ನವದೆಹಲಿ: ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಬಯೋಕಾನ್ ಸಂಸ್ಥಾಪಕಿ ಡಾ.ಕಿರಣ್ ಮಜುಂದಾರ್-ಶಾ ಅವರಿಗೆ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಗೌರವ ಆರ್ಡರ್ ಆಫ್ ಆಸ್ಟ್ರೇಲಿಯಾ ಗೌರವವನ್ನು ಪ್ರದಾನ ಮಾಡಲಾಯಿತು.
ಭಾರತದೊಂದಿಗೆ ಆಸ್ಟ್ರೇಲಿಯಾದ ದ್ವಿಪಕ್ಷೀಯ ಸಂಬಂಧ ವಿಶೇಷವಾಗಿ ವಾಣಿಜ್ಯ ಮತ್ತು ಶೈಕ್ಷಣಿಕ ಸಂಪರ್ಕಗಳನ್ನು ಉತ್ತೇಜಿಸುವಲ್ಲಿ ವಹಿಸಿದ ಪಾತ್ರಕ್ಕಾಗಿ ' ಈ ಗೌರವವನ್ನು ನೀಡಲಾಗಿದೆ ಎಂದು ಜನರಲ್ ಗವರ್ನರ್ ಕಚೇರಿ ಹೇಳಿದೆ.
A proud privilege to have you confer it @AusHCIndia https://t.co/qP8l9RMzoe
— Kiran Mazumdar Shaw (@kiranshaw) January 17, 2020
ಡಾ. ಕಿರಣ್ ಮಜುಂದಾರ್ ಶಾ ಆಸ್ಟ್ರೇಲಿಯಾದಲ್ಲಿ ಅಧ್ಯಯನ ಮಾಡಿದ್ದು, ಮದರ್ ತೆರೇಸಾ, ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಬ್ಜಿ ಮತ್ತು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ನಂತರ ಈ ಪ್ರಶಸ್ತಿಯನ್ನು ಪಡೆದ ನಾಲ್ಕನೇ ಭಾರತೀಯ ನಾಗರಿಕರಾಗಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಆಸ್ಟ್ರೇಲಿಯಾದ ಭಾರತದ ಹೈ ಕಮಿಷನರ್, ಹರ್ ಎಕ್ಸಲೆನ್ಸಿ ಎಂ.ಎಸ್.ಹರಿಂದರ್ ಸಿಧು, ಜನರಲ್ ವಿಭಾಗದಲ್ಲಿ ಆರ್ಡರ್ ಆಫ್ ಆಸ್ಟ್ರೇಲಿಯಾ (ಎಎಮ್) ಒಳಗೆ ಗೌರವ ಸದಸ್ಯರಾಗಿ ಡಾ. ಕಿರಣ್ ಮಜುಂದಾರ್-ಶಾ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಿಧು ಮಾತನಾಡಿ 'ಆಸ್ಟ್ರೇಲಿಯಾವು ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ಬೆಳೆಸುವಲ್ಲಿ ನೀಡಿದ ಅಪಾರ ಕೊಡುಗೆಗಾಗಿ ಡಾ. ಕಿರಣ್ ಮಜುಂದಾರ್-ಶಾ ಅವರಿಗೆ ಈ ಗೌರವವನ್ನು ನೀಡಲಾಗಿದೆ' ಎಂದು ಹೇಳಿದರು. ಆಸ್ಟ್ರೇಲಿಯಾ ಅಥವಾ ಮಾನವೀಯತೆಗೆ ಮಹತ್ತರ ಕೊಡುಗೆ ನೀಡಿದ ವಿದೇಶಿ ಪ್ರಜೆಗಳಿಗೆ ಆರ್ಡರ್ ಆಫ್ ಆಸ್ಟ್ರೇಲಿಯಾದ ಗೌರವ ನೀಡಲಾಗುತ್ತದೆ.