Afghanistan Suicide Bomb Blast: ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಆಳ್ವಿಕೆಯ ನಂತರ ಬಾಂಬ್ ದಾಳಿಯ ಘಟನೆಗಳು ನಿಲ್ಲುವ ಮಾತೆ ಎತ್ತುತ್ತಿಲ್ಲ. ಹೊಸ ವರದಿಯೊಂದರ ಪ್ರಕಾರ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಶಾಲೆಯೊಂದರಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 100 ಮಕ್ಕಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ವರದಿಗಾರಿಕೆಯ ಸಂದರ್ಭದಲ್ಲಿ ಈ ಘಟನೆ ಮಾನವ ಸಂವೇದನೆಗಳನ್ನೇ ಕಲುಕಿದೆ ಎಂದು ಸ್ಥಳೀಯ ಪತ್ರಕರ್ತರು ಹೇಳಿದ್ದಾರೆ. ಶಾಲೆಯ ಸುತ್ತಮುತ್ತ ಮೃತದೇಹಗಳನ್ನು ಗುರುತಿಸುವುದೂ ಕಷ್ಟವಾಗುತ್ತಿದೆ. ಮೃತದೇಹಗಳ ಕೈ-ಕಾಳುಗಳು ಚೆಲ್ಲಾಪಿಲ್ಲಿಯಾಗಿ ಹರಡಿವೆ ಎಂದು ಸ್ಥಳೀಯ ಪತ್ರಕರ್ತರು.
Each number on those chairs represented one human being. Each number, and their families, had dreams to come here and take the university preparation entrance examination. Those dreams are dashed with fatal consequences for them, the families, communities , and the country. pic.twitter.com/CnphF6tgd9
— BILAL SARWARY (@bsarwary) September 30, 2022
ಆಂಗ್ಲ ಮಾಧ್ಯಮವೊಂದು ಪ್ರಕಟಿಸಿರುವ ವರದಿಯೊಂದರ ಪ್ರಕಾರ, ನಗರದ ಪಶ್ಚಿಮ ಭಾಗದಲ್ಲಿರುವ ದಷ್ಟ್-ಎ-ಬರ್ಚಿ ಪ್ರದೇಶದ ಕಾಜ್ ಶಾಲೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಥಳೀಯ ಪತ್ರಕರ್ತ ಬಿಲಾಲ್ ಸರ್ವಾರಿ ಅವರು ಈ ದಾಳಿಯ ಕುರಿತು ಟ್ವೀಟ್ ಮಾಡಿದ್ದಾರೆ, "ನಾವು ಇಲ್ಲಿಯವರೆಗೆ ನಮ್ಮ ವಿದ್ಯಾರ್ಥಿಗಳ 100 ಶವಗಳನ್ನು ಎಣಿಕೆ ಮಾಡಿದ್ದೇವೆ. ಹತ್ಯೆಗೀದಾದ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಹೆಚ್ಚಾಗಿದೆ. ತರಗತಿಯು ವಿದ್ಯಾರ್ಥಿಗಳಿಂದ ತುಂಬಿತ್ತು. ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಪ್ರವೇಶಕ್ಕಾಗಿ ತಯಾರಿ ನಡೆಸುತ್ತಿದ್ದರು" ಎಂದಿದ್ದಾರೆ.
ಇದನ್ನೂ ಓದಿ-Afghanistan: ಕಾಬೂಲ್‌ನಲ್ಲಿ ಭಾರೀ ಸ್ಫೋಟ, 32 ಮಂದಿ ಮೃತ, 40 ಮಂದಿಗೆ ಗಾಯ
ಸ್ಥಳೀಯ ಪತ್ರಕರ್ತರ ಪ್ರಕಾರ, ಘಟನೆಯಲ್ಲಿ ಸಾವಿಗೀಡಾದ ಬಹುತೇಕ ವಿದ್ಯಾರ್ಥಿಗಳು ಹಜಾರಾ ಮತ್ತು ಶಿಯಾ ಪಂಗಡಕ್ಕೆ ಸೇರಿದವರಾಗಿದ್ದಾರೆ ಎನ್ನಲಾಗಿದೆ. ಹಜಾರಾ ಅಫ್ಘಾನಿಸ್ತಾನದ ಮೂರನೇ ಅತಿದೊಡ್ಡ ಜನಾಂಗೀಯ ಗುಂಪಾಗಿದೆ.
ಇದನ್ನೂ ಓದಿ-ನಾಳೆ ನಾಲ್ಕು ಉಕ್ರೇನ್ ಪ್ರದೇಶಗಳನ್ನು ಔಪಚಾರಿಕವಾಗಿ ವಶಪಡಿಸಿಕೊಳ್ಳಲಿದೆ ರಷ್ಯಾ
ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೈ-ಕಾಲುಗಳು
ಕಾಜ್ ಉನ್ನತ ಶಿಕ್ಷಣ ಸಂಸ್ಥೆಯ ಶಿಕ್ಷಕರೊಬ್ಬರು ಮಕ್ಕಳ ಕೈಕಾಲುಗಳನ್ನು ಆಯ್ದ ಭಯಾನಕತೆಯನ್ನು ವರದಿಯ ಮಾಡಿದ ಪತ್ರಕರ್ತರು ನೆನಪಿಸಿಕೊಳ್ಳುತ್ತಾರೆ. ಎಲ್ಲೋ ಕೈಗಳಿದ್ದವು, ಎಲ್ಲೋ ಕಾಲುಗಳು ಬಿದ್ದಿದ್ದವು. ಭಯೋತ್ಪಾದಕರು ಬಾಂಬ್ ಸ್ಫೋಟಿಸಿದ ಸ್ಥಳದ ಸ್ಫೋಟದ ಪೂರ್ವ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.