ಮದುವೆಗೆ ಒಂದು ದಿನಕ್ಕೂ ಮುನ್ನವೇ ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಐಜಿಪಿ ಪುತ್ರಿ

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ನಿವೃತ್ತ ಐಜಿಪಿ ಮಗಳು ಮದುವೆಗೂ ಮುನ್ನವೇ ಭಾನುವಾರದಂದು ಪಾಟ್ನಾದಲ್ಲಿನ ತಮ್ಮ ಮನೆಯ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Last Updated : Dec 9, 2018, 04:14 PM IST
ಮದುವೆಗೆ ಒಂದು ದಿನಕ್ಕೂ ಮುನ್ನವೇ ಆತ್ಮಹತ್ಯೆ ಮಾಡಿಕೊಂಡ ನಿವೃತ್ತ ಐಜಿಪಿ ಪುತ್ರಿ title=
photo:ANI

ಪಾಟ್ನಾ: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ನಿವೃತ್ತ ಐಜಿಪಿ ಮಗಳು ಮದುವೆಗೂ ಮುನ್ನವೇ ಭಾನುವಾರದಂದು ಪಾಟ್ನಾದಲ್ಲಿನ ತಮ್ಮ ಮನೆಯ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ವರದಿಗಳ ಪ್ರಕಾರ ಮೃತ ಮಹಿಳೆಯು ತನ್ನ ಅಪಾರ್ಟ್ಮೆಂಟ್ ಕಟ್ಟಡದ 14 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಆಕೆ ನಿವೃತ್ತ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಉಮಾ ಶಂಕರ್ ಸುಧಾಂಶು ಅವರ ಪುತ್ರಿ ಎಂದು ತಿಳಿದುಬಂದಿದೆ.

ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪೊಲೀಸ್ ತಂಡ ಸೇರಿದಂತೆ ಉನ್ನತ ಅಧಿಕಾರಿಗಳು ತಕ್ಷಣ ಘಟನೆ ಸ್ಥಳಕ್ಕೆ ಆಗಮಿಸಿ ತನಿಖೆಯನ್ನುಕೈಗೊಂಡಿದ್ದಾರೆ.ಮೃತಪಟ್ಟ ಮಹಿಳೆ ಸ್ಥಳದಲ್ಲಿ ಪೊಲೀಸರು  ಮೊಬೈಲ್ ಪೋನ್ ಒಂದನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಈ ಆತ್ಮಹತ್ಯೆಯ ವಿಚಾರವಾಗಿ ಯಾವುದೇ ರೀತಿಯ ಡೆಟ್ನೋಟ್ ಪೊಲೀಸರಿಗೆ ಇದುವರೆಗೂ ಲಭ್ಯವಾಗಿಲ್ಲ ಎನ್ನಲಾಗಿದೆ. 

ಈ ಘಟನೆ ಕುರಿತಾಗಿ ವರದಿಗಾರರೊಂದಿಗೆ ಮಾತನಾಡಿದ ಪಾಟ್ನಾ ಎಸ್ಪಿ ಮನು ಮಹಾರಾಜ್, '' ಇದು ಆತ್ಮಹತ್ಯೆ ಪ್ರಕರಣವಾಗಿದೆ, ನಾವು ಮೊಬೈಲ್ ಅನ್ನುವಶಪಡಿಸಿಕೊಂಡಿದ್ದೇವೆ. ಮೃತ ಮಹಿಳೆಯ ಕುಟುಂಬವು ಆಘಾತದ ಸ್ಥಿತಿಯಲ್ಲಿದೆ, ಆದ್ದರಿಂದನಾವು ಇನ್ನೂ ಅವರನ್ನು ವಿಚಾರಣೆಗೆ  ಒಳಪಡಿಸಿಲ್ಲ , ಮತ್ತು  ಯಾವುದೇ ಡೆತ್ ನೋಟ್ಕೂಡ ಕಂಡು ಬಂದಿಲ್ಲ ಆದ್ದರಿಂದ ಈ ವಿಚಾರವಾಗಿ ಇನ್ನಷ್ಟು ತನಿಖೆ ನಡೆಯುತ್ತಿದೆ ಎಂದು ಹೇಳಿದರು.

Trending News