ನವದೆಹಲಿ: ದೆಹಲಿಯಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿರುವ ದೆಹಲಿ ಸರ್ಕಾರ ಭಾಗಶಃ ಲಾಕ್ಡೌನ್ ಜಾರಿಗೊಳಿಸುವ ಇಂಗಿತ ವ್ಯಕ್ತಪಡಿಸಿದೆ. ಈ ಕುರಿತಂತೆ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಾವು ಸಣ್ಣ ಮಟ್ಟದಲ್ಲಿ ಲಾಕ್ಡೌನ್ (Lockdown) ಜಾರಿಗೊಳಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದೇವೆ. ಇದು ಭಾಗಶಃ ಲಾಕ್ಡೌನ್ ಆಗಿರುತ್ತದೆ ಎಂದರು.
ಆದಾಗ್ಯೂ ದೆಹಲಿ ಸರ್ಕಾರದ ಈ ಕ್ರಮಕ್ಕೆ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಡಿಡಿಎಂಎ) ಅಧ್ಯಕ್ಷರಾಗಿರುವ ಲೆಫ್ಟಿನೆಂಟ್-ಗವರ್ನರ್ (ಎಲ್-ಜಿ) ಅನಿಲ್ ಬೈಜಾಲ್ ಅವರ ಅನುಮೋದನೆ ಅಗತ್ಯವಿರುತ್ತದೆ.
ಸಾಮಾಜಿಕ ದೂರವಿಡುವ ಮಾನದಂಡಗಳು ಮತ್ತು ಇತರ ಕೋವಿಡ್ -19 (Covid 19) ಸಂಬಂಧಿತ ನಿಯಮಗಳ ಅತಿರೇಕದ ಉಲ್ಲಂಘನೆಯಿಂದಾಗಿ ಸಂಭಾವ್ಯ ಕೋವಿಡ್ -19 ಹಾಟ್ ಸ್ಪಾಟ್ಗಳೆಂದು ಗುರುತಿಸಲ್ಪಟ್ಟ ಮಾರುಕಟ್ಟೆಗಳನ್ನು ತಾತ್ಕಾಲಿಕವಾಗಿ ಮುಚ್ಚಲು ದೆಹಲಿ ಸರ್ಕಾರಕ್ಕೆ ಅವಕಾಶ ನೀಡುವಂತೆ ಕೇಂದ್ರವನ್ನು ಕೋರುತ್ತೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದೇಶದ ಈ ಭಾಗದಲ್ಲಿ ತಾರಕಕ್ಕೇರಿದ ಕರೋನಾ, ಮತ್ತೆ ಜಾರಿಯಾಗಲಿದೆಯೇ ಲಾಕ್ಡೌನ್?
ಕೆಲವು ವಾರಗಳ ಹಿಂದೆ ಕೋವಿಡ್ -19 ಪರಿಸ್ಥಿತಿ ಸುಧಾರಿಸಿದಾಗ ಮದುವೆ ಸೇರಿದಂತೆ ಮತ್ತಿತರ ಶುಭ ಸಮಾರಂಭಗಳಲ್ಲಿ ಕೆಲವು ನಿಯಮಗಳನ್ನು ಸಡಿಲಿಸಲಾಯಿತು - ಸಮಾರಂಭಗಳಲ್ಲಿ ಪಾಲ್ಗೊಳ್ಳಲು 50 ರಿಂದ 200 ಜನರಿಗೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಆದೇಶವನ್ನು ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದ್ದು ವಿವಾಹ ಸಂಬಂಧಿಸಿದ ಕೂಟಗಳ ಗಾತ್ರದ ಮಿತಿಯನ್ನು 200 ರಿಂದ 50 ಕ್ಕೆ ಮರಳಿ ತರಲು ನಿರ್ಧರಿಸಿದೆ. ಎಲ್-ಜಿ ಅನುಮೋದನೆಗಾಗಿ ಇಂದು ಈ ಪ್ರಸ್ತಾಪವನ್ನು ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಹೇಳಿದರು.
ದೆಹಲಿಯಲ್ಲಿ ಕರೋನಾ ಪ್ರಕರಣಗಳು ಏಕೆ ಹೆಚ್ಚಾಗಿವೆ?
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 10 ದಿನಗಳಲ್ಲಿ ಹೊಸ ಕರೋನಾವೈರಸ್ ಪ್ರಕರಣಗಳು ಬಹಳ ವೇಗವಾಗಿ ಹೆಚ್ಚಾಗಿದೆ. ದಿನಕ್ಕೆ 8000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಇವುಗಳಿಗೆ ಮುಖ್ಯ ಕಾರಣಗಳನ್ನು ಪಟ್ಟಿ ಮಾಡಲಾಗಿದೆ.
- ಶಾಪಿಂಗ್ನಲ್ಲಿ ನಿರ್ಲಕ್ಷ್ಯ
- ಹಬ್ಬಗಳ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಸಂದಣಿ
- ಕರೋನಾ ಪರೀಕ್ಷೆಯಲ್ಲಿ ಹೆಚ್ಚಳ
ದೆಹಲಿಯಲ್ಲಿ ತೀವ್ರ ಅಪಾಯದ ಮಟ್ಟ ತಲುಪಿದ ವಾಯುಮಾಲಿನ್ಯ
ಕೇಂದ್ರ ಗೃಹ ಸಚಿವಾಲಯದ ಪ್ರಸ್ತುತ ಮಾರ್ಗಸೂಚಿಗಳ ಪ್ರಕಾರ ಸ್ಥಳೀಯ ಲಾಕ್ಡೌನ್ ತರಹದ ನಿರ್ಬಂಧಗಳನ್ನು ವಿಧಿಸಲು ರಾಜ್ಯಗಳಿಗೆ ಕೇಂದ್ರ ಸಚಿವಾಲಯದ ಅನುಮೋದನೆ ಬೇಕು.