ಅಹಮದಾಬಾದ್: ಅಹಮದಾಬಾದ್ನ ಒಧವ್ ಪ್ರದೇಶದಲ್ಲಿ ಭಾನುವಾರ ಸಂಜೆ ಸುಮಾರು ಎರಡು ದಶಕಗಳ ಹಿಂದೆ ಸರಕಾರಿ ಗೃಹ ನಿರ್ಮಾಣ ಯೋಜನೆಯಡಿ ನಿರ್ಮಿಸಲ್ಪಟ್ಟ ಎರಡು ನಾಲ್ಕು ಅಂತಸ್ತಿನ ಕಟ್ಟಡಗಳು ಕುಸಿದಿವೆ. ಈ ಅಪಘಾತದಲ್ಲಿ ನಾಲ್ಕು ಜನರನ್ನು ರಕ್ಷಿಸಲಾಗಿದ್ದು, ಹಲವರು ಕಟ್ಟಡದ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ, ರಕ್ಷಣಾ ಕಾರ್ಯ ಮುಂದುವರೆದಿದೆ.
#LatestVisuals from Ahmedabad's Odhav area where a four-storey building collapsed last night. 3 people have been rescued, at least five still feared trapped under the debris. Rescue operation is underway. #Gujarat pic.twitter.com/g2ZEPE2Ka5
— ANI (@ANI) August 27, 2018
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ಸ್ಥಳೀಯ ಅಗ್ನಿಶಾಮಕ ಇಲಾಖೆಯ ತಂಡಗಳನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ರಾಜ್ಯ ಸಚಿವ ಪ್ರದೀಪ್ ಸಿಂಗ್ ಜಡೇಜಾ ತಿಳಿಸಿದ್ದಾರೆ. ಎರಡೂ ಕಟ್ಟಡಗಳು ನಾಲ್ಕು ಅಂತಸ್ತಿನ ಕಟ್ಟಡಗಳಾಗಿವೆ. ರಕ್ಷಣಾ ತಂಡಗಳು ರಕ್ಷಣಾ ಕಾರ್ಯಕ್ಕಾಗಿ ಆಧುನಿಕ ಉಪಕರಣಗಳನ್ನು ಬಳಸುತ್ತಿವೆ ಎಂದು ಅವರು ಹೇಳಿದರು.
ಅಹಮದಾಬಾದ್ ಮುನಿಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ನಿನ್ನೆ ಎರಡೂ ಕಟ್ಟಡಗಳಲ್ಲಿದ್ದ ನಿವಾಸಿಗಳನ್ನು ಖಾಲಿ ಮಾಡಿಸಿದ್ದರು. ಆದರೆ ಕಟ್ಟಡ ಕುಸಿದ ಸಮಯದಲ್ಲಿ ಕೆಲವು ನಿವಾಸಿಗಳು ಕಟ್ಟಡದಲ್ಲೇ ಇದ್ದರು. 8-10 ಜನ ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದಾರೆ ಎಂದು ಜಡೇಜಾ ತಿಳಿಸಿದ್ದಾರೆ.
3 people rescued. 5-6 still feared trapped. 4 teams are here. One team on standby in Vadodara. Dog squad is also here. We are using various equipment to rescue people. Rescue operation will take at least three-four more hours: Second in Command, 6th Bn NDRF Gandhinagar #Gujarat pic.twitter.com/2NcMGx1Vz7
— ANI (@ANI) August 26, 2018
ಸ್ಥಳೀಯ ಪುರಸಭಾ ನಿಗಮದ 5 ತಂಡಗಳು, ಎನ್ಡಿಆರ್ಎಫ್ನ 5 ತಂಡಗಳು, ಅಗ್ನಿಶಾಮಕ ತಂಡ ಮತ್ತು ಪೊಲೀಸ್ ಆಡಳಿತ ಮಂಡಳಿಗಳು ಸ್ಥಳದಲ್ಲೇ ಬೀಡು ಬಿಟ್ಟಿವೆ. ಪಾರುಗಾಣಿಕಾ ಕಾರ್ಯಾಚರಣೆಯು ಪ್ರಗತಿಯಲ್ಲಿದೆ. ಈ ಕಾರ್ಯಾಚರಣೆಯನ್ನು ಪೂರೈಸಲು ಅಗತ್ಯವಿರುವುದನ್ನು ತಕ್ಷಣವೇ ಪೂರೈಸಲಾಗುವುದು ಎಂದು ಗುಜರಾತ್ ಗೃಹ ಸಚಿವ ಪ್ರದೀಪ್ ಸಿಂಗ್ ಜಡೇಜಾ ಹೇಳಿದರು.