ತಿರುವನಂತಪುರಂ: ಕೊಚ್ಚಿಯ ನೌಕಾನೆಲೆಯ ವಿಮಾನ ನಿಲ್ದಾಣದಿಂದ ಇಂದು ಬೆಳಿಗ್ಗೆಯಿಂದ ಕಮರ್ಷಿಯಲ್ ವಿಮಾನಗಳ ಕಾರ್ಯಾಚರಣೆಗೆ ಅವಕಾಶ ನೀಡಲಾಗಿದೆ. ಸೋಮವಾರ ಬೆಳಿಗ್ಗೆ ಬೆಂಗಳೂರಿನಿಂದ ಏರ್ ಇಂಡಿಯಾ ವಿಮಾನ ಮೊದಲ ಹಾರಾಟ ನಡೆಸಿದೆ. ಏತನ್ಮಧ್ಯೆ, ರಾಜ್ಯ ರಾಜಧಾನಿ ತಿರುವನಂತಪುರಂ ಹಾಗೂ ಎರ್ನಾಕುಲಂ ನಡುವೆ ರೈಲು ಸಂಚಾರ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ.
ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾದ ಕಾರಣ ಆ. 26ರ ತನಕ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಸಣ್ಣ ವಿಮಾನಗಳು ನೌಕಾನೆಲೆಯ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಲಿವೆ.
#Kerala: First commercial flight lands at INS Garuda Kochi Naval Air Station after Cochin International Airport got affected due to floods. #KeralaFloods pic.twitter.com/1gpfUeYXBq
— ANI (@ANI) August 20, 2018