿಂದ್ರಾ

ಕೊರೊನಾ ವೈರಸ್ ನಿಂದ ಪಾರಾಗಲು ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನಿರಂತರವಾಗಿ ಮನವಿ ಮಾಡುತ್ತಿದ್ದಾರೆ. 

Last Updated : Apr 26, 2020, 07:45 PM IST
Coronavirus ನಿಂದ ಪಾರಾಗಲು ರಿಕ್ಷಾ ಡಿಸೈನ್ ಬದಲಿಸಿದ ಚಾಲಕನಿಗೆ ನೌಕರಿ ಆಫರ್ ನೀಡಿದ ಆನಂದ್ ಮಹಿಂದ್ರಾ title=

ನವದೆಹಲಿ: ಕೊರೊನಾ ವೈರಸ್ ನಿಂದ ಪಾರಾಗಲು ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ನಿರಂತರವಾಗಿ ಮನವಿ ಮಾಡುತ್ತಿದ್ದಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಲಾಕ್ ಡೌನ್ ಘೋಷಿಸಲಾಗಿದ್ದು ಮತ್ತು ಸಾರ್ವಜನಿಕ ಸಾರಿಗೆಯನ್ನು ಸಹ ಮುಚ್ಚಲಾಗಿದೆ. ಏತನ್ಮಧ್ಯೆ, ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳ ಮೇಲೆ ಭಾರಿ ವೈರಲ್ ಆಗುತ್ತಿದೆ. ಇದರಲ್ಲಿ ಇ-ರಿಕ್ಷಾ ಚಾಲಕನೋರ್ವ ತನ್ನ ರಿಕ್ಷಾವನ್ನು ಮಾರ್ಪಡಿಸಿದ್ದು, ಅದರಲ್ಲಿ ಕುಳಿತುಕೊಳ್ಳುವ ಪ್ರತಿಯೊಬ್ಬರೂ ಪರಸ್ಪರ ದೂರವೇ ಇರಲಿದ್ದಾರೆ. ಅಂದರೆ, ಈ ಆಟೋ ಮೂಲಕ ಪ್ರಯಾಣ ಬೆಳೆಸಿ ಜನರು ಸಾಮಾಜಿಕ ಅಂತರ ಅನುಸರಿಸುವ ನಿಯಮಗಳನ್ನು ಪಾಲಿಸಬಹುದಾಗಿದೆ.

ಮಾರ್ಪದಿಸಲಾಗಿರುವ ಈ ಆಟೋ ರಿಕ್ಷಾದಲ್ಲಿ ಚಾಲಕ ಸೇರಿದಂತೆ 4 ಪ್ರಯಾಣಿಕರೂ ಸಲೀಸಾಗಿ ಕುಳಿತುಕೊಳ್ಳಬಹುದು. ಇದರಲ್ಲಿ ಪ್ರತಿಯೊಬ್ಬ ಸವಾರಿಗೆ ಪ್ರತ್ಯೇಕ ವಿಭಾಗಗಳನ್ನು ಮಾಡಲಾಗಿದೆ. ಆದರೆ, ಸಧ್ಯ ಈ ವಿಡಿಯೋ ದೇಶದ ಯಾವ ಭಾಗದಿಂದ ಬಂದಿದೆ ಎಂಬುದು ಇದುವರೆಗೂ ಸ್ಪಷ್ಟವಾಗಿಲ್ಲ.

ವಿಡಿಯೋ ನೋಡಿ ಪ್ರಭಾವಿತ ಗೊಂಡ ಆನಂದ್ ಮಹಿಂದ್ರಾ
ತೀವ್ರ ಬದಲಾವಣೆಗೆ ಒಳಗಾದ ಈ ಇ-ರಿಕ್ಷಾ ವಿಡಿಯೋ ಮಹಿಂದ್ರ ಗ್ರೂಪ್ ಚೇರ್ಮನ್ ಆನಂದ್ ಮಹಿಂದ್ರ ಅವರ ಬಳಿಯೂ ತಲುಪಿದ್ದು, ಪ್ರಭಾವಿತಗೊಂಡ ಅವರೂ ಕೂಡ ಇದನ್ನು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಟ್ವೀಟ್ ಮಾಡಿದ್ದಾರೆ. ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ವೇಗವಾಗಿ ಯಾವುದೇ ಒಂದು ಸಂಗತಿಗೆ ಹೊಂದಿಕೊಳ್ಳುವ ಮತ್ತು ವೇಗವಾಗಿ ಯಾವುದೇ ಒಂದು ಹೊಸ ಆವಿಷ್ಕಾರವನ್ನು ಮಾಡುವ ನಮ್ಮ ದೇಶದ ಜನರ ಸಾಮರ್ಥ್ಯ ನೋಡಿ ನಾನು ಯಾವಾಗಲು ಆಶ್ಚರ್ಯಚಕಿತನಾಗುತ್ತೇನೆ ಎಂದಿದ್ದಾರೆ.

ಅಷ್ಟೇ ಅಲ್ಲ, ತಮ್ಮ ಈ ಟ್ವೀಟ್ ಅನ್ನು ತಮ್ಮ ಕಂಪನಿಯ ಕಾರ್ಯಕಾರಿ ನಿರ್ದೇಶಕ ರಾಜೇಶ್ ಜೆಜುರಿಕರ್ ಅವರಿಗೆ ಟ್ಯಾಗ್ ಮಾಡಿರುವ ಆನಂದ್ ಮಹಿಂದ್ರಾ, ಸಂಬಂಧಿತ ಆಟೋ ರಿಕ್ಷಾ ಚಾಲಕನನ್ನು ತಮ್ಮ ಕಂಪನಿಯ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಹಾಗೂ ಪ್ರಾಡಕ್ಟ್ ಡೆವಲಪ್ಮೆಂಟ್ ತಂಡದಲ್ಲಿ ಓರ್ವ ಸಲಹೆಗಾರನಾಗಿ ನೇಮಿಸಲು ಸಲಹೆ ಕೂಡ ನೀಡಿದ್ದಾರೆ.

Trending News